ಸ್ವಚ್ಚ ಭಾರತ ಎಂಬುದು ಸರ್ಕಾರದ ಘೋಷಣೆ. ‘ಸ್ವಚ್ಚ ಕರ್ನಾಟಕ’ ಎಂಬುದು ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿರುವ ಚಿತ್ರದ ಹೆಸರು. ಮೊನ್ನೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಎಲ್‌ ರವಿಕುಮಾರ್‌ ನಿರ್ದೇಶಿಸಿ, ನಿರ್ಮಿಸಿರುವ ಚಿತ್ರವಿದು.

ಬಿಬಿಎಂಪಿ ವಿಶೇಷ ಕಮಿಷನರ್‌ ರಣದೀಪ್‌, ಮಾಜಿ ಶಾಸಕ ಹೇಮಚಂದ್ರ ಸಾಗರ್‌, ಮೋಹನ್‌ ಕೊಂಡಜ್ಜಿ, ಜ್ಯೋತಿಷಿ ರಾಘವೇಂದ್ರ ಮೋಕ್ಷಗುಂಡಂ ಗುರೂಜಿ, ರಮೇಶ್‌ ಕಾಮತ್‌ ಆಡಿಯೋ ಬಿಡುಗಡೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಅರ್ಜುನ್‌ ಹಾಗೂ ಅಂಜಲಿ ಚಿತ್ರದ ಜೋಡಿ.

ಕೆಸರಿಲ್ಲಾಂದ್ರೆ ತಂದೂರಿ ಚಿಕನ್ ಥರಾ ಬೆಂದು ಹೋಗ್ತಿದ್ದೆ ಎಂದ ರಿಷಭ್

ನಮ್ಮ ಸುತ್ತಲಿನ ಪರಿಸರವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು, ನಾವು ಇನ್ನೊಬ್ಬರನ್ನು ದೂಷಿಸುವುದಕ್ಕಿಂತ ತಾವೇ ಸ್ವಚ್ಛತಾಕಾರ್ಯ ಆರಂಭಿಸಿದರೆ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿರುತ್ತದೆ, ನಮ್ಮ ಊರು, ರಾಜ್ಯ, ನಮ್ಮ ದೇಶವೂ ಸ್ವಚ್ಛವಾಗಿರುತ್ತದೆ ಎಂಬ ಸಂದೇಶ ಈ ಚಿತ್ರದಲ್ಲಿದೆ.

ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಹಿರಿಯ ಸಾಹಿತಿ ಡಾ ದೊಡ್ಡರಂಗೇಗೌಡರು ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿರುವುದು. ನಟನೆ ಜತೆಗೆ ಈ ಚಿತ್ರಕ್ಕೆ ಹಾಡುಗಳನ್ನೂ ಬರೆದಿದ್ದಾರೆ. ರಾಜ್‌ ಭಾಸ್ಕರ್‌ ಸಂಗೀತ ಸಂಯೋಜಿಸಿದ್ದಾರೆ.