ಕಿಚ್ಚ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಅದ್ದೂರಿ ಆಡಿಯೋ ಬಿಡುಗಡೆ ಮಾ.28ಕ್ಕೆ ನಡೆಯಲಿದೆ. 

ಈ ಮೂಲಕ ಸುದೀಪ್‌ ಅಭಿಮಾನಿಗಳಿಗೆ ಮುಂದಿನ ತಿಂಗಳು ಮತ್ತೊಂದು ದೊಡ್ಡ ಸಂಭ್ರಮ ಎದುರಾಗುತ್ತಿದೆ. ನಿರ್ದೇಶಕ ಶಿವಕಾರ್ತಿಕ್‌ ಹಾಗೂ ನಿರ್ಮಾಪಕ ಸೂರಪ್ಪ ಬಾಬು‘ಕೋಟಿಗೊಬ್ಬ 3’ ಚಿತ್ರದ ಆಡಿಯೋ ಬಿಡುಗಡೆಗೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸದ್ಯ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಮುಗಿದಿದೆ. ಕೊರೋನಾ ಸಂಕಷ್ಟಇಲ್ಲದೆ ಹೋಗಿದ್ದರೆ ಇಷ್ಟೊತ್ತಿಗೆ ‘ಕೋಟಿಗೊಬ್ಬ 3’ ಸಿನಿಮಾ ತೆರೆ ಮೇಲೆ ಮೂಡುತ್ತಿತ್ತು. ಈಗ ಏಪ್ರಿಲ್‌ ತಿಂಗಳ 29ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಆಡಿಯೋ ಬಿಡುಗಡೆ ಮೂಲಕ ದೊಡ್ಡ ಮಟ್ಟದಲ್ಲಿ ಚಿತ್ರತಂಡ ಪ್ರಚಾರ ಆರಂಭಿಸಿದೆ. ‘ವಿಕ್ರಾಂತ್‌ ರೋಣ’ ಚಿತ್ರದ ಬ್ಯುಸಿಯಲ್ಲಿರುವ ಸುದೀಪ್‌ ಅವರು ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆ, ಅದರಲ್ಲಿನ ಪಾತ್ರ ಹಾಗೂ ನಟನೆ ಬಗ್ಗೆ ಹೆಚ್ಚು ಮಾತನಾಡಿಲ್ಲ.

ವಿಕ್ರಾಂತ್ ರೋಣನಿಗೂ ಮುನ್ನ ಕೋಟಿಗೊಬ್ಬ 3 ರಿಲೀಸ್..! ಏನಂತಾರೆ ಸುದೀಪ್ 

ಹೆಚ್ಚು ಕಮ್ಮಿ ‘ವಿಕ್ರಾಂತ್‌ ರೋಣ’ ಚಿತ್ರದ ಕೆಲಸಗಳು ಮುಕ್ತಾಯ ಆಗುತ್ತಿರುವುದರಿಂದ ಸುದೀಪ್‌ ಅವರು ಕೂಡ ಚಿತ್ರದ ಪ್ರಚಾರಕ್ಕೆ ಸಾಥ್‌ ನೀಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕಲರ್ಸ್‌ ಕನ್ನಡ ವಾಹಿನಿಯ ಸಾರಥ್ಯದಲ್ಲಿ ಚಿತ್ರದ ಆಡಿಯೋ ಬಿಡುಗಡೆಯ ರಂಗರಂಗಿನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎನ್ನಲಾಗುತ್ತಿದೆ.