ಎಲ್ಲವೂ ಅಂದುಕೊಂಡಂತಾದರೆ ನಯನತಾರ ನಾಯಕಿ ಆಗಿ ಬರುವುದು ಖಚಿತ ಎನ್ನುತ್ತಿವೆ ಮೂಲಗಳು. ಮತ್ತೊಂದೆಡೆ ಈ ಚಿತ್ರದ ಹೈದರಾಲಿ ಪಾತ್ರಕ್ಕೆ ಕಾಲಿವುಡ್‌ ನಟ ಶರತ್‌ ಕುಮಾರ್‌ ಆಯ್ಕೆ ಆಗಿದ್ದು, ಇವರ ಪಾತ್ರದ ಭಾಗದ ಚಿತ್ರೀಕರಣ ರಾಜಸ್ಥಾನದ ಅರಮನೆಗಳಲ್ಲಿ ನಡೆಯಲಿದೆ.

ದಿನಕ್ಕೆ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ ನಯನತಾರಾ ಸಹಾಯಕರು?

ಈ ಕುರಿತು ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಯಾವುದೇ ಗುಟ್ಟು ಕೊಡುತ್ತಿಲ್ಲ. ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಒಂದು ಹಂತದ ಚಿತ್ರೀಕರಣವೂ ಮುಗಿದಿದೆ. ಈ ಹಂತದಲ್ಲಿ ನಾಯಕಿ ಆಯ್ಕೆ ಫೈನಲ… ಮಾಡುವ ಹಂತದಲ್ಲಿದೆ ಚಿತ್ರತಂಡ. ಕನ್ನಡದ ಮಟ್ಟಿಗೆ ಇದು ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ಆಗಿದ್ದಕ್ಕೂ ಹಲವು ಕಾರಣಗಳಿವೆ.

ಪ್ರಚಾರಕ್ಕೆ ಬರಲ್ಲವಂತೆ, ಆದ್ರೆ ಅವಾರ್ಡ್‌ ಬೇಕು; ನಯನಾತಾರಾ ವಿರುದ್ಧ ಆಕ್ರೋಶ!

ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಒಂದೆಡೆಯಾದರೆ, ಮತ್ತೊಂದು ರಾಕ್‌ಲೈನ್‌ ಪ್ರೊಡಕ್ಷನ್‌ ಹೌಸ್‌ ನಿರ್ಮಾಣದ ಚಿತ್ರ ಎನ್ನುವುದು ಕೂಡ ಅದರ ಕುತೂಹಲದ ಅಂಶ. ಅದರ ಜತೆಗೆ ದರ್ಶನ್‌ ಜತೆಗೆ ಬಹು ಜನಪ್ರಿಯ ತಾರೆಯರೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲ ಕಾರಣಕ್ಕೆ ಈ ಸಿನಿಮಾ ಚಿತ್ರೀಕಣದ ಹಂತದಲ್ಲಿ ಸಾಕಷ್ಟುನಿರೀಕ್ಷೆ ಹುಟ್ಟಿಸುತ್ತಿದೆ. ಬಿ.ಎಲ…. ವೇಣು ಅವರ ಕಾದಂಬರಿ ಆಧರಿತ ಚಿತ್ರವಿದು ಎನ್ನುವುದು ಇನ್ನೂ ವಿಶೇಷ.

"