Asianet Suvarna News Asianet Suvarna News

ರಾಘು ಸ್ಪಂದನಾ ಪ್ರೀತಿಗೆ ಕಣ್ಣು ಬಿದ್ದಿದೆ: ಸಾವಿನ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ವಿಶಾಲ್ ಹೆಗ್ಡೆ

ಯುಟ್ಯೂಬ್‌ನಲ್ಲಿ ಹರಿದು ಬಂತು ಕಾಮೆಂಟ್ಸ್‌. ದಯವಿಟ್ಟು ಯೋಚನೆ ಮಾಡಿ ಕಾಮೆಂಟ್ ಮಾಡಿ ಎಂದು ಮನವಿ ಮಾಡಿಕೊಂಡ ನಟ ವಿಶಾಲ್...
 

Think before you comments Actor Vishal Hegde talks about Spandana Vijay Raghavendra vcs
Author
First Published Aug 21, 2023, 10:28 AM IST

ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಟ ವಿಶಾಲ್ ಹೆಗ್ಡೆ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ದಿನ ವಿಡಿಯೋ, ಟ್ರಿಪ್, ಫ್ಯಾಮಿಲಿ ಮತ್ತು ಲೈಫ್‌ಸ್ಟೈಲ್‌ ಬಗ್ಗೆ ವಿಡಿಯೋ ಅಭಿಮಾನಿಗಳಿಗೂ ಇನ್ನೂ ಹತ್ತಿರವಾಗಿದ್ದಾರೆ. ವಿಶಾಲ್ ಹೆಗ್ಡೆ ಮತ್ತು ವಿಜಯ್ ರಾಘವೇಂದ್ರ ಸಿಕ್ಕಾಪಟ್ಟೆ ಕ್ಲೋಸ್ ಸ್ನೇಹಿತರು. ಹೀಗಾಗಿ ಸ್ಪಂದನಾ ಜೊತೆ ವಿಶಾಲ್ ಫ್ಯಾಮಿಲಿ ಅದ್ಭುತ ಬಾಂಡ್ ಹೊಂದಿದ್ದಾರೆ. ಕಳೆದ ವರ್ಷ ಫ್ರೆಂಡ್‌ಶಿಪ್‌ ಡೇ ದಿನ ವಿಶಾಲ್ ಅಪ್ಲೋಡ್ ಮಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ವಿಡಿಯೋ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು ವಿಶಾಲ್ ಬೇಸರದಲ್ಲಿದ್ದಾರೆ. 

'ನಾನು ಮಾತನಾಡುತ್ತಿರುವುದು ಸ್ಪಂದನಾ ಬಗ್ಗೆ ನನ್ನ ಸಚ್ಚಮ್ಮ ಬಗ್ಗೆ. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬಗ್ಗೆ ನಾನು ಇದುವರೆಗೂ ಅವರನ್ನು ಸ್ಪಂದನಾ ಎಂದಿಲ್ಲ ಅವ್ರು ನನ್ನನ್ನು ಅಚ್ಚು ಅಂತಾರೆ ನಾನು ಸಚ್ಚು ಎಂದು ಕರೆಯುವೆ. ಅನೇಕರು ಸ್ಪಂದನಾ ಜೊತೆಗಿರುವ ಹಳೆ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದೀರಿ ಕೆಲವರು ಧೈರ್ಯ ಹೇಳಿದ್ದೀರಿ ಇನ್ನೂ ಕೆಲವರ ಕಾಮೆಂಟ್ ಬೇಸರವಾಗಿದೆ. ಪ್ರತಿ ಸೋಮವಾರ ಒಂದು ವಿಡಿಯೋ ಅಪ್ಲೋಡ್ ಮಾಡುವೆ ಸ್ಪಂದನಾ ಅಗಲಿದ್ದು ಭಾನುವಾರ ಹೀಗಾಗಿ ಸೋಮವಾರ ವಿಡಿಯೋ ಹಾಕಿಲ್ಲ ಆದರೆ ಕೆಲವರು ನನ್ನ ಹಳೆ ವಿಡಿಯೋ ನೋಡಿ ಕೆಟ್ಟ ಕಾಮೆಂಟ್ ಮಾಡುತ್ತಿದ್ದೀರಿ. ನಾನು ಯಾರಿಗೂ ಕ್ಲಾರಿಟಿ ಕೊಡುವ ಅಗತ್ಯವಿಲ್ಲ. ನಾನು ಉತ್ತರ ಕೊಡುತ್ತಿದ್ದಂತೆ ಕಾಮೆಂಟ್ ಡಿಲೀಟ್ ಮಾಡಿದ್ದಾರೆ. ದಯವಿಟ್ಟು ಕಾಮೆಂಟ್ ಮಾಡುವ ಮುನ್ನ ಯೋಚನೆ ಮಾಡಿ' ಎಂದು ವಿಶಾಲ್ ಮಾತನಾಡಿದ್ದಾರೆ. 

