Asianet Suvarna News Asianet Suvarna News

'ನಿನ್ನಾ ಸನಿಹಕೆ' ಚಿತ್ರದ ಒಲವಾಗಿದೆ ಹಾಡು ಬಿಡುಗಡೆ!

ವೈರಲ್ ಆಗುತ್ತಿದೆ ಒಲವಾಗಿದೆ ಹಾಡು. ಧನ್ಯಾ ರಾಮ್‌ ಕುಮಾರ್ ಮತ್ತು ಸೂರಜ್ ಗೌಡ ಕಾಂಬಿನೇಷನ್ ವರ್ಕೌಟ್ ಆಗೋದರಲ್ಲಿ ಡೌಟಿಲ್ಲ.. 

Suraj Gowda Dhanya Ramkumar Ninna Sanihake film Olavaagidhe song release vcs
Author
Bangalore, First Published Sep 30, 2021, 11:34 AM IST
  • Facebook
  • Twitter
  • Whatsapp

ಕರ್ನಾಟಕದಲ್ಲಿ ಎರಡನೇ ಲಾಕ್‌ಡೌನ್‌ (Lockdown) ನಂತರ ಮೊದಲ ಬಾರಿಗೆ ಚಿತ್ರಮಂದಿರಗಳಲ್ಲಿ 100% ಸೀಟಿಂಗ್ ಸೌಲಭ್ಯ ಸರ್ಕಾರ ನೀಡಿದೆ. ಇದರ ಬೆನ್ನಲೆ ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾ (Big Budget Movies)ಗಳ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.  ತುಂಬಾ ದಿನಗಳ ನಂತರ ಚಿತ್ರಮಂದಿರಕ್ಕೆ ಬರುವ ವೀಕ್ಷಕರಿಗೆ ಮೈಂಡ್ ರಿಫ್ರೆಶ್ ಆಗಬೇಕೆಂದು ನಿನ್ನ ಸನಿಹಕೆ (Ninna Sanihake) ಸಿನಿಮಾ ಮೊದಲು ಬಿಡುಗಡೆ ಮಾಡಲಾಗುತ್ತಿದೆ.

ಚಿತ್ರದ ಟೀಸರ್, ಟ್ರೈಲರ್ ಹಾಗೂ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.  ಸೂರಜ್‌ ಗೌಡ (Suraj Gowda) ಹಾಗೂ ಧನ್ಯಾ ರಾಮ್‌ ಕುಮಾರ್‌ (Dhanya Ramkumar) ನಟನೆಯ ‘ನಿನ್ನಾ ಸನಿಹಕೆ’ ಚಿತ್ರದ ‘ಒಲವಾಗಿದೆ’ (Olavagide) ಹಾಡಿನ ವೀಡಿಯೋ ಕೂಡ ಬಿಡುಗಡೆಯಾಗಿದೆ. ಬಾಲಿವುಡ್‌ (Bollywood) ಗಾಯಕ ಬೆನ್ನಿ ದಯಾಲ್‌ (Benny Dayal) ಹಾಗೂ ಐಶ್ವರ್ಯಾ ರಂಗರಾಜನ್‌ (Aishwarya Rangarajan) ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ರಘು ದೀಕ್ಷಿತ್‌ (Raghu Dixit) ಸಂಗೀತವಿದೆ. ಈ ಹಾಡನ್ನು ರಘು ದೀಕ್ಷಿತ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ವಾಸುಕಿ ವೈಭವ್‌ (Vasuki Vaibhav) ಗೀತೆ ರಚಿಸಿದ್ದಾರೆ. 

Suraj Gowda Dhanya Ramkumar Ninna Sanihake film Olavaagidhe song release vcs

ಸೂರಜ್ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಹೊಸ ಶೈಲಿಯ ಜೋಡಿ ಕಾಂಬಿನೇಷನ್‌ ಇದಾಗಿದ್ದು ಖಂಡಿತಾ ಯ್ಯೂತ್‌ಗಳಿಗೆ ಇಷ್ಟ ಆಗುತ್ತದೆ ಎಂಬುವುದು ತಂಡದ ನಿರೀಕ್ಷೆ. ಅಕ್ಟೋಬರ್ 8 (October 8) ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಧನ್ಯಾರ ಚೊಚ್ಚಲ ಸಿನಿಮಾ ಇದಾಗಿರುವ ಕಾರಣ ಇಡೀ ರಾಜ್‌ಕುಮಾರ್ (Rajkumar) ಕುಟುಂಬದವರಿಗೆ ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆ.  ಅಕ್ಷಯ್‌ ರಾಜಶೇಖರ್‌ (Akshay Rajashekar) ಹಾಗೂ ರಂಗನಾಥ್‌ ಕೂಡ್ಲಿ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. 

