ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದು ಒಂದೂವರೆ ತಿಂಗಳಾಗಿದೆ. ಜೀವನದಲ್ಲಿ ಎಂಟ್ರಿ ಕೊಟ್ಟ 3ನೇ ವ್ಯಕ್ತಿಯೇ ಡಿವೋರ್ಸ್​ಗೆ ಕಾರಣ ಎಂದಿದ್ದೇಕೆ ಅವರು? 

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಮತ್ತು ಗಾಯಕ ಚಂದನ್​ ಶೆಟ್ಟಿ ಡಿವೋರ್ಸ್​ ವಿಷಯ ಸ್ವಲ್ಪ ತಣ್ಣಗಾಗುತ್ತಾ ಬಂದಿದೆ. ಇವರಿಬ್ಬರೂ ಒಂದೇ ದಿನದಲ್ಲಿ ಡಿವೋರ್ಸ್​ ಪಡೆದು ಎಲ್ಲರಿಗೂ ಶಾಕ್​ ಹುಟ್ಟಿಸಿದವರು. ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಷಯ ಎಲ್ಲೆಡೆ ವೈರಲ್​ ಆಗುತ್ತಲೇ ಅವರು ಡಿವೋರ್ಸ್​ ಪಡೆದು ಆಗಿಹೋಗಿತ್ತು. ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ಅಡಿಯಂತೆ ಯಾವುದೇ ಗಲಾಟೆ ಇಲ್ಲದೇ, ಪರಸ್ಪರ ಹೊಂದಾಣಿಕೆ ಮೇರೆಗೆ ಯಾವುದೇ ರೀತಿಯ ಕಚ್ಚಾಟಗಳು ಇಲ್ಲದಂತೆ ವಿಚ್ಛೇದನ ಪಡೆದು ಒಂದು ಕಡೆ ಎಲ್ಲರಿಗೂ ಮಾದರಿಯಾದರೂ, ಇವರಿಬ್ಬರ ಡಿವೋರ್ಸ್​ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಂತೂ ನಿಜ. ಪರಸ್ಪರ ಹೊಂದಾಣಿಕೆ ಇರಲಿಲ್ಲ, ಮಗುವಿಗಾಗಿ ಜಗಳವಾಗ್ತಿತ್ತು, ಇಬ್ಬರ ನಡುವೆ ಮೂರನೆಯ ವ್ಯಕ್ತಿ ಪ್ರವೇಶ ಮಾಡಿದ್ರು, ಆತನಿಂದ ಹೀಗೆ ಆಯ್ತು, ಈತನಿಂದ ಹೀಗೆ ಆಯ್ತು... ಹೀಗೆ ಇವರಿಬ್ಬರ ಡಿವೋರ್ಸ್​ಗೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆಗಳು ಬರುತ್ತಲೇ ಇವೆ.

ಇದಾಗಲೇ ಚಂದನ್​ ಶೆಟ್ಟಿ, ತಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ, ಬೇರೆ ಬೇರೆ ವಿಷಯಗಳಲ್ಲಿ ಪರಸ್ಪರ ಬೇರೆ ಬೇರೆ ರೀತಿಯ ನಿಲುವು ಇದ್ದುದರಿಂದ ಡಿವೋರ್ಸ್​ ಪಡೆದುಕೊಂಡ್ವಿ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿಚ್ಛೇದನಕ್ಕೆ ಮೂರನೆಯ ವ್ಯಕ್ತಿಯೇ ಕಾರಣ ಎನ್ನುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ! ಹೌದು. ತಮ್ಮಿಬ್ಬರ ಡಿವೋರ್ಸ್​ ಬಗ್ಗೆ ಒಂದೂವರೆ ತಿಂಗಳ ಬಳಿಕ ಮನಬಿಚ್ಚಿ ಮಾತನಾಡಿರುವ ಚಂದನ್​ ಶೆಟ್ಟಿ ಅವರು, ಎಲ್ಲರ ಜೀವನದಲ್ಲಿಯೂ ಹೆಚ್ಚಾಗಿ ಮೂರನೆಯ ವ್ಯಕ್ತಿಯ ಪ್ರವೇಶದಿಂದಲೇ ವಿಚ್ಛೇದನ ಆಗುವುದು ನಿಜ ಎನ್ನುತ್ತಲೇ ಆ ಮೂರನೆಯ ವ್ಯಕ್ತಿಯ ಕುರಿತು ಅದ್ಭುತವಾಗಿ ವಿವರಣೆ ನೀಡಿದ್ದಾರೆ.

ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?

