ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್ ಆಗಿದೆ. ಸಿನಿಮಾದಿಂದ ಬರ್ತಿರುವ ಮೂರನೇ ಹಾಡು ಇದಾಗಿದೆ. ಈಗಾಗಲೇ ರಿಲೀಸ್ ಆಗಿರುವ ರಾ..ರಾ..ರಕ್ಕಮ್ಮ ಹಾಡು ಸೂಪರ್ ಹಿಟ್ ಆಗಿದೆ. ಬಳಿಕ ಬಂದ ರಾಜಕುಮಾರಿ ಹಾಡು ಕೂಡ ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಮತ್ತೊಂದು ರಿಲೀಸ್ ಆಗಿದೆ. ಈ ಹಾಡಿನಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್ ಆಗಿದೆ. ಸಿನಿಮಾದಿಂದ ಬರ್ತಿರುವ ಮೂರನೇ ಹಾಡು ಇದಾಗಿದೆ. ಈಗಾಗಲೇ ರಿಲೀಸ್ ಆಗಿರುವ ರಾ..ರಾ..ರಕ್ಕಮ್ಮ ಹಾಡು ಸೂಪರ್ ಹಿಟ್ ಆಗಿದೆ. ಬಳಿಕ ಬಂದ ರಾಜಕುಮಾರಿ ಹಾಡು ಕೂಡ ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಮತ್ತೊಂದು ರಿಲೀಸ್ ಆಗಿದೆ. ಈ ಹಾಡಿನಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. ಹೇ ಫಕೀರಾ...ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಅನೂಪ್ ಭಂಡಾರಿ ಅವರೆ ಸಾಹಿತ್ಯ ರಚಿಸಿದ್ದಾರೆ. ಹೇ ಫಕೀರಾ ಹಾಡಿಗೆ ಸಂಚಿತ್ ಹೆಗ್ಡೆ, ಚಿನ್ಮಯಿ ಶ್ರೀಪಾದ, ಅಜನೀಶ್ ಮತ್ತು ಅನೂಪ್ ಭಂಡಾರಿ ಧ್ವನಿ ನೀಡಿದ್ದಾರೆ.

ಹೇ ಫಕೀರಾ ಹಾಡು ಕನ್ನಡ ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬಂದಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಹೇ ಫಕೀರಾ ಹಾಡು ರಿಲೀಸ್ ಆಗಿದೆ. ರಿಲೀಸ್ ಆಗಿ ಕೆಲವೇ ಸಿನಿಮಾದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆದಿದೆ. ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ ಇಂಟ್ರುಡಕ್ಷನ್ ಹಾಡು ಇದ್ದ ಹಾಗಿದೆ. ನಿರೂಪ್ ಸಂಜೀವ್ ಗಂಭೀರ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಜು ಊರಿಗೆ ಬರುವ ಹಾಡು ಇದಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. 

ವಿಕ್ರಾಂತ್ ರೋಣ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ವಿಕ್ರಾಂತ್ ರೋಣ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಸೌತ್ ಸಿನಿರಂಗದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತರೆಗೆ ಬಂದಿರುವ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವ ಜೊತೆಗೆ ಬಾಕ್ಸ್ ಆಫೀಸಿನಲ್ಲೂ ಭರ್ಜರಿ ಕಮಾಯಿ ಮಾಡಿವೆ. ಆರ್ ಆರ್ ಆರ್, ಕೆಜಿಎಫ್ 2, ವಿಕ್ರಮ್, ಪುಷ್ಪ ಮತ್ತು 777 ಚಾರ್ಲಿ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕೋಟಿ ಕೋಟಿ ಕಲೆಕ್ಷನ್ ಮಾಡಿವೆ. ಇದೀಗ ವಿಕ್ರಾಂತ್ ರೋಣ ಸೌತ್ ಸಿನಿರಂಗದಿಂದ ಬರ್ತಿರುವ ಮತ್ತೊಂದು ಸಿನಿಮಾವಾಗಿದೆ. ಹಾಗಾಗಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. 

'ಕೊನೆಗೆ ಫಿಲಾಸಫಿಕಲ್‌ ಆಗಿ ಎರಡು ಸಾಲು ಹೇಳಿದರು. ಈ ಸಾಲಿನಲ್ಲಿ ಸುದೀಪ್‌ ದಕ್ಕಿದರೆ ಸಂತೋಷ'!

ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಮತ್ತು ನಿರೂಪ್ ಭಂಡಾರಿ ಜೊತೆಗೆ ನೀತಾ ಅಶೋಕ್ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಮಿಂಚಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾಕ್ವೆಲಿನ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಜಾಕ್ವೆಲಿನ್ ಡಾನ್ಸ್ ಮಾಡಿರುವ ಹಾಡು ಈಗಾಗಲೇ ಭರ್ಜರ್ ಸಕ್ಸಸ್ ಕಂಡಿದೆ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣ ಇದೇ ತಿಂಗಳು 28ಕ್ಕೆ ರಿಲೀಸ್ ಆಗುತ್ತಿದೆ.

Scroll to load tweet…

ಹೇ ಫಕೀರಾ ಹಾಡು ಕನ್ನಡ ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬಂದಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಹೇ ಫಕೀರಾ ಹಾಡು ರಿಲೀಸ್ ಆಗಿದೆ.