ರಾಜ್‌ಕುಮಾರ್ ಮೊಮ್ಮಗಳ 'ನಿನ್ನ ಸನಿಹಕೆ' ಚಿತ್ರದ ಟ್ರೈಲರ್ ವೈರಲ್!

ಇವರಿಬ್ಬರೂ ಹಾಡಿರುವ ಕವರ್ ಸಾಂಗ್ (Cover Song) ಕೂಡ ಸಖತ್ ವೈರಲ್ (Viral) ಆಗಿದ್ದು, ಕೆಲವು ದಿನಗಳ ಕಾಲ ಯುಟ್ಯೂಬ್ ಟ್ರೆಂಡಿಂಗ್ (Youtube Trending) ಲಿಸ್ಟ್ ಮುಟ್ಟಿತ್ತು.  ಧನ್ಯಾ ನೋಡಲು ತುಂಬಾ ಆಕರ್ಷವಾಗಿದ್ದು ಅವರ ಕೂದಲು ಹಾಗೂ ಫ್ಯಾಷನ್ ಸೆನ್ಸ್‌ ಸೆನ್ಸೇಷನ್ (Sensation) ಕ್ರಿಯೇಟ್ ಮಾಡುತ್ತಿದೆ.  

'ಇಂಥ ಒಳ್ಳೆಯ ತಂಡ ಇದ್ದರೆ ಖಂಡಿತ ಸಿನಿಮಾ ನಿರ್ದೇಶನ ಮಾಡಬಹುದು. ಇದೊಂದು ರೊಮ್ಯಾಂಟಿಕ್ ಕಾಮಿಡಿ (Romantic Comedy) ಸಿನಿಮಾ. ನಾನು ಇಲ್ಲಿಯವರೆಗೂ ನಟಿಸಿದ ಸಿನಿಮಾಗಳಲ್ಲಿ ನಟನೆಗಿಂತ ಹೆಚ್ಚಾಗಿ ಬೇರೆಯದನ್ನು ಕಲಿತುಕೊಂಡೆ. ಒಂದು ಸಿನಿಮಾ ಎಲ್ಲ ವಿಭಾಗಗಳಲ್ಲಿ ಹೇಗೆ ಕೆಲಸ ಆಗುತ್ತದೆ ಎಂದು ತಿಳಿದುಕೊಂಡೆ. ಅದೇ ತಿಳುವಳಿಕೆ ನನಗೆ ನಿರ್ದೇಶನಕ್ಕೆ ಅನುಕೂಲವಾಯಿತು. ನಿರ್ದೇಶಕರು ಆಸ್ಪತ್ರೆಯಿಂದ ಬಂದ ಮೇಲೆ ಪುಟೇಜ್ ನೋಡಿ ನೀವೇ ನಿರ್ದೇಶನ ಮುಂದುವರೆಸಿ ಎಂದರು. ತಾತ್ಕಾಲಿಕ ನಿರ್ದೇಶಕನಾಗಿ ಬಂದವನು, ಇಡೀ ಚಿತ್ರಕ್ಕೆ ನಾನೇ ನಿರ್ದೇಶಕನಾದೆ. ನಾನೇ ಕಥೆ ಮತ್ತು ಚಿತ್ರಕಥೆ ಬರೆದಿದ್ದರಿಂದ ನಿರ್ದೇಶನ ಸುಲಭವಾಯಿತು,' ಎಂದು ಸೂರಜ್ ಗೌಡ ಹೇಳಿದ್ದಾರೆ. 

'ಸಿನಿಮಾ ಇಷ್ಟೊಂದು ಚೆನ್ನಾಗಿ ಬರುತ್ತದೆ ಎಂದು  ನಿರೀಕ್ಷೆ ಮಾಡಿರಲಿಲ್ಲ. ಅದರೆ ಶೂಟಿಂಗ್ ಆದ ಮೇಲೆ ದೃಶ್ಯಗಳನ್ನು ನೋಡಿದಾಗ ನಮ್ಮ ಶ್ರಮ ಸಾರ್ಥಕ ಅನಿಸಿತ್ತು. ನಾನು ಹೊಸಬಳು ಆದರೂ ಎಲ್ಲರ ಸಹಕಾರದಿಂದ ತೆರೆ ಮೇಲೆ ನನ್ನ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ ಎಂದುಕೊಳ್ಳುತ್ತೇನೆ. ಮೊದಲ ಚಿತ್ರದಲ್ಲಿಯೇ  ಒಳ್ಳಯ ಕೋ ಸ್ಟಾರ್, ಒಳ್ಳೆಯ ಕಥೆ ಸಿಕ್ಕಿದ್ದು ನನ್ನ ಅದೃಷ್ಟ,' ಎಂದು ನಟಿ ಧನ್ಯಾ ಹೇಳಿದ್ದಾರೆ.

 

Follow Us:
Download App:
  • android
  • ios