ಸ್ಪಂದನಾ...ನಾನೆಂದು ನಿನ್ನವ: ಭಾವುಕ ಸಾಲುಗಳನ್ನು ಬರೆದ ವಿಜಯ್ ರಾಘವೇಂದ್ರ

'ರಾಘು ಜೀವನಕ್ಕೆ ಸ್ಪಂದನಾ ಎಂಟ್ರಿ ಕೊಡುತ್ತಿದ್ದಂತೆ ನನ್ನ ಜೀವನಕ್ಕೂ ಎಂಟ್ರಿ ಕೊಟ್ಟರು. ಭೇದಭಾವ ಇಲ್ಲದೆ ಪ್ರತಿಯೊಬ್ಬರನ್ನು ಸಮವಾಗಿ ನೋಡುವ ವ್ಯಕ್ತಿ ಸ್ಪಂದನಾ. ನನ್ನ ಫೇವರೆಟ್‌ ಫ್ರೆಂಡ್ ಸ್ಪಂದನಾ. ಪ್ರತಿಯೊಬ್ಬ ಫಾಲೋವರ್ಸ್‌ ಕಾಮೆಂಟ್ ಮಾಡುವ ಮುನ್ನ ದಯವಿಟ್ಟು ಯೋಜನೆ ಮಾಡಿ. ಸ್ಪಂದನಾ ಸ್ನೇಹಿತೆ ಮಾತ್ರವಲ್ಲ ಆಕೆ ನನ್ನ ಕುಟುಂಬದ ರೀತಿ ಆಕೆ ಇಲ್ಲ ಅಂತ ಹೇಳುವುದಕ್ಕೆ ಸಂಕಟ ಆಗುತ್ತಿದೆ. ರಾಘುಗೆ ನಿಮ್ಮ ಧೈರ್ಯ ಅಗತ್ಯವಿದೆ. ನಿಜ ಹೇಳಬೇಕು ಅವರಿಬ್ಬರ ಪ್ರೀತಿಗೆ ದೃಷ್ಠಿ ಆಗಿದೆ ಅನೇಕರು ಕಾಮೆಂಟ್ ಮಾಡುತ್ತೀರಿ....ರಾಘು ಕೂಡ ಪ್ರತಿ ದಿನ ಚಿನ್ನಾ ಚಿನ್ನಾ ಅಂತಾನೆ ಸ್ಪಂದನಾಳನ್ನು ಕರೆಯುವುದು. ರಾಘು ಪತ್ನಿ ಆಗಿ ಬಂದ್ಮೇಲೆ ನನಗೆ ಒಳ್ಳೆ ಸ್ನೇಹಿತೆಯಾಗಿ ಬಿಟ್ಟರು' ಎಂದು ವಿಶಾಲ್ ಹೇಳಿದ್ದಾರೆ.   

ಸೈಲೆಂಟಾಗಿ ಡೈರಿ ಬರೆದಿಟ್ಟ ಸ್ಪಂದನಾ; ಗುಟ್ಟು ಬಿಚ್ಚಿಟ್ಟ ಸೋದರಮಾವ

'ಸ್ಪಂದನಾಗೆ ಹೀಗಾಗಿದ್ದು ನಿಜವೇ ಹಾಗೆ ಆಗಿದ್ದು ಹೌದಾ ಎಂದು ಅನೇಕರು ಪ್ರಶ್ನೆ ಮಾಡಿದ್ದೀರಿ. ಅವರ ಕುಟುಂಬಸ್ಥರು ಸ್ಪಷ್ಟನೆ ಕೊಟ್ಟಿದ್ದಾರೆ ಹೀಗಾಗಿ ನಾನು ಏನೂ ಹೇಳುವ ಅಗತ್ಯವಿಲ್ಲ. ಸ್ಪಂದನಾ ಎಲ್ಲೇ ಇದ್ದರೂ ಅಕೆ ನೆಮ್ಮದಿಯಾಗಿ ಖುಷಿಯಿಂದ ಇರಬೇಕು ಆಕೆ ಆತ್ಮಕ್ಕೆ ಶಾಂತಿ ಸಿಗಬೇಕು. ನಾವು ಎಷ್ಟೇ ಫ್ರೆಂಡ್ಸ್‌ ಇದ್ದರೂ ಫ್ಯಾಮಿಲಿ ಇದ್ದರೂ ರಾಘುನೇ ಧೈರ್ಯ ತೆಗೆದುಕೊಂಡು ಇದನ್ನು ಎದರಿಸಬೇಕು. ನಮ್ಮನ್ನು ಬಿಟ್ಟು ಸ್ಪಂದನಾ ಹೋಗಿಲ್ಲ ನಮಗೆ ಧೈರ್ಯ ಕೊಡುತ್ತಾರೆ ಈಗಲೂ ಆಕೆ ಟ್ರಿಪ್ ಹೀಗಿದ್ದಾಳೆ ಅನಿಸುತ್ತದೆ' ಎಂದಿದ್ದಾರೆ ವಿಶಾಲ್.


 

Follow Us:
Download App:
  • android
  • ios