ಕನ್ನಡದ ನಟಿ ಸುಧಾ ಬೆಳವಾಡಿ, 90ರ ದಶಕದಲ್ಲಿ ತಮ್ಮ ಮದುವೆಯ ನಿರ್ಧಾರದಿಂದ ಅಚ್ಚರಿ ಮೂಡಿಸಿದರು. ಅಮೆರಿಕಾ ಬೇಡವೆಂದ ಸುಧಾ, ತಾವೇ ಹುಡುಗನನ್ನು ಆಯ್ಕೆ ಮಾಡಲು ನಿರ್ಧರಿಸಿದರು. ತಮ್ಮಣ್ಣನ ಸ್ನೇಹಿತ ಸತ್ಯ ಅವರ ಹೆಸರನ್ನು ಪಟ್ಟಿಯಲ್ಲಿ ಗುರುತಿಸಿ, ಮದುವೆಯ ಪ್ರಸ್ತಾಪವಿಟ್ಟರು. ನಂತರ, ಎರಡು ತಿಂಗಳ ಕಾಲಾವಕಾಶ ತೆಗೆದುಕೊಂಡು 1990ರಲ್ಲಿ ಸತ್ಯ ಅವರೊಂದಿಗೆ ಸುಧಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕನ್ನಡ ಚಿತ್ರರಂಗದ ಅದ್ಭುತ ಫೋಷಕ ನಟಿ ಸುಧಾ ಬೆಳವಾಡಿ ತಮ್ಮ ಮದುವೆ ವಿಚಾರದಲ್ಲಿ ತೆಗೆದುಕೊಂಡ ಬೋಲ್ಡ್‌ ಹೆಜ್ಜೆ ನಿಜಕ್ಕೂ ಶಾಕಿಂಗ್. 90ರ ದಶಕದಲ್ಲಿ ಇಷ್ಟೋಂಡು ಅಡ್ವಾನ್ಸ್‌ ಥಿಂಕಿಂಗ್ ಜನರಲ್ಲಿ ಇತ್ತಾ? ಲಿಸ್ಟ್‌ ಮಾಡಿ ಹುಡುಗನನ್ನು ಅಯ್ಕೆ ಮಾಡುವುದು ಎಷ್ಟು ಕಷ್ಟವಾಗಿತ್ತು ಎಂದು ಸುಧಾ ಹಂಚಿಕೊಂಡಿದ್ದಾರೆ

'ನನಗೆ 24 ವರ್ಷ ಆದಾಗ ಮದುವೆ ವಿಚಾರ ಬಂದಾಗ ಅಮೆರಿಕಾ ಹೋಗ್ತೀಯಾ ಅಂತ ಅಮ್ಮ ಕೇಳಿದ್ರು ಆದರೆ ನನಗೆ ಇಂಟ್ರೆಸ್ಟ್‌ ಇರಲಿಲ್ಲ. ನಾನು ಇಲ್ಲಿನವಳು. ನಾನು ಮದುವೆ ಮಾಡಿಕೊಳ್ಳುವುದಿಲ್ಲ ಅಂತ ರಗಳೆ ಮಾಡುತ್ತಿರುವಾಗ ನನ್ನ ದೊಡ್ಡಪ್ಪನಿಗೆ ಅಮ್ಮ ಹೇಳಿದ್ದರು. ಏನಮ್ಮಾ ಮದುವೆ ಮಾಡಿಕೊಳ್ಳಬೇಕು ಸಂಬಂಧ ನೋಡೋಣ ಜಾತಕ ಕೊಡು ಎಂದು ಹೇಳಿದ್ರು. ನನ್ನ ಅಮ್ಮ ಅಪ್ಪನೇ ಜಾತಕ ನೋಡ್ಕೊಂಡು ಮದುವೆ ಆಗಿಲ್ಲ ನಾನು ಯಾಕೆ ಆಗಬೇಕು ನನಗೆ ಇದೆಲ್ಲಾ ಇಷ್ಟ ಆಗುವುದಿಲ್ಲ ಎಂದಿದ್ದೆ. ಸರಿ ನೀನೇ ನೋಡ್ಕೋ ಇಲ್ಲ ನಾವೇ ನೋಡುತ್ತೀವಿ ಅಂದ್ರು. ನನಗೆ ಭಯ ಶುರುವಾಯ್ತು. ಏಕೆಂದರೆ ಗೊತ್ತಿಲ್ಲದ ವ್ಯಕ್ತಿಯ ಜೊತೆ ಹೇಗೆ ಸಂಸಾರ ಮಾಡುವುದು? ನನ್ನ ಅಣ್ಣ ಅಮ್ಮನೇ ಹಾಗೆ ಮದುವೆ ಆಗಿಲ್ಲ ಅನ್ನೋ ಯೋಚನೆ ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಸುಧಾ ಬೆಳವಾಡಿ ಮಾತನಾಡಿದ್ದಾರೆ.

