ಎಸ್‌ಎಸ್ ಸಜ್ಜನ್ ನಿರ್ದೇಶನದಲ್ಲಿ, ಹೊಸಬರ ತಂಡ ನಿರ್ಮಿಸುತ್ತಿರುವ ಚಿತ್ರ ‘ಮೃತ್ಯುಂಜಯ’ದಲ್ಲಿ ಹಿರಿಯ ನಟಿ ಸುಮನ್ ನಗರ್‌ಕರ್ ಮನಃಶಾಸ್ತ್ರಜ್ಞೆಯ ಪಾತ್ರ ನಿರ್ವಹಿಸಲಿದ್ದಾರೆ.

‘ಮೃತ್ಯುಂಜಯ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸುಮನ್ ನಗರ್‌ಕರ್, ‘ಮೃತ್ಯುಂಜಯ ಲಾಕ್‌ಡೌನ್ ನಂತರದ ನನ್ನ ಮೊದಲ ಸಿನಿಮಾ. ಇಂದಿನ ಯುವಕರಲ್ಲಿ ಆತ್ಮಹತ್ಯೆ, ಡಿಪ್ರೆಶನ್‌ನಂಥಾ ಸಮಸ್ಯೆಗಳು ಹೆಚ್ಚುತ್ತಿವೆ. ಈ ಚಿತ್ರದ ನಾಯಕನೂ ಅಂಥದ್ದೊಂದು ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಆತನನ್ನು ಟ್ರೀಟ್ ಮಾಡುವ ಸೈಕಿಯಾಟ್ರಿಸ್ಟ್ ಪಾತ್ರವನ್ನು ನಾನು ಮಾಡುತ್ತಿದ್ದೇನೆ’ ಎಂದರು.

ಕನ್ನಡ ಚಿತ್ರಗಳ ಬಿಡುಗಡೆಗೆ ಎರಡು ತಿಂಗಳು ಬ್ರೇಕ್..! 15 ಸಿನಿಮಾ ಅತಂತ್ರ

ನಿರ್ದೇಶಕ ಎಸ್‌ಎಸ್ ಸಜ್ಜನ್ ಮಾತನಾಡಿ, ‘ಕೋವಿಡ್ ಸುರಕ್ಷತಾ ದೃಷ್ಟಿಯಿಂದ ಕೇವಲ ೧೯೨ ಗಂಟೆಗಳಲ್ಲಿ ನಿರಂತರವಾಗಿ ಚಿತ್ರೀಕರಣ ನಡೆಸಲಾಗಿದೆ. ಮಧ್ಯದಲ್ಲೆಲ್ಲೂ ಬ್ರೇಕ್ ತೆಗೆದುಕೊಂಡಿಲ್ಲ.

ಇದೊಂದು ಸಸ್ಪೆನ್ಸ್ ಹಾರರ್ ಜಾನರ್‌ನ ಸಿನಿಮಾ. ಇದರ ಹೊರತಾಗಿಯೂ ಸಿನಿಮಾದಲ್ಲಿ ಯುವ ಜನತೆಗೆ ಸ್ಟ್ರಾಂಗ್ ಸಂದೇಶವಿದೆ’ ಎಂದರು.
ನಾಯಕ ಹಿತೇಶ್, ನಾಯಕಿ ಶ್ರೇಯಾ ಶೆಟ್ಟಿ, ನಿರ್ಮಾಪಕಿ ಶೈಲಜಾ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.