ಅ.15ಕ್ಕೆ ಶ್ರೀಕೃಷ್ಣಃಜಿಮೇಲ್‌.ಕಾಮ್‌ ರಿಲೀಸ್‌ ಹಾಡುಗಳು ಬಿಡುಗಡೆ, ಸಿನಿಮಾಗೆ ಹೆಚ್ಚಿದ ಕುತೂಹಲ 

ಜಾಕಿ ಭಾವನಾ ಹಾಗೂ ಡಾರ್ಲಿಂಗ್‌ ಕೃಷ್ಣ ಜೋಡಿ ನಟನೆಯ ‘ಶ್ರೀಕೃಷ್ಣಜಿಮೇಲ್‌.ಕಾಂ’ ಸಿನಿಮಾ ಅಕ್ಟೋಬರ್‌ 15ರಂದು ಬಿಡುಗಡೆ ಆಗುತ್ತಿದೆ. ನಾಗಶೇಖರ್‌ ನಿರ್ದೇಶನದ, ಸಂದೇಶ್‌ ನಾಗರಾಜ್‌ ನಿರ್ಮಾಣದ ಈ ಚಿತ್ರದ ಟ್ರೇಲರ್‌ ಅಕ್ಟೋಬರ್‌ 2ರಂದು ಬಿಡುಗಡೆ ಆಗುತ್ತಿದೆ.

ಈಗಾಗಲೇ ಹಾಡುಗಳು ಬಿಡುಗಡೆ ಆಗಿದ್ದು, ಟ್ರೇಲರ್‌ ನಂತರ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ಮಾಡಿಕೊಂಡಿದ್ದಾರೆ. ಅ.14ರಂದು ಸುದೀಪ್‌ ಅವರ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್‌ ಅವರ ‘ಸಲಗ’ ಚಿತ್ರಗಳೂ ಬಿಡುಗಡೆ ಆಗುತ್ತಿವೆ.

ಅ.1ಕ್ಕೆ ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸ ಬಿಡುಗಡೆ

ಚಿತ್ರದ ಪ್ರಮುಖ ಹೈಲೈಟ್‌ ಹಾಡುಗಳು. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಕವಿರಾಜ್‌ ಗೀತ ರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಒಟ್ಟು ತೊಂಬತ್ತು ದಿನಗಳ ಚಿತ್ರೀಕರಣದಲ್ಲಿಯೇ ಸಿನಿಮಾವನ್ನು ಮುಗಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ.

View post on Instagram