ಸ್ಯಾಂಡಲ್‌ವುಡ್‌ಗೆ ಬರ್ತಿದ್ದಾರೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾಟನ್ ಪೇಟೆ ಗೇಟ್ ಸಿನಿಮಾದಲ್ಲಿ ಸೊಂಟ ಬಳುಕಿಸಲಿರೋ ಸನ್ನಿ

    ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತೆ ಸ್ಯಾಂಡಲ್‌ವುಡ್‌ಗೆ‌ ಬರುತ್ತಿದ್ದಾರೆ. ಕಾಟನ್ ಪೇಟೆ ಗೇಟ್ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಸೊಂಟ ಬಳುಕಿಸಲಿದ್ದಾರೆ.

    ಸ್ಯಾಂಡಲ್ ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರೋ ಸಿನಿಮಾದಲ್ಲಿ ಸನ್ನಿ ಲಿಯೋನ್ ಸ್ಟೆಪ್ ಹಾಕಲಿದ್ದಾರೆ. ತೆಲುಗುನಲ್ಲೂ ಸೀತಣ್ಣ ಪೇಟೆ ಗೇಟ್ ಹೆಸರಿನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ.

    ಅವಾರ್ಡ್ ಶೋಗಳಿಂದಲೇ ಬಹಿಷ್ಕಾರ: ಸಿನಿ ಜರ್ನಿ ಬಗ್ಗೆ ಸನ್ನಿ ಮಾತು...

    ಮೂರು ದಿನಗಳ ಕಾಲ ಹಾಡಿನ‌ ಚಿತ್ರೀಕರಣ ನಡೆಯಲಿದೆ. ಐಟಂ ಸಾಂಗೊಂದಕ್ಕೆ ಹೆಜ್ಜೆ ಹಾಕಲಿರೋ ಮಾದಕ ನಟಿ ಸನ್ನಿ ಲಿಯೋನ್ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ.

    ವಾಟರ್‌ ಬೇಬಿ ಲುಕ್‌ನಲ್ಲಿ ಹಾಟ್ ಪೋಸ್: ಯೆಲ್ಲೋ ಸ್ವಿಮ್‌ ಸೂಟ್‌ನಲ್ಲಿ ಸನ್ನಿ

    ಹಾಡಿಗೆ 50 ಲಕ್ಷದಷ್ಟು ಸಂಭಾವನೆ ನೀಡಿ ಸನ್ನಿ ಲಿಯೋನ್ ಅವರನ್ನು ಕರೆ ತರಲಾಗ್ತಿದೆ. ಇದೇ ತಿಂಗಳು 28- 29 - 30 ರಂದು ಸನ್ನಿಲಿಯೋನ್ ಹಾಡಿನ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.