Asianet Suvarna News Asianet Suvarna News

ತಮಿಳು ಹಾಗೂ ಮಲಯಾಳಂಗೆ ಹೊರಟ ಕನ್ನಡದ ಗೋವಿಂದ

ತುಂಬಾ ವರ್ಷಗಳ ನಂತರ ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ಸುಮಂತ್‌ ಶೈಲೇಂದ್ರ ಸಿನಿಮಾ ಸದ್ದು ಮಾಡಲು ಸಜ್ಜಾಗಿದೆ. ಯಂಗ್‌ ಆಂಡ್‌ ಎನರ್ಜಿಟಿಕ್‌ ಆ್ಯಕ್ಷನ್‌ ಸಿನಿಮಾಗಳ ಮೂಲಕವೇ ಚಿತ್ರರಂಗ ಬಂದ ಸುಮಂತ್‌ ಶೈಲೇಂದ್ರ, ಈಗ ಹಾಸ್ಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಎಂಬುದು ವಿಶೇಷ. 

Sumanth Shailendra Bhavana signs new Kannada project govinda govinda
Author
Bangalore, First Published Sep 4, 2020, 9:57 AM IST
  • Facebook
  • Twitter
  • Whatsapp

 ಆ ಚಿತ್ರದ ಹೆಸರು ‘ಗೋವಿಂದ ಗೋವಿಂದ’. ಇದು ಕನ್ನಡದ ಜೊತೆಗೆ ತಮಿಳು, ಮಲೆಯಾಳಂನಲ್ಲೂ ತೆರೆಗೆ ಬರಲಿದೆ.

ಚಿತ್ರೀಕರಣ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿದ್ದು, ಇತ್ತೀಚೆಗಷ್ಟೆಸೆನ್ಸಾರ್‌ ಮಾಡಿಕೊಂಡಿದೆ. ಯಾವುದೇ ಕಟ್‌ ಹಾಗೂ ಮ್ಯೂಟ್‌ ಇಲ್ಲದೆ ಯು ಪ್ರಮಾಣಪತ್ರ ಪಡೆದುಕೊಂಡಿರುವ ಈ ಚಿತ್ರದಲ್ಲಿ ಜಾಕಿ ಭಾವನಾ ಮುಖ್ಯ ಪಾತ್ರ ಮಾಡಿದ್ದಾರೆ ಎಂಬುದು ಚಿತ್ರದ ಮತ್ತೊಂದು ಹೈಲೈಟ್‌. ಕೌಟುಂಬಿಕ, ಹಾಸ್ಯ ಪ್ರಧಾನ ಸಿನಿಮಾ ಇದಾಗಿದ್ದು, ಶೈಲೇಂದ್ರ ಬಾಬು ಹಾಗೂ ಆರ್‌ ರವಿ ಗರಣಿ ನಿರ್ಮಾಣ ಮಾಡಿದ್ದಾರೆ.

'ರಾಖಿ' ಅಣ್ಣ ರಾಹುಲ್ ಜೊತೆ ಸಂಜನಾ ಕ್ಲೋಸ್ ಆಗಿದ್ದಿದ್ದು ಹೀಗೆ!

ತಿಲಕ್‌ ನಿರ್ದೇಶನದ ಈ ಚಿತ್ರದಲ್ಲಿ ಕವಿತಾ ಗೌಡ, ರೂಪೇಶ್‌ ಶೆಟ್ಟಿ, ಅಚ್ಯುತ್‌ ಕುಮಾರ್‌, ಶೋಭರಾಜ್‌, ವಿ. ಮನೋಹರ್‌, ಪವನ್‌, ವಿಜಯ್‌ಚೆಂಡೂರ್‌ ಮುಂತಾದವರು ನಟಿಸಿದ್ದಾರೆ. ಕೆ ಎಸ್‌ ಚಂದ್ರಶೇಖರ್‌ ಛಾಯಾಗ್ರಹಣ, ಹಿತನ್‌ ಹಾಸನ್‌ ಸಂಗೀತ, ದೇವ್‌ ರಂಗಭೂಮಿ ಸಂಭಾಷಣೆ ಈ ಚಿತ್ರಕ್ಕಿದೆ. ‘ಗೋವಿಂದ ಗೋವಿಂದ ಒಂದೊಳ್ಳೆಯ ಚಿತ್ರ. ನಾನು ಚಿತ್ರರಂಗದಲ್ಲಿ ಮೂರು ದಶಕಗಳಿಂದ ಇದ್ದೇನೆ. ಮೊದಲ ಬಾರಿಗೆ ಒಂದು ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ… ಮಾಡಿ, ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇನೆ. ಏಕಕಾಲದಲ್ಲಿ ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ’ ಎನ್ನುತ್ತಾರೆ ಶೈಲೇಂದ್ರ ಬಾಬು. ಕಿಶೋರ್‌ ಮಧುಗಿರಿ ಚಿತ್ರದ ಮತ್ತೊಬ್ಬ ನಿರ್ಮಾಪಕರು.

ವಿಜಯಪುರ, ಮಧುಗಿರಿ, ಚಿಂತಾಮಣಿ, ಬೆಂಗಳೂರು ಮುಂತಾದ ಕಡೆ 60ಕ್ಕೂ ಹೆಚ್ಚು ದಿನ ಚಿತ್ರೀಕರಣ ಮಾಡಲಾಗಿದೆ. ಸದ್ಯದಲ್ಲೇ ಟೀಸರ್‌ ಹಾಗೂ ಟ್ರೇಲರ್‌ ಬಿಡುಗಡೆ ಆಗಲಿದೆ.

‘ಒಂದು ಸಂಪೂರ್ಣ ಹಾಸ್ಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ತುಂಬಾ ಗ್ಯಾಪ್‌ ನಂತರ ನನ್ನ ನಟನೆಯ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಹಾಸ್ಯಕ್ಕೆ ಕೊರತೆ ಇಲ್ಲ. ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ’ ಎಂಬುದು ಸುಮಂತ್‌ ಶೈಲೇಂದ್ರ ಮಾತು.

ಡ್ರಗ್ಸ್‌ ಬಗ್ಗೆ ಮಾತನಾಡಲು ಒತ್ತಾಯಿಸಬೇಡಿ; ಇದೇ ನನ್ನ ಕೊನೇ ಉತ್ತರ!

 
 
 
 
 
 
 
 
 
 
 
 
 

Pic credit @anitha.srinivasan

A post shared by Sumanth Shailendra (@sumanth_shailendra) on Jan 21, 2020 at 11:20pm PST

Follow Us:
Download App:
  • android
  • ios