ಪತಿಯೊಂದಿಗೆ ಮಗಳ ಫೋಟೋ ರಿವೀಲ್ ಮಾಡಿದ ಶೃತಿ ಹರಿಹರನ್
ಮೀಟೂ ಆರೋಪದ ನಂತರ ತೆರೆ ಮರೆಗೆ ಸರಿದಿದ್ದ ಶೃತಿ ಹರಿಹರನ್ ಬಹಳ ಸಮಯದ ನಂತರ ಪತಿ ಹಾಗೂ ಮಗಳ ಜೊತೆ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಬ್ಯೂಟಿ ವಿತ್ ಬ್ರೇನ್ ಶೃತಿ ಹರಿಹರನ್ ಮೀಟೂ ಆರೋಪ ಭಾರೀ ಸಂಚಲನ ಮೂಡಿಸಿತ್ತು. ಅದಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ಮಗುವಾದ ನಂತರ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಎಲ್ಲಿಯೂ ಮಗಳ ಫೋಟೋವನ್ನೂ ಕೂಡಾ ರಿವೀಲ್ ಮಾಡಿರಲಿಲ್ಲ.
ದರ್ಶನ್ ಸಿನಿಮಾ ಬಾಕ್ಸ್ ಅಫೀಸ್‌ನಲ್ಲಿ ಗಳಿಸಿದ್ದು ಎಷ್ಟು?
ಇತ್ತೀಚಿಗೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಭಾಗಿಯಾಗಿದ್ದರು. ಪತಿಯ ಜೊತೆ ಮಗಳನ್ನು ಕರೆದುಕೊಂಡು ಬಂದಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕನ್ನಡಿಗರಿಗೆ ಸರ್ಪ್ರೈಸ್; ಸಮಂತಾರನ್ನು ಕರ್ಕೊಂಡು ಬಂದ್ರು ಸುದೀಪ್!
ಮಗಳಿಗೆ ಕೆಲ ದಿನಗಳ ಹಿಂದೆ 'ಜಾನಕಿ' ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಕೇರಳದಲ್ಲಿ ಸೆಟಲ್ ಆಗಿದ್ದಾರೆ. ಪತಿ ರಾಮ್ ಕಲರಿಪಟ್ಟು ಕಲಾವಿದ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನೃತ್ಯ ನಿರ್ದೇಶಕ.
ಮೀಟೂ ಆರೋಪದ ನಂತರ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿಗೆ 'ಮನೆ ಮಾರಾಟಕ್ಕಿದೆ' ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
- ಫೋಟೋ ಕೃಪೆ: ಬೆಂಗಳೂರು ಟೈಮ್ಸ್