'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಟಾಲಿವುಡ್‌‌ಗೆ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. ಹೀರೋ ಯಾರು ಗೊತ್ತಾ?

'ಕಿಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶ್ರೀಲೀಲಾ, 'ಭರಾಟೆ' ಚಿತ್ರದಲ್ಲಿ ಅಬ್ಬರಿಸಿದ ನಂತರ 'ದುಬಾರಿ' ಚಿತ್ರಕ್ಕೆ ಸಹಿ ಮಾಡಿದ್ದರು. ಏನ್‌ ಮೇಡಂ ನಿಮ್ಮ ಹೊಸ ವರ್ಷದ ಪ್ಲಾನ್ ಎಂದು ಕೇಳುವ ಹಾಗೇ ಇಲ್ಲ ಅನ್ಸುತ್ತೆ. ಮೆಡಿಕಲ್ ವ್ಯಾಸಂಗ ಮಾಡುತ್ತಲೇ ಸಿಕ್ಕಾಪಟ್ಟೆ ಸಿನಿಮಾ ಕತೆಗಳನ್ನು ಕೇಳುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡದ ಹುಡ್ಗಿ ಈಗ ಚಿನ್ನದ ರಾಯಭಾರಿ; ಬಿಟೌನ್‌ನಲ್ಲಿ 'ಭರಾಟೆ' ಹುಡುಗಿ 

ಹೌದು! ಧ್ರುವ ಸರ್ಜಾಗೆ ಜೋಡಿಯಾಗಿ 'ದುಬಾರಿ' ಚಿತ್ರಕ್ಕೆ ಸಿಹಿ ಮಾಡಿದ ಬೆನ್ನಲ್ಲೇ, ಶ್ರೀಲೀಲಾ ಧನ್ವೀರ್ ಗೌಡ ಜೊತೆ 'ಬೈ ಟೂ ಲವ್‌' ಸಿನಿಮಾ ಚಿತ್ರಕರಣದಲ್ಲಿ ಪಾಲ್ಗೊಂಡಿದ್ದಾರೆ. ಮೊದಲು ಬಾರಿ ಒಂದಾಗಿರುವ ಈ ಮುದ್ದಾದ ಜೋಡಿಯನ್ನು ಮುಹೂರ್ತ ಕಾರ್ಯಕ್ರಮದಲ್ಲಿ ಕಂಡ ಸಿನಿ ಪ್ರೇಮಿಗಳು ಭಲೇ ಎಂದಿದ್ದಾರೆ.

Click and drag to move

ಶ್ರೀಲೀಲಾ ಕನ್ನಡ ಚಿತ್ರರಂಗದಲ್ಲಿ ಮಾತ್ರ ಬ್ಯುಸಿ ಎಂದು ತಿಳಿದುಕೊಳ್ಳಬೇಡಿ. ಯಾಕಂದ್ರೆ ನಭಾ ನಟೇಶ್, ರಶ್ಮಿಕಾ, ರಚಿತಾ ಆದ್ಮೇಲೆ ಶ್ರೀಲೀಲಾನೂ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ರಾಘವೇಂದ್ರ ರಾವ್‌ ಚಿತ್ರಕಥೆ, ಗೌರಿ ನಿರ್ದೇಶನ ಹಾಗೂ ಬಾಹುಬಲಿ ಅವರ ಪ್ರೊಡಕ್ಷನ್ ಸಂಸ್ಥೆ ಅಡಿಯಲ್ಲಿ ಮೂಡಿ ಬರುತ್ತಿರುವ 'ಪೆಳ್ಳಿ ಸಂದಡಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ತೆಲುಗು ನಟ ಶ್ರೀಕಾಂತ್ ಪುತ್ರ ರೋಷನ್‌ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

View post on Instagram