ನಮ್ಮ ಸಮಾಜವೇ ಹಾಗೆ ಹೆಣ್ಮಕ್ಕಳನ್ನು ದೂಷಿಸಿ ಸುಮ್ಮನೆ ಬ್ಲೇಮ್ ಗೇಮ್ ಮಾಡ್ತಾರೆ: ನಿವೇದಿತಾ ಗೌಡ ಗರಂ

'ಒಂದು ಲಿಸ್ಟ್ ರೆಡಿ ಮಾಡಿಕೊಂಡೆ. ನನ್ನ ಸುತ್ತ ಇರುವ ಎಲಿಜಿಬಲ್ ಬ್ಯಾಚುಲರ್ಸ್‌ ಹೆಸರು ಬರೆದುಕೊಂಡು ಸತ್ಯಗೆ ಟಿಕ್ ಮಾಡಿದೆ. ಸತ್ಯ ನನ್ನ ಗಂಡ. ಅವರು ನನ್ನ ಅಣ್ಣನ ಸ್ನೇಹಿತರು. ಆಗಾಗ ಮನೆಗೆ ಬರುತ್ತಿದ್ದರು. ನಮ್ಮ ಅಮ್ಮನಿಗೆ ತುಂಬಾನೇ ಕ್ಲೋಸ್ ಏನೇ ಕಷ್ಟ ಇದ್ರೂ ಸತ್ಯಾ.....ಎನ್ನುತ್ತಿದ್ದರು. ಈ ತರ ಕಷ್ಟ ಆಗಿದೆ ಕಣೋ ಬಾರೋ ಅಂದ್ರೆ ಸ್ಕೂಟರ್‌ನಲ್ಲಿ ಬರುತ್ತಿದ್ದ. ಸರಿ ಹೋಗುತ್ತಾನೆ ನನಗೆ ಎಂದು ಮನೆಯಲ್ಲಿ ಸತ್ಯ ಬಗ್ಗೆ ರಿವೀಲ್ ಮಾಡಿದೆ. ಪ್ರಕಾಶ್‌ ಎಲ್ಲೋ ಇದ್ದ ಆಗ ಅಮ್ಮ ಕಾಲ್ ಮಾಡಿದ್ರು. ಅವನು ಒಳ್ಳೆ ಹುಡುಗ ಅವನಿಗೆ ಗರ್ಲ್‌ಫ್ರೆಂಡ್‌ ಇರಬಹುದು ಇವಳು ಬಗ್ಗೆ ನನಗೆ ಗೊತ್ತಿಲ್ಲ ಎಂದು ಅಣ್ಣ ಹೇಳಿದ. ಹುಡುಗನಿಗೆ ಹೇಳಿಲ್ಲ ಮೊದಲು ಹೇಳು ಅಂದ್ರು. ಸತ್ಯಗೆ ಕಾಲ್ ಮಾಡಿ ಮನೆ ಬರಲು ಹೇಳಿದೆ ಬಂದ ತಕ್ಷಣ ಊಟಕ್ಕೆ ಕರ್ಕೊಂಡು ಹೋದೆ. 'ಮನೆಯಲ್ಲಿ ಮದ್ವೆ ಮದ್ವೆ ಅಂತ ಕಾಟ ಕೊಡುತ್ತಿದ್ದಾರೆ. ಒಂದು ವೇಳೆ ಮದ್ವೆ ಆದ್ರೆ ನಿನ್ನೇ ಅಗುವುದು ಎಂದು ಹೇಳಿದೆ'. ನಮ್ಮಿಬ್ಬರ ನಡುವೆ ಈ ರೀತಿ ಭಾವನೆ ಇರದ ಕಾರಣ ಎರಡು ತಿಂಗಳು ಸಮಯ ತೆಗೆದುಕೊಂಡು ಮುಂದುವರೆದಿದ್ದು ಎಂದು ಸುಧಾ ಬೆಳವಾಡಿ ಹೇಳಿದ್ದಾರೆ. 

ತಾಯಿ ಅಗಲಿ 4 ದಿನ ಕಳೆದಿಲ್ಲ ಸೆಟ್‌ಗೆ ಆಗಮಿಸಿದ ಶುಭಾ ಪೂಂಜಾ; ಕಣ್ಣೀರಿಟ್ಟ ವಿಡಿಯೋ ವೈರಲ್

ಎರೆಡು ತಿಂಗಳು ಕಳೆದ ಮೇಲೆ ಏನಪ್ಪ ಎಂದು ಅಮ್ಮ ಪ್ರಶ್ನೆ ಮಾಡಿದ್ದಕ್ಕೆ ಸರಿ ಆಂಟಿ ಮದುವೆ ಫಿಕ್ಸ್ ಮಾಡಿ ಅಂತ ಹೇಳಿದೆ. 1990ರಲ್ಲಿ ಮದುವೆ ಆದ್ವಿ' ಎಂದಿದ್ದಾರೆ ಸುಧಾ. 

YouTube video player