Asianet Suvarna News Asianet Suvarna News

ನಟಿ ಶ್ರೀಲೀಲಾ ತಾಯಿಯ ಮತ್ತೊಂದು ಕಿರಿಕ್; ಗಂಡನ ಮನೆಗೆ ನುಗ್ಗಿ ಸ್ವರ್ಣಲತಾ‌ ದಾಂಧಲೆ, ದೂರು ದಾಖಲು

ಶ್ರೀಲೀಲಾ ತಾಯಿ ಕಿರಿಕ್ ಮೇಲೆ ಕಿರಿಕ್ ಮಾಡಿಕೊಂಡು ಸುದ್ದಿಯಾಗುತ್ತಿದ್ದಾರೆ. ಸ್ವರ್ಣಲತಾ ತನ್ನ ಗಂಡನ ಮನೆಗೆ ಅಕ್ರಮವಾಗಿ ನುಗ್ಗಿ ದಾಂಧಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Subhakar rao complaint against his wife and actress sreeleela mother swarnalatha sgk
Author
First Published Oct 5, 2022, 12:30 PM IST

ಖ್ಯಾತ ನಟಿ ಶ್ರೀಲೀಲಾ ಸದ್ಯ ಕನ್ನಡ ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಶ್ರೀಲೀಲಾ ತಾಯಿ ಕಿರಿಕ್ ಮೇಲೆ ಕಿರಿಕ್ ಮಾಡಿಕೊಂಡು ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಪ್ರತಿಷ್ಠಿತ ಅಲೆಯನ್ಸ್ ವಿಶ್ವವಿದ್ಯಾನಿಲಯ ವಿಚಾರವಾಗಿ ಗಲಾಟೆ ಮಾಡಿಕೊಂಡು ವಿಚಾರಣೆ ಎದುರಿಸುತ್ತಿದ್ದಾರೆ. ಆಗಲೇ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ. ಈ ಬಾರಿ ಸ್ವರ್ಣಲತಾ ಸುದ್ದಿಯಾಗಿರುವುದು ತನ್ನ ಪತಿಯ ವಿಚಾರಕ್ಕೆ. 

ಸ್ವರ್ಣಲತಾ ತನ್ನ ಗಂಡನ ಮನೆಗೆ ಅಕ್ರಮವಾಗಿ ನುಗ್ಗಿ ದಾಂಧಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸ್ವರ್ಣಲತಾ ಪತಿ ಸುಭಾಕರ್ ರಾವ್ ಸೂರಪನೇನಿ ಅವರಿಂದ ದೂರ ಆಗಿ ಪ್ರತ್ಯೇಕವಾಗಿ ವಾಸುತ್ತಿದ್ದರು. ಆದರೀಗ ದಿಢೀರ್ ಗಂಡನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕೋರಮಂಗಲದ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನ ಫ್ಲಾಟ್ ಗೆ ಅಕ್ರಮವಾಗಿ ನುಗ್ಗಿ ಸ್ವರ್ಣಲತಾ ಗಲಾಟೆ ಮಾಡಿದ್ದಾರೆ. ಮನೆಗೆ ಬೀಗ ಹಾಕಿದ್ದರೂ ಸಹ ಮುರಿದು ಒಳ ನುಗ್ಗಿರುವ ಸ್ವರ್ಣಲತಾ ದಾಂಧಲೆ ಮಾಡಿದ್ದಾರೆ ಎಂದು ಪತಿ ಸುಭಾಕರ್ ರಾವ್ ಆರೋಪ ಮಾಡಿದ್ದಾರೆ.  

ಪತ್ನಿ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿರುವ  ಸುಭಾಕರ್ ರಾವ್ ದೂರ ದಾಖಲಿಸಿದ್ದಾರೆ. ಆಡುಗೋಡಿ ಪೊಲೀಸ್ ಸ್ಟೇಷನ್ ನಲ್ಲಿ ಸುಭಾಕರ್ ರಾವ್ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 448, 34 ಅಡಿಯಲ್ಲಿ ಸ್ವರ್ಣಲತಾ ವಿರುದ್ಧ ದೂರು ದಾಖಲಾಗಿದೆ. ಸುಭಾಕರ್ ರಾವ್ ಅವರ ದೂರಿನ ಮೇರಿಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಸ್ವರ್ಣಲತಾ ಅವರಿಗೆ ಪತಿ ಸುಭಾಕರ್ ರಾವ್ ಫ್ಲಾಟ್ ನೀಡಿದ್ದರು. ಆದರೆ ಗಂಡ ಹೆಂಡತಿ ನಡುವೆ ಮನಸ್ಥಾಪ ಆದ ಬಳಿಕ ಇಬ್ಬರೂ ಮನೆಯಿಂದ ಹೊರಡೆದಿದ್ದರು. ಬಳಿಕ ಸುಭಾಕರ್ ರಾವ್ ಮನೆಗೆ ಬೀಗ ಹಾಕಿದ್ದರು. ಇದೀಗ ಸ್ವರ್ಣಲತಾ ಅಕ್ಟೋಬರ್ 3ರಂದು ಫ್ಲಾಟ್‌ಗೆ ಅಕ್ರಮವಾಗಿ ನುಗ್ಗಿ ಗಲಾಟೆ ಮಾಡಿದ್ದಾರೆ. ಪತ್ನಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ ಸುಭಾಕರ್ ರಾವ್.

