ನಿರ್ದೇಶಕ ಭಗವಾನ್, ಡಾ. ರಾಜ್ ಜೊತೆಗಿನ ಚಿತ್ರಕ್ಕೆ ಜೂಲಿ ಲಕ್ಷ್ಮಿಯವರನ್ನು ಆಯ್ಕೆ ಮಾಡಲು ಮನೆಗೆ ಹೋದಾಗ, "ಸ್ವಿಮ್‌ಸೂಟ್ ದೃಶ್ಯವಿದೆ" ಎಂದಾಗ, ಲಕ್ಷ್ಮಿ ತಮ್ಮ ಲಂಗ ಮೇಲೆತ್ತಿ "ತೊಡೆ ಚೆನ್ನಾಗಿದೆಯಾ?" ಎಂದು ಕೇಳಿದರಂತೆ. ಇದು ಲಕ್ಷ್ಮಿಯವರ ಮುಗ್ಧತೆ ಮತ್ತು ಸಿನಿಮಾ ಪ್ರೀತಿಯನ್ನು ತೋರಿಸುತ್ತದೆ. ಪಂಚಭಾಷಾ ತಾರೆಯಾದ ಲಕ್ಷ್ಮಿ, ದಕ್ಷಿಣ ಭಾರತದ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ.
ಇದು ನಟಿ ಜೂಲಿ ಲಕ್ಷ್ಮಿ (Julie Lakshmi) ಕಥೆ. ಇದನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿರುವ ಮಹಾನುಭಾವರು ಕನ್ನಡದ ಹಿರಿಯ ನಿರ್ದೇಶಕ ಭಗವಾನ್. ಅಂದು ಡಾ ರಾಜ್‌ಕುಮಾರ್ ಚಿತ್ರದ ನಾಯಕಿ ಪಾತ್ರಕ್ಕಾಗಿ ನಟಿ ಜೂಲಿ ಲಕ್ಷ್ಮೀ ಅವರನ್ನು ಕೇಳಲು ನಿರ್ದೇಶಕರಾದ ಭಗವಾನ್ ಅವರು ನಟಿ ಲಕ್ಷ್ಮಿಯವರ ಮನೆಗೆ ಹೋಗಿದ್ದರಂತೆ. ಕಾನ್ವೆಂಟಿಗೆ ಹೋಗಿದ್ದ ಲಕ್ಷ್ಮೀಯವರು ವಾಪಸ್ ಮನೆಗೆ ಬರೋದನ್ನೇ ಕಾಯುತ್ತಿದ್ದರು ಭಗವಾನ್.

ಸ್ಕೂಲ್‌ನಿಂದ ಯೂನಿಫಾರಂನಲ್ಲೇ ಮನೆಗೆ ಬಂದ ಲಕ್ಷ್ಮೀಯವರಿಗೆ ಭಗವಾನ್ ಅವರು ಬಂದ ಸಮಾಚಾರ ತಿಳಿಸುತ್ತ, 'ನೀವು ಡಾ ರಾಜ್‌ಕುಮಾರ್ ಸಿನಿಮಾದಲ್ಲಿ ನಟಿಸ್ತೀರಾ' ಅಂತ ಕೇಳಲು ನಟಿ ಲಕ್ಷ್ಮಿ ಅವರು ಒಪ್ಪಿಗೆ ಸೂಚಿಸುತ್ತಾರೆ. ಬಳಿಕ, ಭಗವಾನ್ ಅವರು 'ಜೇಮ್ಸ್ ಬಾಂಡ್ ಸಿನಿಮಾ ಇದು, ಸ್ವಲ್ಪ ಎಕ್ಸ್‌ಪೋಸ್ ಇರುತ್ತೆ.. ನೀವು ರೆಡಿ ಇದ್ರೆ ಮಾಡಬಹುದು. ಆದ್ರೆ, ಸ್ವಿಮ್ ಸ್ಯೂಟ್ ಹಾಕ್ಬೇಕಾಗುತ್ತೆ, ಬಾಡಿ ತುಂಬಾ ಚೆನ್ನಾಗಿರ್ಬೇಕು..
