ಇದು ಕೊಲೆ ಆರೋಪಿ ದರ್ಶನ್ ಕೈ ಕಡಗದ ರಹಸ್ಯ: ನಾಲ್ಕು ದಶಕದಿಂದ ಕೈಯಿಂದ ಕಳಚಿರಲಿಲ್ಲ ಈ ಕಡಗ!
ರಕ್ಷಾ ಬಂಧನದಂದು ನಟ ದರ್ಶನ್ ಕೈಯಲ್ಲಿ ರಾಕಿ ಹತ್ತಾರು ರಾಕಿಗಳು ಕಾಣಬೇಕಿತ್ತು. ಆದ್ರೆ ಚಾಲೇಂಜಿಂಗ್ ಸ್ಟಾರ್ ಕೈಗೆ ಕೊಲೆ ಆರೋಪದ ರಕ್ತ ಮೆತ್ತಿಕೊಂಡಿದೆ. ಈ ರಾಕಿ ಹಬ್ಬದ ದಿನವೇ ಈ ಸ್ಟಾರ್ ಹೀರೋ ಕೈಯಲ್ಲಿದ್ದ ಕಡಗದ ಸ್ಟೋರಿಯೊಂದು ಈಗ ಭಾರಿ ಚರ್ಚೆ ಆಗ್ತಿದೆ.
ರಕ್ಷಾ ಬಂಧನದಂದು ನಟ ದರ್ಶನ್ ಕೈಯಲ್ಲಿ ರಾಕಿ ಹತ್ತಾರು ರಾಕಿಗಳು ಕಾಣಬೇಕಿತ್ತು. ಆದ್ರೆ ಚಾಲೇಂಜಿಂಗ್ ಸ್ಟಾರ್ ಕೈಗೆ ಕೊಲೆ ಆರೋಪದ ರಕ್ತ ಮೆತ್ತಿಕೊಂಡಿದೆ. ಈ ರಾಕಿ ಹಬ್ಬದ ದಿನವೇ ಈ ಸ್ಟಾರ್ ಹೀರೋ ಕೈಯಲ್ಲಿದ್ದ ಕಡಗದ ಸ್ಟೋರಿಯೊಂದು ಈಗ ಭಾರಿ ಚರ್ಚೆ ಆಗ್ತಿದೆ. ಹಾಗಾದ್ರೆ ಏನದು ದಚ್ಚು ಮತ್ತು ಕೈ ಕಗಡದ ಕಥೆ..? ಇಲ್ಲಿದೆ ನೋಡಿ. ಕೆಲ ವ್ಯಕ್ತಿಗಳ ಚರಿಷ್ಮಾ ಹೇಗಿರುತ್ತೆ ಅಂದ್ರೆ ಅವರು ಹುಟ್ಟುಹಾಕಿದ ಟ್ರೆಂಡ್ ಕಾಲ ಕಾಲಕ್ಕೂ ಉಳಿದಿರುತ್ತೆ. ಅವರ ಟ್ರೆಂಡ್ಅನ್ನ ಅಪ್ಪಟ ಅಭಿಮಾನಿಗಳು ಜೀವ ಇರೋ ವರೆಗೂ ಫಾಲೋ ವಾಡ್ತಾರೆ. ಅಂತಹ ವ್ಯಕ್ತಿಗಳಲ್ಲಿ ಸಾಹಸಿಂಹ ಡಾಕ್ಟರ್ ವಿಷ್ಣುವರ್ಧನ್ ಕೂಡ ಒಬ್ರು.
ಅವರು ಹುಟ್ಟುಹಾಕಿದ ಟ್ರೆಂಡ್ ಕೈ ಕಡಗ. ವಿಷ್ಣು ಕೈಯಲ್ಲಿ ಈ ಕಡಗ ಇದ್ರೇನೆ ಭೂಷಣ. ಅವರು ಕೈ ಎತ್ತಿ ಕಡಗ ಜಾರಿಸಿ ಹಂಗೆ ಡೈಲಾಗ್ ಬಿಟ್ರೇನೆ ಫ್ಯಾನ್ಸ್ಗೆ ಹಬ್ಬ. ವಿಷ್ಣು ಧರಿಸುತ್ತಿದ್ದ ಕಡಗದ ರೀತಿಯೇ ಅವರ ಫ್ಯಾನ್ಸ್ ಕೂಡ ಇಂದಿಗೂ ಹಾಕಿಕೊಳ್ತಾರೆ. ವಿಷ್ಣು ಕೈ ಕಡಗದ ಕಥೆ ಹೇಳೋಕೆ ಕಾರಣ ಏನ್ ಗೊತ್ತಾ.? ಕೊಲೆ ಆರೋಪ ಹೊತ್ತು ಕೈಗೆ ರಕ್ತ ಹಚ್ಚಿಕೊಂಡು ಜೈಲು ಸೇರಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಯಲ್ಲೂ ಕಡಗ ಇರೋದು. ಕೋಟಿಗೊಬ್ಬ ವಿಷ್ಣುವರ್ಧನ್ ರೀತಿಯೆ ನಟ ದರ್ಶನ್ ಕೈಗೆ ಕಡಗ ಹಾಕಿಕೊಂಡಿದ್ದಾರೆ. ದರ್ಶನ್ ಕೈಯಲ್ಲಿರುವ ಕಡಗದ ಬಗ್ಗೆ ಅನೇಕ ಊಹಾಪೊಹಗಳಿವೆ.