ಕೋಟಿ ಕೋಟಿ ಡೀಲ್‌ಗೆ ನಟಿ ಶ್ರೀಲೀಲಾ ತಾಯಿ ಸ್ಕೆಚ್; ಸ್ವರ್ಣಲತಾ ರೌಡಿಸಂ ವೀಡಿಯೋ ವೈರಲ್

ಶ್ರೀಲೀಲಾ ಮಗಳಲ್ಲಾ ಎಂದಿದ್ದ ಸುಭಾಕರ್ ರಾವ್ 

ಕಳೆದ ಕೆಲವು ತಿಂಗಳ ಹಿಂದೆ ನಟಿ ಶ್ರೀಲೀಲಾ ತನ್ನ ಮಗಳಲ್ಲ ಎಂದು ಹೇಳಿದ್ದರು. ಎಲ್ಲಾ ಕಡೆ ಶ್ರೀಲೀಲಾ ನನ್ನ ಮಗಳು ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಆಕೆ ನನ್ನ ಮಗಳಲ್ಲ. ಪತ್ನಿ ಜತೆ ಡೈವೋರ್ಸ್​ ಆದ ನಂತರ ಶ್ರೀಲೀಲಾ ಹುಟ್ಟಿದ್ದಾರೆ. ಆ ಡೈವೋರ್ಸ್ ಕೇಸ್ ಕೋರ್ಟ್​ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ನಾನು ಅವಳಿಗೆ ಜನ್ಮ ನೀಡಿದ ಅಪ್ಪನಲ್ಲ. ವಿನಾಕಾರಣ ನಾನು ಆಕೆಯ ತಂದೆ ಎಂದು ಹೇಳುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದು ಶ್ರೀಲೀಲಾ ಮತ್ತು ಆಕೆಯ ತಾಯಿ ನನ್ನ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು  ಆರೋಪಿಸಿದ್ದರು. ನಟಿ ಶ್ರೀಲೀಲಾ ತನ್ನ ತಾಯಿ ಸ್ವರ್ಣಲತಾ ಜೊತೆ ಬೆಂಗಲೂರಿನಲ್ಲಿ ನೆಲೆಸಿದ್ದಾರೆ. 

ಕನ್ನಡ ಸ್ಟಾರ್‌ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಬಂಧನ ಭೀತಿ

ಕೋಟಿ ಡೀಲ್‌ಗೆ ಸ್ಕೆಚ್ ಹಾಕಿದ್ದ ಸ್ವರ್ಣಲತಾ

ಖ್ಯಾತ ರಾಜಕಾರಣಿಯೊಬ್ಬರಿಗೆ ಪ್ರತಿಷ್ಠಿತ ಅಲೆಯನ್ಸ್ ವಿಶ್ವ ವಿದ್ಯಾಲಯ ಮಾರಿಸಲು  ಶ್ರೀಲೀಲಾ ತಾಯಿ ಸ್ವರ್ಣಲತಾ ಪ್ಲಾನ್ ಮಾಡಿದ್ದರು ಎನ್ನುವ ಆರೋಪ ಕೂಡ ಇದೆ. ಇದಕ್ಕಾಗಿ ಅಲೆಯನ್ಸ್ ವಿಶ್ವ ವಿಧ್ಯಾಲಯದ ಮಾಜಿ ಚೇರ್ಮನ್ ಮಧುಕರ್ ಅಂಗೂರ್ ಜೊತೆ ಸೇರಿ ಡೀಲ್ ಕುದುರಿಸಲು ಮುಂದಾಗಿದ್ದರು. ಕೋರ್ಟ್ ಆದೇಶವಿದೆ, ಈ‌ ಕಾಲೇಜು‌ ನಮ್ಮದು ಎಂದು ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ವಿವಿಗೆ ಅಕ್ರಮವಾಗಿ ನುಗ್ಗಿದ್ದರು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದರು. ಈ ಘಟನೆ ಬಳಿಕ ಸ್ವರ್ಣಲತಾ ವಿರುದ್ದ  ಎಫ್ಐಆರ್ ದಾಖಲಾಗಿದೆ. ಇದೀಗ ಮತ್ತೊಂದು ಕಿರಿಕ್ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.  

Follow Us:
Download App:
  • android
  • ios