Viral Video: ಹೆಂಗಸ್ರು ವಿಶ್ರಾಂತಿ ತಗೊಳ್ಳೋಕೆ ಶುರು ಮಾಡಿದ್ರೆ ಗಂಡಸು ಜಾತಿಗೆ...!
ಸ್ವಿಮ್ ಸ್ಯೂಟ್ ಹಾಕೋದು ಇರೋ ಕಾರಣಕ್ಕೆ ಬಾಡಿ ಜೊತೆಗೆ ಕೈ, ಕಾಲು, ತೊಡೆ ಎಲ್ಲಾ ಚೆನ್ನಾಗಿ ಇರ್ಬೇಕು.. ಆಗ ಮಾತ್ರ ಸ್ವಿಮ್ ಸ್ಯೂಟ್ ಹಾಕಿದ್ರೆ ಚೆಂದ ಕಾಣ್ಸುತ್ತೆ ಅಂದ್ರಂತೆ ಡೈರೆಕ್ಟರ್ ಭಗವಾನ್..'. ಅಷ್ಟು ಅಂದಿದ್ದೇ ತಡ, ನಟಿ ಲಕ್ಷ್ಮಿ ಅವರು ತಮ್ಮ ಲಂಗ ಮೇಲಕ್ಕೆತ್ತಿ, 'ನೋಡಿ.., ನನ್ನ ತೊಡೆ ಚೆನ್ನಾಗಿ ಇದ್ಯಾ..?' ಅಂತ ಕೇಳಿದ್ರಂತೆ ಲಕ್ಷ್ಮೀ..! ನಟಿ ಲಕ್ಷ್ಮೀ ಅಷ್ಟು ಬೋಲ್ಡ್ ಆಗಿದ್ರು, ಮತ್ತು ಸಿನಿಮಾ ಪ್ರೀತಿ ಅವರಲ್ಲಿ ಇತ್ತು. ಪ್ರತಿಭೆ ಜೊತೆಗೆ ಮುಗ್ಧತೆ ಕೂಡ ಮನೆಮಾಡಿತ್ತು' ಎಂದಿದ್ದಾರೆ ಭಗವಾನ್.

ನಟಿ ಲಕ್ಷ್ಮಿಯವರ ಬಗ್ಗೆ ಕನ್ನಡ ಸಿನಿಪ್ರೇಮಿಗಳಿಗೆ ಹೆಚ್ಚೇನೂ ಹೇಳಬೇಕಾಗಿಯೇ ಇಲ್ಲ. ಕನ್ನಡದ ಸ್ಟಾರ್ ನಟರಾದ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಷ್, ಚರಣರಾಜ್ ಸೇರಿದಂತೆ ಅಂದಿನ ಕಾಲದ ದಕ್ಷಿಣ ಭಾರತದ ಎಲ್ಲ ಸ್ಟಾರ್ ನಟರೊಂದಿಗೆ ಜೂಲಿ ಲಕ್ಷ್ಮಿ ತೆರೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹಿಂದಿಯಲ್ಲಿ 'ಜೂಲಿ' ಚಿತ್ರದಲ್ಲಿ ನಟಿಸಿದ್ದರಿಂದ ಅವರಿಗೆ 'ಜೂಲಿ ಲಕ್ಷ್ಮಿ' ಎಂಬ ಹೆಸರು ಬಂತು.
ನೀಚರ ನಾಲಿಗೆ ಇಷ್ಟೆಲ್ಲಾ ಕೆಲ್ಸ ಮಾಡಿತ್ತಾ?.. ಅಯ್ಯೋ ಪಾಪ ನಟಿ ಉಮಾಶ್ರೀ ಮೇಡಂ..!
ಲಕ್ಷ್ಮಿಯವರು ಪಂಚಭಾಷಾ ತಾರೆ. ನಟರಾದ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ನಾಗಾರ್ಜುನ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ನಟಿಸಿದ್ದಾರೆ ಲಕ್ಷ್ಮೀ. ಅಷ್ಟೇ ಅಲ್ಲ, ಪೋಷಕ ಪಾತ್ರದಲ್ಲಿ ಕೂಡ ವಯಸ್ಸಾದ ಬಳಿಕ ನಟಿಸಿ ತಮ್ಮ ಸಿನಿಮಾ ಪ್ರೀತಿ ಮೆರೆದಿದ್ದಾರೆ.

