ದರ್ಶನ್ ಅಭಿನಯದ 'ಡೆವಿಲ್- ದಿ ಹೀರೋ' ಚಿತ್ರದ ಶೀರ್ಷಿಕೆ 'ದಿ ಡೆವಿಲ್' ಎಂದು ಬದಲಾಗಿದೆ. ನಿರ್ದೇಶಕ ಮಿಲನಾ ಪ್ರಕಾಶ್ ಬಂಡವಾಳ ಹೂಡಿರುವ ಈ ಚಿತ್ರದ ಟೀಸರ್ ದರ್ಶನ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ರಚನಾ ರೈ ನಾಯಕಿ. ದರ್ಶನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಾರೆಗಮ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಶೂಟಿಂಗ್ ಹಂತದಲ್ಲಿ ಅರ್ಧಕ್ಕೇ ನಿಂತಿರುವ ದರ್ಶನ್ (Darshan Thoogudeepa) ನಟನೆಯ 'ಡೆವಿಲ್- ದಿ ಹೀರೋ' ಚಿತ್ರದ (Devil- The Hero) ಟೈಟಲ್ ಚೇಂಜ್ ಆಗಿದೆ. ಈ ಸಿನಿಮಾಗೆ ಸ್ವತಃ ನಿರ್ದೇಶಕ ಮಿಲನಾ ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಈ ಚಿತ್ರ ಆಗಷ್ಟೇ ಶೂಟಿಂಗ್ ಶುರು ಮಾಡಿಕೊಂಡಿತ್ತು. ಆದರೆ ನಟ ದರ್ಶನ್ ಅವರು ಕೊಲೆ ಕೇಸ್ ಆರೋಪಿಯಾಗಿ ಜೈಲು ಸೇರಿದ್ದ ಕಾರಣಕ್ಕೆ ಶೂಟಿಂಗ್ ಅಷ್ಟಕ್ಕೇ ನಿಂತಿತ್ತು. ಇದದೀಗ ಹೊಸ ಸುದ್ದಿ ಬಂದಿದೆ..

ಕೊಲೆ ಕೇಸ್‌ ಆರೋಪದಿಂದ ಅನಾರೋಗ್ಯದ ಕಾರಣಕ್ಕೆ ಜಾಮೀನು ಪಡೆದು ಸದ್ಯ ಚಿಕಿತ್ಸೆಯಲ್ಲಿರುವ ನಟ ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ಈ ತಿಂಗಳು 16ಕ್ಕೆ (February 16) ನಟ ದರ್ಶನ್ ಹುಟ್ಟುಹಬ್ಬವಿದೆ. ಈ ಬಾರಿ ಅವರು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅದನ್ನು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ಅವರ ನಟನೆಯ ಮುಂಬರುವ ಸಿನಿಮಾ ಡೆವಲ್ ಟೀಸರ್ ಬಿಡುಗಡೆ ಆಗಿದೆ. 

'ನನ್ನ ಪ್ರೀತಿಯ ರಾಮು' ಬೇರೆ ನಟರು ರಿಜೆಕ್ಟ್ ಮಾಡಿದ್ಯಾಕೆ? ದರ್ಶನ್ ಸೂಚಿಸಿದ್ದು ಪುನೀತ್ ಮ್ಯಾನೇಜರ್!

ಫ್ಯಾನ್ಸ್‌ಗಳಿಗೆ ದರ್ಶನ್ ಅವರ ಹುಟ್ಟುಹಬ್ಬದ ಗಿಫ್ಟ್ ಎಂಬಂತೆ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಈ ಮೊದಲಿನ ಟೈಟಲ್ ಚೇಂಜ್ ಆಗಿದೆ. ಈ ಮೊದಲು ದರ್ಶನ್ ನಟನೆಯ ಈ ಸಿನಿಮಾ ಟೈಟಲ್ 'ಡೆವಿಲ್- ದಿ ಹೀರೋ' ಎಂದಿತ್ತು. ಆದರೆ ಈಗ ಅದು ಸ್ವಲ್ಪ ಬದಲಾವಣೆ ಆಗಿ 'ದಿ ಡೆವಿಲ್' (The Devil) ಎಂದಷ್ಟೇ ಆಗಿದೆ. ಅಂದರೆ, 'ಡೆವಿಲ್' ಇದ್ದಿದ್ದು 'ದಿ ಡೆವಿಲ್' ಆಗಿದೆ, 'ದಿ ಹೀರೋ' ಕಂಪ್ಲೀಟ್ ಡಿಲೀಟ್ ಆಗಿದೆ. ಅಲ್ಲಿಗೆ ಈ ಚಿತ್ರದಲ್ಲಿ 'ಹೀರೋ' ಮಾಯವಾಗಿದ್ದಾನೆ. ಯಾಕೆ ಹೀಗೆ? ಗೊತ್ತಿಲ್ಲ.. 

ದಿ ಡೆವಿಲ್ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದ ಪಾತ್ರವರ್ಗದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಮತ್ತೆ ಶೂಟಿಂಗ್ ಮುಂದುವರೆದ ಮೇಲೆ ಉಳಿದ ಪಾತ್ರವರ್ಗಗಳ ಬಗ್ಗೆ ರಿವೀಲ್ ಆಗಬಹುದು. ಕಳೆದ ವರ್ಷ ಈ ಚಿತ್ರದ ಮಹೂರ್ತದ ಬಳಿಕ ತೆರೆಗೆ ಬಂದಿದ್ದ ದರ್ಶನ್ ನಟನೆಯ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸದ್ಯ ಡೆವಿಲ್ ದರ್ಶನ್‌ ನಟಿಸುತ್ತಿರುವ ಚಿತ್ರವಾಗಿದೆ. 

ಆ ಸಿನಿಮಾ ಬಳಿಕ ಅಣ್ಣಾವ್ರು ನಟನೆಯನ್ನು ನಿಲ್ಲಿಸಲು ಬಯಸಿದ್ದರು, ವಯಸ್ಸಾಯ್ತು ಅಂದಿದ್ರು!

ಈ ಚಿತ್ರದಲ್ಲಿ ನಟ ದರ್ಶನ್ ಸ್ವಲ್ಪ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಾರೆ ಎನ್ನಿಸುತ್ತಿದೆ. ಕಾರಣ ಚಿತ್ದ ಟೈಟಲ್, ಡೆವಿಲ್. ಆದರೆ, ಸಿನಿಮಾದ ಕಥೆ ಗೊತ್ತಿಲ್ಲ, ಹೀಗಾಗಿ ಅದನ್ನು ನಿಖರವಾಗಿ ಹೇಳಲು ಅಸಾಧ್ಯ. ಅಂದಹಾಗೆ, ಸರೆಗಮ ಮ್ಯೂಸಿಕ್ ಸಂಸ್ಥಗೆ ಈ ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿದೆ. ಹೀಗಾಗಿ ಸಾರೆಗಮ ಯೂಟ್ಯೂಬ್ ಚಾನೆಲ್ ಈ ಟೀಸರ್ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಟೈಟಲ್ ಬದಲಾವಣೆ ಗಮನಿಸಲಾಗಿದೆ.