Asianet Suvarna News Asianet Suvarna News

kantara ನೋಡಿ ಕಣ್ಣೀರು ಬಂತು; ರಿಷಬ್ ಶೆಟ್ಟಿ ನಟನೆಗೆ ಸುನಿಲ್ ಶೆಟ್ಟಿ ಫಿದಾ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾವನ್ನು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ವೀಕ್ಷಿಸಿದ್ದಾರೆ. ರಿಷಬ್ ಶೆಟ್ಟಿ ನಟನೆಗೆ ಸುನಿಲ್ ಫಿದಾ ಆಗಿದ್ದಾರೆ. 

suniel shetty about rishab Shetty starrer kantara film sgk
Author
First Published Nov 19, 2022, 3:39 PM IST

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನಿಮಾದ ಹವಾ ಇನ್ನು ಕಡಿಮೆ ಆಗಿಲ್ಲ. ಇನ್ನೂ ಅನೇಕ ಕಡೆ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ ನೋಡಿ ಅನೇಕ ಮಂದಿ ಮೆಚ್ಚಿಕೊಂಡಿದ್ದಾರೆ, ಹಾಡಿ ಹೊಗಳಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರ ಜೊತೆಗೆ ಸಿನಿ ಗಣ್ಯರು ಸಹ ರಿಷಬ್ ಶೆಟ್ಟಿ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಅನೇಕ ಸಿನಿಮಾ ಗಣ್ಯರು ಕನ್ನಡ ಕಾಂತಾರಗೆ ಮನಸೋತಿದ್ದಾರೆ. ಇದೀಗ ಮತ್ತೋರ್ವ ಬಾಲಿವುಡ್ ಸ್ಟಾರ್ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನೋಡಿ ಕಣ್ಣೀರು ಬಂತು ಎಂದು ಹೇಳಿದ್ದಾರೆ. ಹೀಗೆ ಹೇಳಿದ್ದು ಮತ್ಯಾರು ಅಲ್ಲ ಕನ್ನಡ ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿ.  

ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಆಂಗ್ಲ ಮಾಧ್ಯಮಕ್ಕೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಕಾಂತಾರ ಬಗ್ಗೆ ಮಾತನಾಡಿದ್ದಾರೆ. ಸುನಿಲ್ ಶೆಟ್ಟಿ ಸದ್ಯ 'ಧಾರಾವಿ ಬ್ಯಾಂಕ್' ವೆಬ್ ಸೀರಿಸ್ ರಿಲೀಸ್‌ಗೆ ಕಾಯುತ್ತಿದ್ದಾರೆ. ಸದ್ಯ ಈ ಸೀರಿಸ್‌ನ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ ಸುನಿಲ್ ಶೆಟ್ಟಿ. ಭೂತಕೋಲ, ದೈವಾರಾಧನೆ ಬಗ್ಗೆ ಸುನಿಲ್ ಶೆಟ್ಟಿ ಅವರಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ಸಿನಿಮಾ ಕರಾವಳಿ ಮೂಲದ ನಟ ಸುನಿಲ್ ಶೆಟ್ಟಿಗೆ ಕನೆಕ್ಟ್ ಆಗಿದೆ. 

Kantara OTT ರಿಲೀಸ್ ಮುಂದಕ್ಕೆ ಹೋಗಿದ್ದೇಕೆ? ಯಾವಾಗ ಸ್ಟ್ರೀಮಿಂಗ್ ಆಗುತ್ತೆ ರಿಷಬ್ ಶೆಟ್ಟಿ ಸಿನಿಮಾ?

ಈ ಬಗ್ಗೆ ಡಿಎನ್‌ಎಗೆ ನೀಡಿದ ಸಂದರ್ಶನದಲ್ಲಿ ಸುನಿಲ್ ಶೆಟ್ಟಿ ಮಾತನಾಡಿದ್ದಾರೆ. 'ನಾನು ಈ ಸಿನಿಮಾ ನೋಡಿದೆ. ಪಿವಿಆರ್‌ನಲ್ಲಿ ಶೇ.60ರಷ್ಟು ಜನ ಇದ್ದರು. ಸಿನಿಮಾದ ಕೊನೆಯ 20-25 ಸಿನಿಮಾ ನನಗೆ ಗೂಸ್‌ಬಂಪ್ಸ್ ಮತ್ತು ಕಣ್ಣೀರು ಬಂತು. ಯಾಕೆಂದರೆ ನನಗೆ ಆ ಸ್ಥಳ ಗೊತ್ತು. ನಾನು ಪ್ರತಿವರ್ಷ ಹೋಗುತ್ತೇನೆ. ದೈವಾರಾಧನೆ, ಭೂತಗಳಿಗೆ ಪೂಜೆ ಮಾಡುತ್ತೇವೆ. ಕೋಲ ಮಾಡಿಸುತ್ತೇವೆ. ಕೊನೆಯ 20 ನಿಮಿಷ ಅದ್ಭುತ. ರಿಷಬ್ ಶೆಟ್ಟಿಗೆ ಸಿನಿಮಾದ ಮೇಲಿನ ಪ್ಯಾಷನ್ ಗೊತ್ತಾಗುತ್ತದೆ. ಕಂಟೆಂಟ್ ಸ್ಟ್ರಾಂಗ್ ಆಗಿದೆ. ದೃಶ್ಯ ವೈಭವವಿದೆ. ಕಂಟೆಂಟ್ ಈಸ್ ಕಿಂಗ್ ಎನ್ನುವುದು ಮತ್ತೆ ಸಾಬೀತಾಗಿದೆ. ಎಷ್ಟು ದೊಡ್ಡ ಮಟ್ಟದ ಜನ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ' ಎಂದು ಹೇಳಿದರು. 

ಕಾಂತಾರ ಗೆಟಪ್‌ನಲ್ಲಿ ಬಂದ ತಹಶೀಲ್ದಾರ್ ನೋಡಿ ಜಿಲ್ಲಾಧಿಕಾರಿ ಶಾಕ್

ಅಂದಹಾಗೆ ಈಗಾಗಲೇ ಕರಾವಳಿ ಮೂಲದವರಾದ ಶಿಲ್ಪಾ ಶೆಟ್ಟಿ, ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ ಇನ್ನು ಅನೇಕರು ಕಾಂತಾರ ಸಿನಿಮಾ ನೋಡಿ ಹಾಡಿಹೊಗಳಿದ್ದರು. ರಜನಿಕಾಂತ್, ಪ್ರಭಾಸ್, ಕಾರ್ತಿ, ಧನುಷ್, ಕಂಗನಾ ರಣಾವತ್ ಸೇರಿದಂತೆ ಅನೇಕರು ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಇದೀಗ ಸುನಿಲ್ ಶೆಟ್ಟಿ ಕೂಡ ತುಂಬಾ ಇಷ್ಟಪಟ್ಟಿದ್ದಾರೆ.    

ಕಾಂತಾರ ಬಗ್ಗೆ, 

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ರಂಗಭೂಮಿ ಕಲಾವಿದರು ಕಾಂತಾರ ಸಿನಿಮಾದಲ್ಲಿ ನಟಿಸಿದ್ದಾರೆ.  ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ.

Follow Us:
Download App:
  • android
  • ios