ಇದು ವಿಷ್ಣುವರ್ಧನ್ ಕೊಟ್ಟ ಕಡಗ. ಅಂಬರೀಶ್ ಉಡುಗೊರೆಯಾಗಿ ನೀಡಿದ ಕಡಗ ಅನ್ನೋ ಮಾತುಗಳಿದ್ವು. ಆದ್ರೆ ದರ್ಶನ್ ಕೈ ಕಡಗದ ಹಿಂದೆ ದೊಡ್ಡ ಕತೆಯೊಂದಿದೆ. ಅದು ನಾಲ್ಕು ದಶಕದ ಹಿಂದಿನ ಕತೆ. ದರ್ಶನ್‌ಗೆ ಈ ಕಡಗದ ಮೇಲೆ ಅದೆಂಥಾ ಪ್ರೀತಿ, ನಂಬಿಕೆ ಗೊತ್ತಾ.? ಮೈಸೂರಿನಲ್ಲಿ ಕಾರು ಅಪಘಾತ ಆದಗ ತಮ್ಮ ಕೈಗೆ ಬಲವಾದ ಗಾಯವಾಗಿತ್ತು. ಆಗ್ಲು ಈ ಕಡಗವನ್ನ ದರ್ಶನ್ ತೆಗೆಯಲಿಲ್ಲ. ಅಷ್ಟಕ್ಕು ದರ್ಶನ್‌ಗೆ ಈ ಕಡಗದ ಮೇಲೆ ಯಾರಿಷ್ಟು ಹುಚ್ಚು ಪ್ರೀತಿ ಗೊತ್ತಾ.? ದರ್ಶನ್ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದಾಗ 40 ವರ್ಷದ ಹಿಂದೆ ಪಾಂಜಾಬಿ ಕುಟುಂಬವೊಂದು ತನಗೆ ಗಂಡು ಮಗ ಇಲ್ಲ ಅಂತ ಅಮೃತ್ ಸರದ ಗೋಲ್ಡನ್ ಟೆಂಪಲ್ನಿಂದ ಈ ಕಡಗವನ್ನ ತಂದುಕೊಟ್ಟಿದ್ರಂತೆ.
ಮನೆಯೂಟಕ್ಕೆ ಕಾಯುತ್ತಲೇ ಇದ್ದಾನೆ ಕಿಲ್ಲಿಂಗ್ ಸ್ಟಾರ್: ದರ್ಶನ್‌ಗೆ ಜೈಲೂಟದಲ್ಲಿ ಪ್ರಾಬ್ಲಂ ಏನು?
ಅಂದಿನಿಂದ ದಚ್ಚು ತನ್ನ ಬಲಕೈಗೆ ಕಡಗ ಹಾಕಿಳ್ಳೋದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ. ಕೈಯಲ್ಲಿ ಈ ಕಡಗ ಇಲ್ಲದಿದ್ದರೆ ದರ್ಶನ್‌ಗೆ ಅದೇನೋ ಕಳೆದುಕೊಂಡಿದ್ದೇನೆ ಅನ್ನೋ ಭಾವನೆ ಬರುತ್ತಂತೆ. ದರ್ಶನ್ ಬಲಗೈ ಕಡಗ ಇಲ್ಲದೆ ಕಾಲಿ ಆಗಿದ್ದನ್ನ ಇದುವರೆಗೂ ಯಾರೂ ನೋಡೇ ಇಲ್ಲ. ಕೊಲೆ ಆದ ರೇಣುಕಾಸ್ವಾಮಿ ರಕ್ತ ಕೂಡ ಈ ಕಡಗಕ್ಕೆ ಅಂಟಿದೆ. ರೇಣುಕಾಸ್ವಾಮಿಗೆ ಹೊಡೆಯೂವಾಗ್ಲು ದರ್ಶನ್ ಕೈಯಲ್ಲಿ ಈ ಕಡಗ ಜಳಪಿಸಿತ್ತು. ಈಗ ಜೈಲಲ್ಲಿರೋ ದಾಸನ ಕೈಯಲ್ಲಿ ಕಡಗ ಇಲ್ಲ. ಯಾಕಂದ್ರೆ ಜೈಲಿನ ಒಳಗೆ ಹೋಗುವಾಗ ಖೈದಿ ಬಳಿ ಇರೋ ಎಲ್ಲಾ ವಸ್ತುಗಳನ್ನ ಜೈಲು ಅಧಿಕಾರಿಗಳು ಬಿಚ್ಚಿಸುತ್ತಾರೆ. ಹೀಗಾಗಿ ದರ್ಶನ್ ಕೈ ಈಗ ಕಾಲಿ ಕಾಲಿ ಇದೆ. ಬರೀ ಕೈ ಮಾತ್ರ ಅಲ್ಲ ದರ್ಶನ್ ಖುಷಿಯೇ ಕಾಲಿಯಾಗಿದೆ ಬಿಡಿ.