ಇದಕ್ಕೂ ಮೊದಲು, ಚಂದನ್​ ಶೆಟ್ಟಿಯವರು, ಒತ್ತಡದಿಂದ ಹೊರಬರಲು ಡಿವೋರ್ಸ್​ ಪಡೆದುಕೊಂಡ್ವಿ. ಇದನ್ನು ಬಿಟ್ಟು ಬೇರೆ ರೀಸನ್​ ಇಲ್ಲ. ಇಬ್ಬರ ನಡುವೆ ಹೊಂದಾಣಿಕೆ ಆಗಲಿಲ್ಲ. ಹೊಂದಾಣಿಕೆ ಮಾಡಿಕೊಳ್ಳಲು ತುಂಬಾ ಪ್ರಯತ್ನ ಪಟ್ವಿ. ನಾನು ಮತ್ತು ಅವರು (ನಿವೇದಿತಾ) ಇಬ್ಬರೂ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಮನಸ್ಸಿಗೆ ಖುಷಿ ಇಲ್ಲ ಎಂದ ಮೇಲೆ ಒಟ್ಟಿಗೇ ಬಾಳಿ ಪ್ರಯೋಜನ ಇಲ್ಲ ಎಂದು ಅರಿತೇ ಈ ನಿರ್ಧಾರಕ್ಕೆ ಬಂದ್ವಿ ಎಂದಿದ್ದಾರೆ. ಇದೇ ವೇಳೆ ಮೂರನೆಯ ವ್ಯಕ್ತಿಗಳ ಮಾತು ಕೇಳಿಕೊಂಡು ಅವರು ಕಿವಿ ಊದಿದ್ದರಿಂದ ನಾನು ವಿಚ್ಛೇದನ ಕೊಟ್ಟೆ ಎನ್ನುವ ಮಾತು ಸರಿಯಲ್ಲ. ಯಾರದ್ದೋ ಮಾತು ಕೇಳಿಕೊಂಡು ಇಂಥ ನಿರ್ಧಾರಕ್ಕೆ ಬರುವವನಲ್ಲ ಎನ್ನುತ್ತಲೇ ಇದೇ ಸಂದರ್ಶನದಲ್ಲಿ ವಿಚ್ಛೇದನಕ್ಕೆ ಮೂರನೆಯ ವ್ಯಕ್ತಿಯೂ ಕಾರಣ ಎಂದು ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.

 ಹೌದು. ಪ್ರತಿಯೊಬ್ಬರ ಜೀವನದಲ್ಲಿಯೂ ಡಿವೋರ್ಸ್​ಗೆ, ಪತಿ-ಪತ್ನಿ ನಡುವೆ ಬಿರುಕು ಮೂಡಲು ಮೂರನೆಯ ವ್ಯಕ್ತಿಯೇ ಕಾರಣ. ಇದು 100 ಪರ್ಸೆಂಟ್​ ನಿಜ. ಆದರೆ ಆ ಮೂರನೆಯ ವ್ಯಕ್ತಿ ಯಾರು ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಆ ವ್ಯಕ್ತಿ ನಮ್ಮೊಳಗೇ ಇರಬಹುದು, ಅದು ನಮ್ಮ ಮನಸ್ಸೇ ಆಗಿರಬಹುದು. ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಎನ್ನುವ ಮೂಲಕ ತಮ್ಮ ಜೀವನದಲ್ಲಿ ಎಂಟ್ರಿ ಕೊಟ್ಟಿರೋ ಆ ಮೂರನೆಯ ವ್ಯಕ್ತಿ ಯಾರು ಎಂದು ಈ ಮೂಲಕ ಹೇಳಿದ್ದಾರೆ. ಇದಕ್ಕೆ ಇನ್ನಷ್ಟು ಎಕ್ಸ್​ಪ್ಲನೇಷನ್​ ಕೊಟ್ಟಿರೋ ಚಂದನ್​ ಅವರು, ನೋಡಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಎರಡೆರಡು ಶೇಡ್​ಗಳು ಇರುತ್ತವೆ. ಒಳಗೆ ಒಂದು, ಹೊರಗೆ ಒಂದು ಇರಬಹುದು ಅಥವಾ ಮನೆಯಲ್ಲಿ ಒಂದು, ಹೊರಗಡೆ ಒಂದು ಇರಬಹುದು. ಆ ಶೇಡ್​ನಲ್ಲಿ ಒಂದು ಮೂರನೆಯ ವ್ಯಕ್ತಿ ಆಗಿರಬಹುದು. ಪ್ರತಿಯೊಂದು ವಿಚ್ಛೇದನದ ಹಿಂದೆಯೂ ಇದೇ ಮೂರನೆಯ ವ್ಯಕ್ತಿ ಎಂಟ್ರಿಕೊಟ್ಟಾಗಲೇ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ ಎಂದಿದ್ದಾರೆ. 

ಚಂದನ್​ ಶೆಟ್ಟಿ ಮತ್ತೊಂದು ಮದ್ವೆಯಾಗ್ತಿದ್ದಾರಾ? ಕಾರಿನ ವಿಷಯ ಹೇಳುತ್ತಲೇ ಮನದಾಳದ ಮಾತು ಬಿಚ್ಚಿಟ್ಟ ಗಾಯಕ