ಶುರುವಿನಲ್ಲಿಯೇ ಸ್ಟಾರ್‌ ನಟನ ಜೊತೆಯಾಗುತ್ತಿದ್ದೀರಿ

ಖುಷಿ ಮತ್ತು ಹೆಮ್ಮೆ ಇದೆ. ಯಾವುದೇ ನಟಿಯಾದರೂ ಹೊಸ ಅವಕಾಶಗಳು ಸಿಗಬೇಕು, ಒಳ್ಳೆಯ ಪಾತ್ರಗಳು ಸಿಕ್ಕಬೇಕು ಎನ್ನುವ ಆಸೆ ಇರುತ್ತದೆ. ಇದೇ ಆಸೆ ನನ್ನದೂ ಕೂಡ. ನನ್ನ ಸಿಸ್ಟರ್‌ ಈ ಕತೆ ಕೇಳಿ, ಒಳ್ಳೆಯ ಪಾತ್ರ ಎಂದು ನನಗೆ ಹೇಳಿದಳು. ಒಂದು ಲೆಕ್ಕಕ್ಕೇ ಅವಳೇ ಇದನ್ನು ಫೈನಲ್‌ ಮಾಡಿದ್ದು. ನಾನಿನ್ನೂ ಪೂರ್ಣ ಕತೆ ಕೇಳಿಲ್ಲ. ಗಣೇಶ್‌ ಸರ್‌ ಜೊತೆ ನಟಿಸುವುದು ಸಂತೋಷದ ವಿಚಾರ. ನನ್ನ ಪಾತ್ರವೂ ಚೆನ್ನಾಗಿದೆ. ಹೀಗಾಗಿ ಒಪ್ಪಿಕೊಂಡಿದ್ದೇನೆ.

ಚೊಚ್ಚಲ ಸಿನಿಮಾ, ಚೊಚ್ಚಲ ಪಾತ್ರ ಹೇಗಿದೆ?

ನನ್ನದು ಪಕ್ಕಾ ಹೋಮ್ಲಿ ಕ್ಯಾರೆಕ್ಟರ್‌. ಸೀರಿಯಲ್‌ನಿಂದ ನನಗೆ ಒಂದು ಇಮೇಜ್‌ ಕ್ರಿಯೇಟ್‌ ಆಗಿದೆ. ಅದಕ್ಕೆ ಪೂರಕವಾಗಿ ಈ ಪಾತ್ರ ಇರಲಿದೆ. ಅಕ್ಟೋಬರ್‌ ಎರಡನೇ ವಾರದಿಂದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ.

ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ! 

ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದೀರಿ?

ನಾನೀಗ ಮೆಂಟಲಿ ಸಿದ್ಧವಾಗಿದ್ದೇನೆ. ಪಾತ್ರಕ್ಕಾಗಿ ಶ್ರದ್ಧೆಯಿಂದ ದುಡಿಯುತ್ತೇನೆ. ನನ್ನ ಪಾಲಿಗೆ ಇದು ತುಂಬಾ ದೊಡ್ಡ ಜವಾಬ್ದಾರಿ. ಸೀರಿಯಲ್‌ನಲ್ಲಿಯೂ ಇದೇ ಕಮಿಟ್‌ಮೆಂಟ್‌ ಇಟ್ಟುಕೊಂಡಿದ್ದಕ್ಕೆ ಜನ ನನ್ನನ್ನು ಗುರುತಿಸಿದರು. ಸಿನಿಮಾದಲ್ಲಿಯೂ ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ಇಷ್ಟುಚಿಕ್ಕ ಅನುಭವದಲ್ಲಿ ನನಗೆ ಅನ್ನಿಸಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದೇ ನಮ್ಮನ್ನು ಯಶಸ್ಸಿನ ಕಡೆಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದು.

ನೋಡ್ರಪ್ಪಾ! 'ಜೊತೆ ಜೊತೆಯಲಿ' ಅನುಸಿರಿಮನೆ ಸಣ್ಣ ಆಗೋಕೆ ಮಾಡುತ್ತಿರುವ ಕಸರತ್ತು 

ಸೀರಿಯಲ್‌ ಕತೆ ಏನು?

ಯಾವುದೇ ಕಾರಣಕ್ಕೂ ನಾನು ಸೀರಿಯಲ್‌ ಬಿಡುವುದಿಲ್ಲ. ಜೊತೆ ಜೊತೆಯಲಿ ಧಾರಾವಾಹಿ ಮುಂದೆ ತುಂಬಾ ಇಂಟರೆಸ್ಟಿಂಗ್‌ ಆಗಿದೆ. ಅದನ್ನು ಜನ ತುಂಬಾ ಇಷ್ಟಪಡುತ್ತಾರೆ. ಈ ಹಂತದಲ್ಲಿ ನಾನು ಸೀರಿಯಲ್‌ ಬಿಡುವ ಪ್ರಶ್ನೆಯೇ ಇಲ್ಲ. ಕಷ್ಟವಾದರೂ ಡೇಟ್ಸ್‌ ಮ್ಯಾಚ್‌ ಮಾಡಿಕೊಂಡು ಕೆಲಸ ಮಾಡುತ್ತೇನೆ. ನನಗೆ ಸೀರಿಯಲ್‌ ಜೊತೆಗೆ ಎಮೋಷನಲ್‌ ಟಚ್‌ ಇದೆ. ಸಾಕಷ್ಟುಜನ ಹೊಸ ನಟಿಯಾದರೂ ತುಂಬಾ ಚೆನ್ನಾಗಿ ನಟಿಸಿದ್ದೀಯಾ ಎನ್ನುತ್ತಾರೆ, ತಮ್ಮ ಮನೆ ಮಗಳು ಎನ್ನುವ ರೀತಿ ನೋಡಿದ್ದಾರೆ. ಹಾಗಾಗಿ ಇದನ್ನು ಕಂಪ್ಲೀಟ್‌ ಮಾಡಿಯೇ ಮಾಡುತ್ತೇನೆ.