ಪತ್ನಿಯನ್ನು ಆಸ್ಪತ್ರೆಗೆ ಕರೆತಂದು ಕಂಗ್ರಾಟ್ಸ್‌ ಹೇಳಿದ ತರುಣ್‌ ಸುಧೀರ್: ಅಲ್ಲಾಗಿದ್ದೇ ಬೇರೆ!

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ದಂಪತಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು, ಅದರ ವಿಡಿಯೋ ವೈರಲ್‌ ಆಗಿದೆ. ಅಲ್ಲಿ ಆಗಿದ್ದೇನು?
 

Tarun Sudhir and Sonal Monteiro visited the hospital  and the video of it went viral suc

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್​ 11ರಂದು ಬೆಂಗಳೂರಿನ ನಡೆದಿದೆ.  ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ  ತಮ್ಮ ನಾಲ್ಕು ವರ್ಷದ  ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ.  ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು  ವಿಶೇಷವೇ.  ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. 

ಸೆಲೆಬ್ರಿಟಿಗಳು ಅಂದ್ರೆ ಹಾಗೇ ಅಲ್ವಾ? ಮೊದಲು ಅವರ ಅಭಿಮಾನಿಗಳಿಗೆ ಮದುವೆ ಚಿಂತೆ. ಮದುವೆಯಾಗುತ್ತಿದ್ದಂತೆಯೇ ಮಕ್ಕಳ ಚಿಂತೆ. ಮದುವೆಯಾದವರಿಗೆ ಅವರ ಭವಿಷ್ಯ, ಕರಿಯರ್‍‌ ಬಗ್ಗೆ ಯೋಚನೆಯಾಗಿದ್ದರೆ, ಅಭಿಮಾನಿಗಳಿಗೆ ಮಕ್ಕಳ ಸುದ್ದಿ ಯಾವಾಗ ಕೊಡ್ತಾರೆ ಎನ್ನುವ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಇದೀಗ ತರುಣ್‌ ಮತ್ತು ಸೋನಲ್‌ ಅವರ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಇವರಿಬ್ಬರು ಆಸ್ಪತ್ರೆಗೆ ಹೋಗಿದ್ದರು. ಈ ವಿಷಯವನ್ನು ಅರ್ಧಂಬರ್ಧ ತಿಳಿದ ಇವರ ಅಭಿಮಾನಿಗಳಿಗೆ ಖುಷಿಯೋ ಖುಷಿ. ಏನೋ ಗುಡ್‌ ನ್ಯೂಸ್‌ ಇದೆ ಎಂದೇ ಎಂದುಕೊಂಡರು. ಅಷ್ಟೇ ಅಲ್ಲದೇ ಆಸ್ಪತ್ರೆಗೆ ಹೋದ ತರುಣ್‌ ಅವರು ಅಲ್ಲಿ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಆದರೆ ವಿಷಯ ನೀವಂದುಕೊಂಡಂತೆ ಅಲ್ಲವೇ ಅಲ್ಲ.

ನಿಮ್ಮಿಬ್ಬರಲ್ಲಿ ಹೆಚ್ಚು ಪೋಲಿ ಯಾರು ಎಂದು ಪ್ರಶ್ನೆ ಕೇಳಿದ ಅನುಶ್ರೀ: ಸೋನಲ್​- ತರುಣ್​ ಹೇಳಿದ್ದೇನು ಕೇಳಿ...

ತರುಣ್‌ ಮತ್ತು ಸೋನಲ್‌ ಹೋಗಿದ್ದು, ಪಶು ಆಸ್ಪತ್ರೆಯೊಂದರ ಉದ್ಘಾಟನೆ ಸಂದರ್ಭದಲ್ಲಿ. ಹೊಸದಾಗಿ ಆಸ್ಪತ್ರೆ ಕಟ್ಟಿರುವುದಕ್ಕೆ ಶುಭ ಕೋರಿರುವ ತರುಣ್‌ ಅವರು, ಅಲ್ಲಿ ಒಳ್ಳೆಯ ಮಾತುಗಳನ್ನಾಡಿದ್ದಾರೆ. ವೈದ್ಯರನ್ನು ನಾರಾಯಣನಿಗೆ ಹೋಲಿಸಲಾಗುತ್ತದೆ. ಮನುಷ್ಯರು ಆಸ್ಪತ್ರೆಗೆ ಬಂದರೆ ಏನಾಗಿದೆ ಎಂದುವೈದ್ಯರು ಅವರ ಬಾಯಲ್ಲಿಯೇ ಕೇಳಿ ತಿಳಿದುಕೊಳ್ಳುತ್ತಾರೆ. ಆದರೆ ಮೂಕ ಪ್ರಾಣಿಗಳು ಆಸ್ಪತ್ರೆಗೆ ಬಂದಾಗ, ಅವರಿಗೆ ಏನು ಸಮಸ್ಯೆಯಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಸುಲಭದ ಮಾತಲ್ಲ. ಆದರೆ ಇದರ ವೈದ್ಯರು ಇಂಥದ್ದೊಂದು ಕೆಲಸವನ್ನು ಮಾಡಿ ಮೂಕ ಜೀವಿಗಳ ಪ್ರಾಣ ಉಳಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಅಭಿನಂದನೆ ಸಲ್ಲಿಸಿದ್ದಾರೆ.  ಇದರ ವಿಡಿಯೋ ಅನ್ನು ಸಿನಿ ಸ್ಟೋರ್‍ಸ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೇರ್‍‌ ಮಾಡಲಾಗಿದೆ.  

 ಇನ್ನು ತರುಣ್‌ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡುತ್ತಿದ್ದರೆ, ಸೋನಲ್‌  ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು.  ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.  

ಮೈಮರೆತು ದುಪ್ಪಟ್ಟಾ ಮೇಲೆ ಕುಳಿತ ನಟಿ ಸೋನಲ್‌ ಮೊಂಥೆರೋ: ಮುಂದೇನಾಯ್ತು ವಿಡಿಯೋ ನೋಡಿ...

Latest Videos
Follow Us:
Download App:
  • android
  • ios