ಸುದೀಪ್‌ ಹೇಳಿದ ಮೂರು ಮಾತುಗಳು

- ಈ ಹಿಂದೆ ಸಿನಿಮಾ ಬಿಡುಗಡೆ ಮಾಡುವ ಹೊತ್ತಿನಲ್ಲಿ ನಮಗೆ ಒಳ್ಳೆಯ ಥಿಯೇಟರ್‌ ಸಿಗಬೇಕು. ಅದು ಇಂಥದ್ದೇ ಚಿತ್ರಮಂದಿರ ಆಗಬೇಕು ಎಂದು ಪಟ್ಟು ಹಿಡಿದು ಅಲ್ಲೇ ಸಿನಿಮಾ ಬಿಡುಗಡೆ ಮಾಡುತ್ತಿದ್ವಿ. ಆದರೆ, ಈಗ ಆ ಪರಿಸ್ಥಿತಿ ಬದಲಾಗಿದೆ. ಒಳ್ಳೆಯ ಥಿಯೇಟರ್‌ ಬೇಕು ಎನ್ನುತ್ತಿದ್ದ ನಾವೇ ಈಗ ಥಿಯೇಟರ್‌ಗಳು ಸಿಕ್ಕರೆ ಸಾಕು ಎನ್ನುತ್ತಿದ್ದೇವೆ. ಯಾಕೆಂದರೆ ಚಿತ್ರಮಂದಿರಗಳಲ್ಲೇ ಸಿನಿಮಾಗಳನ್ನು ನೋಡಬೇಕೆಂಬ ಕಾತರ ಹೆಚ್ಚಿದೆ.

ಸ್ಟಾರ್ಸ್‌ ಸಿನಿಮಾ ನೋಡೋಕೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಬಿಗ್ ಶಾಕ್! 

- ಪ್ರತಿಯೊಂದು ಚಿತ್ರಕ್ಕೂ, ಸಿನಿಮಾ ಮಂದಿಗೂ ಥಿಯೇಟರ್‌ ಅನ್ನೋದು ದೇವಾಲಯ ಇದ್ದಂತೆ. ಇಂಥ ದೇವಾಲಯಗಳು ಆದಷ್ಟುಬೇಗ ಎಂದಿನಂತೆ ಚೇತರಿಸಿಕೊಳ್ಳಲಿ. ಸಿನಿಮಾಗಳು ಎಲ್ಲೋ ಕಳೆದು ಹೋಗೋದು ಬೇಡ. ಥಿಯೇಟರ್‌ಗಳಿಗೆ ಬರಲಿ. ಅಲ್ಲೇ ಬಿಡುಗಡೆ ಮಾಡಿ, ಖುಷಿಯಾಗಿ ಎಲ್ಲರು ಚಿತ್ರವನ್ನು ದೊಡ್ಡ ಪರದೆ ಮೇಲೆ ನೋಡೋಣ. ‘ಐರಾವನ್‌’ ಚಿತ್ರದ ಟೀಸರ್‌ ತುಂಬಾ ಚೆನ್ನಾಗಿ ಮಾಡಿದ್ದಾರೆ. ಜೆಕೆ ಹಾಗೂ ವಿವೇಕ್‌ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರವನ್ನು ನಾವು ಚಿತ್ರಮಂದಿರದಲ್ಲೇ ನೋಡೋಣ. ಅಂಥದ್ದೊಂದು ಶುಭಗಳಿಗೆ ಆದಷ್ಟುಬೇಗ ಬರಲಿ.

"

- ಕೆಲವು ವರ್ಷಗಳ ಹಿಂದಿನಿಂದ ನಾನು ಮಾತು ಆರಂಭಿಸುತ್ತೇನೆ. ಆಗ ನಾನು ಜೆಕೆ ಸ್ಥಾನದಲ್ಲಿ ಇದ್ದೆ ಅಂದುಕೊಳ್ಳಿ. ಆಗಷ್ಟೆಚಿತ್ರರಂಗಕ್ಕೆ ಬರುತ್ತಿದೆ. ಆಗ ನಮಗೆ ಪರಿಚಯ ಇದ್ದಿದ್ದು ರಾಕ್‌ಲೈನ್‌ ವೆಂಕಟೇಶ್‌ ಅವರಂತಹ ಕೆಲವೇ ಗಣ್ಯರು ಮಾತ್ರ. ಇವತ್ತು ಅವರ ಮಗ ಯತೀಶ್‌ ನನ್ನ ಮುಂದೆ ನಿಂತುಕೊಂಡು ಐರಾವನ್‌ ಸಿನಿಮಾದ ಪ್ರಸೆಂಟೇಷನ್‌ ಮಾಡಿದ್ದು ನೋಡಿ ಯಾಕೋ ನನಗೆ ಮೊದಲ ಬಾರಿಗೆ ವಯಸ್ಸಾಯಿತಲ್ಲ ಎನ್ನುವ ಫೀಲ್‌ ಬಂತು. ಚಿಕ್ಕ ಹುಡುಗರು ನಮ್ಮ ಮುಂದೆ ಬಂದಾಗ ಹೀಗೆ ನಾವು ಹಿರಿಯರಾಗಿದ್ದೇವೆ ಅನಿಸುತ್ತದೆ. ಯತೀಶ್‌, ಒಳ್ಳೆಯ ಬ್ಯುಸಿನೆಸ್‌ಮ್ಯಾನ್‌ ಆಗ್ತಾರೆ.