Asianet Suvarna News

ದಪ್ಪಗಿದ್ದೀನಿ, ಕಪ್ಪಗಿದ್ದೀನಿ, ಏನಿವಾಗ; ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಪ್ರಿಯಾಮಣಿ!

ತನ್ನ ದಿಟ್ಟ ಮಾತು, ವರ್ತನೆಗಳಿಂದಲೇ ಗಮನ ಸೆಳೆಯುವ ನಟಿ ಪ್ರಿಯಾಮಣಿ ಇದೀಗ ಬಾಡಿ ಶೇಮಿಂಗ್ ವಿರುದ್ಧ ಸಿಡಿದೆದ್ದಿದ್ದಾರೆ. 

The Family Man fame Priyamani opens up on trolls commenting on her skin tone and body vcs
Author
Bangalore, First Published Jun 14, 2021, 9:57 AM IST
  • Facebook
  • Twitter
  • Whatsapp

ಬೆಂಗಳೂರಿನ ಈ ಬೆಡಗಿ ಸದ್ಯ ಜನಪ್ರಿಯ ವೆಬ್ ಸೀರೀಸ್ ‘ಫ್ಯಾಮಿಲಿ ಮ್ಯಾನ್ 2’ ನಟನೆಯ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಸೋಷಿಯಲ್ ಮೀಡಿಯಾದಲ್ಲಿ ಕೆಲವರು ನನ್ನನ್ನು ‘ನೀವು ಬಹಳ ದಪ್ಪಗಿದ್ದೀರಿ’,‘ನಿಮ್ಮ ಬಣ್ಣ ಕಪ್ಪಾಗಿದೆ, ಚೆನ್ನಾಗಿಲ್ಲ’, ‘ನೀವು ಆಂಟಿ ಥರ ವಯಸ್ಸಾದವರಂತೆ ಕಾಣ್ತೀರಿ’ ಅಂತೆಲ್ಲ ಕಮೆಂಟ್ ಮಾಡಿದ್ದರು’ ಎಂದು ಪ್ರಿಯಾಮಣಿ ಹೇಳಿದ್ದಾರೆ.

ನಟಿ ವಿದ್ಯಾ ಬಾಲನ್ ಹಾಗೂ ಪ್ರಿಯಾಮಣಿ ಸಂಬಂಧಿಕರು; ಹೇಗೆ ಗೊತ್ತಾ? 

‘ಹಾಗೆ ನೋಡಿದರೆ ನಾನೀಗ ಅಷ್ಟೊಂದು ದಪ್ಪಗಿಲ್ಲ. ಈ ಹಿಂದೆ 68 ಕೆಜಿಯವರೆಗೂ ತೂಕ ಹೊಂದಿದ್ದೆ. ಆಗಲೂ ಹೀಗೇ ಕಾಣುತ್ತಿದ್ದೆ. ಆಮೇಲೆ ಸಣ್ಣಗಾದೆ. ಆಗ ಯಾಕೆ ಇಷ್ಟೊಂದು ಸಣ್ಣಗಾಗಿದ್ದು ಅಂತ ಪ್ರಶ್ನೆ ಮಾಡಿದ್ದರು. ಈಗ ನೀನು ದಪ್ಪಗೆ ಕಾಣ್ತೀಯ ಅಂತಿದ್ದಾರೆ. ಹಾಗಿದ್ದರೆ ನಾನು ಹೇಗಿರಬೇಕು ನೀವೇ ಹೇಳಿ. ಇನ್ನೊಂದು ಸನ್ನಿವೇಶದಲ್ಲಿ ನೀವು ಕಪ್ಪಗಿದ್ದೀರಿ, ಚೆನ್ನಾಗಿ ಕಾಣಿಸ್ತಿಲ್ಲ ಅಂತ ಒಂದಿಷ್ಟು ಕಮೆಂಟ್‌ಗಳು.

ಹೌದು, ನಾನು ಬ್ಲ್ಯಾಕ್ ಬ್ಯೂಟಿ. ಕಪ್ಪು ಸುಂದರ ಬಣ್ಣ. ನಾನು ಆ ಬಣ್ಣದವಳಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ, ಅದ್ರಲ್ಲೇನು ತಪ್ಪು?’ ಎಂದಿರುವ ನಟಿ ಬಾಡಿ ಶೇಮಿಂಗ್ ಮಾಡುವವರ ವಿರುದ್ಧ ಸಿಡಿದೆದ್ದಿದ್ದಾರೆ. ಪ್ರತಿಭೆಯನ್ನು ಗುರುತಿಸಿ, ಬಾಡಿ ಶೇಮಿಂಗ್ ಬಿಡಿ ಅಂತ ಕಿವಿಮಾತು ಹೇಳಿದ್ದಾರೆ.

Follow Us:
Download App:
  • android
  • ios