ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ-2 ಸಿನಿಮಾದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಕಬ್ಜ ರಿಲೀಸ್ ಆಗಿ 2ನೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ರಿಯಾಲ್ ಸ್ಟಾರ್ ಅರ್ಕೇಶ್ವರ ಆಗಿ ಅಬ್ಬರಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಕಬ್ಜ ಕ್ಲೈಮ್ಯಾಕ್ಸ್ ಎಂಟ್ರಿ ಕೊಟ್ಟಿದ್ದಾರೆ. ಶಿವಣ್ಣ ಎಂಟ್ರಿ ಪಾರ್ಟ್-2 ಮೇಲಿನ ಕುತೂಹಲ ಹೆಚ್ಚಿಸಿದೆ.
ಇದೀಗ ಕಬ್ಜ 2 ಸಿನಿಮಾದ ಮತ್ತೊಂದು ಭರ್ಜರಿ ಸುದ್ದಿ ಕೇಳಿ ಬರುತ್ತಿದೆ. ಕಬ್ಜ ಪಾರ್ಟ್2ನಲ್ಲಿ ತೆಲುಗಿನ ಸ್ಟಾರ್ ನಟ, ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಕಬ್ಜ-2 ಪೋಸ್ಟರ್ ಒಂದು ವೈರಲ್ ಆಗಿದ್ದು ಪೋಸ್ಟರ್‌ನಲ್ಲಿ ಪವನ್ ಕಲ್ಯಾಣ್ ಇದ್ದಾರೆ. ಈ ಪೋಸ್ಟರ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಸಿನಿಮಾತಂಡ ಇನ್ನೂ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಇತ್ತೀಚಿಗಷ್ಟೆ ಕಬ್ಜ ನಿರ್ದೇಶಕ ಆರ್. ಚಂದ್ರು ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿದ್ದರು. ಪವನ್ ಕಲ್ಯಾಣ್ ಜೊತೆ ಇರುವ ಫೋಟೋ ಶೇರ್ ಮಾಡಿದ್ದರು. ಕಬ್ಜ ನೋಡಿ ಇಷ್ಟಪಟ್ಟಿದ್ದಾರೆ ಎನ್ನಲಾಗಿತ್ತು. ಇದೀಗ ಪವನ್ ಕಲ್ಯಾಣ್ ಕಬ್ಜ-2ನಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಒಂದು ವೇಳೆ ಕಬ್ಜ -2 ನಲ್ಲಿ ಪವನ್ ಕಲ್ಯಾಣ್ ನಟಿಸುವುದೇ ಆದರೆ ಚಿರಂಜೀವಿ ಸಹೋದರ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಡಲಿದ್ದಾರೆ.
Kabzaa; ಪಾರ್ಟ್-2ನಲ್ಲಿ ಅಮರಾಪುರ 'ಕಬ್ಜ' ಮಾಡಿ ಉಪ್ಪಿ ಸಾಮ್ರಾಜ್ಯಕ್ಕೆ ಅಧಿಪತಿ ಆಗ್ತಾರಾ ಶಿವಣ್ಣ?
ಸದ್ಯ ರಿಲೀಸ್ ಆಗಿರುವ ಕಬ್ಜ ಪಾರ್ಟ್-2 ಪೋಸ್ಟರ್ ನಲ್ಲಿ ಉಪೇಂದ್ರ, ಶಿವಣ್ಣ, ಸುದೀಪ್ ಜೊತೆಗೆ ಪವನ್ ಕಲ್ಯಾಣ್ ಕೂಡ ಇರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಕಬ್ಜ-2 ನಲ್ಲಿ ಪವನ್ ಕಲ್ಯಾಣ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Kabzaa Twitter Review; ಉಪೇಂದ್ರ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದೇನು, ಹೇಗಿದೆ ಕಿಚ್ಚ, ಶಿವಣ್ಣನ ಪಾತ್ರ?
ಕಲೆಕ್ಷನ್ ವಿವರ
ಬಹುಕೋಟಿ ಬಜೆಟ್ನಲ್ಲಿ ತಯಾರಾದ ‘ಕಬ್ಜ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಸುಮಾರು 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಬರೋಬ್ಬರಿ 54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಎರಡೇ ದಿನವೂ ಭರ್ಜರಿ ಕಮಾಯಿ ಮಾಡಿದೆ. ಒಟ್ಟು 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನೂ ವೀಕೆಂಡ್ ಇರುವುದರಿಂದ ಶನಿವಾರ ಮತ್ತು ಭಾನುವಾರ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
