Asianet Suvarna News Asianet Suvarna News

30 ದಿನ ಹೋಟೆಲ್‌ ರೂಮ್‌ಗೆ 6 ಲಕ್ಷ: ಶ್ರೀಲೀಲಾ ಐಷಾರಾಮಿ ಜೀವನದಿಂದ ನಿರ್ಮಾಪಕರಿಗೆ ನಷ್ಟ?

 ಮತ್ತೆ ಮತ್ತೆ ವಿವಾದದಲ್ಲಿ ಸಿಲುಕಿಕೊಳ್ಳುತ್ತಿರುವ ಶ್ರೀಲೀಲಾ? ಸಿನಿಮಾ ಬೇಕಾ ಯೋಚನೆ ಮಾಡಿ ಎಂದ ನೆಟ್ಟಿಗರು...

Sreeleela opts for 7 star hotel for 30 days shoot costed 6 lakhs vcs
Author
First Published Sep 17, 2022, 11:48 AM IST

2019ರಲ್ಲಿ ಕಿಸ್ (Kiss) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಂದಿನಿ ಎಂದು ಪರಿಚಯವಾದ ಶ್ರೀಲೀಲಾ (Sreeleela) ಎರಡನೇ ಸಿನಿಮಾವೂ ಸೂಪರ್ ಹಿಟ್. ಭರಾಟೆ ಚಿತ್ರದಲ್ಲಿ ಶ್ರೀಮುರಳಿ (Sri Murali) ಜೊತೆ ನಟಿಸಿದ ನಂತರ ತೆಲುಗು ಸಿನಿಮಾ ಕೈ ಸೇರಿತ್ತು. ಪೆಲ್ಲಿ ಸಂದಡಾ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯ್ತು ಆದರೆ ಲೀಲಾ ಬುಟ್ಟಿಗೆ ಸ್ಟಾರ್ ಸಿನಿಮಾಗಳ ಕಥೆ ಬಂದು ಬಿತ್ತು. ಶ್ರೀಲೀಲಾ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರೂ ಸಿನಿಮಾ ಮ್ಯಾನೇಜ್ ಮಾಡಲು ಕಾರಣ ಅವರ ತಾಯಿ ಸ್ವರ್ಣಲತಾ.

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ (Swarnalatha) ವೈದ್ಯೆ. ಅವರ ಕೈ ಗುಣ ಚೆನ್ನಾಗಿದೆ ಎಂದು ಸಾಮಾನ್ಯರು ಮಾತ್ರವಲ್ಲ ಸ್ಟಾರ್ ನಟಿಯರು ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಲೀಲಾ ಕೂಡ ಡಾಕ್ಟರ್ ಆಗಬೇಕು ಅನ್ನೋದು ಅವರ ಫ್ಯಾಮಿಲಿ ಕನಸು. ಸಿನಿಮಾ ಪ್ಯಾಶನ್ ಆಗಿರುವ ಕಾರಣ ಎರಡನ್ನೂ ಸಮವಾಗಿ ನಿಭಾಯಿಸುತ್ತಿದ್ದಾರೆ. ಸಿನಿಮಾ ಆಯ್ಕೆ ಮಾಡುವುದರಿಂದ ಹಿಡಿದು ಪ್ರತಿಯೊಂದನ್ನು ಲೀಲಾ ತಾಯಿ ಸ್ವರ್ಣಲತಾ ಆಯ್ಕೆ ಮಾಡುವುದು. ಲೀಲಾ ಜೊತೆ ಏನೇ ಮಾತನಾಡಬೇಕಿದ್ದರೂ ತಾಯಿ ಮೂಲಕವೇ ನಡೆಯಬೇಕು. 

ಏನಿದು ಕಾಂಟ್ರವರ್ಸಿ:

ಇತ್ತೀಚಿಗೆ ಸ್ವರ್ಣಲತಾ ಕೂಡ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಈಗ ಲೀಲಾ ಬಗ್ಗೆನೂ ಚರ್ಚೆ ಶುರುವಾಗಿದೆ, ಇದಕ್ಕೆ ಕಾರಣವೇ ಹೋಟೆಲ್ ಬೆಲೆ. ಟಾಲಿವುಡ್‌ ಮತ್ತು ಕನ್ನಡ ವೆಬ್‌ ಸೈಟ್‌ವೊಂದು ಮಾಡಿರುವ ವರದಿ ಪ್ರಕಾರ ಲೀಲಾ ಮಾಡುತ್ತಿರುವ ತಪ್ಪು ಮತ್ತು ನಿರ್ಮಾಪಕರು ದೃಷ್ಟಿಯಲ್ಲಿ ನಷ್ಟ ಎಷ್ಟಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

Sreeleela opts for 7 star hotel for 30 days shoot costed 6 lakhs vcs

ಹೈದರಾಬಾದ್‌ನಲ್ಲಿ (Hydarabad) ಶ್ರೀಲೀಲಾ ತೆಲುಗು ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಉಳಿದುಕೊಳ್ಳಲು 7 ಸ್ಟಾರ್ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 7 ಸ್ಟಾರ್ ಹೋಟೆಲ್‌ನ ರೂಮ್‌ ಬೆಲೆ ದಿನಕ್ಕೆ 22 ಸಾವಿರವಂತೆ. ಟ್ಯಾಕ್ಸ್‌ ಎಲ್ಲವೂ ಸೇರಿದರೆ 30 ದಿನಕ್ಕೆ 6 ಲಕ್ಷಕ್ಕೂ ಹೆಚ್ಚು ಹಣವಾಗುತ್ತದೆ. ಈ ಸಂಪೂರ್ಣ ಚರ್ಚನ್ನು ನಿರ್ಮಾಪಕರೇ ಮಾಡಬೇಕಿರುವ ಕಷ್ಟ ಆಗುತ್ತದೆ ಎನ್ನಲಾಗಿದೆ. ಈಗಷ್ಟೆ ಬೆಳೆಯುತ್ತಿರುವ ನಟಿ ನಿರ್ಮಾಣ ಸಂಸ್ಥೆಗೆ ಇಷ್ಟೊಂದು ನಷ್ಟ ಮಾಡಿದರೆ ಭವಿಷ್ಯ ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ.

ಖ್ಯಾತಿ ನಟಿ ತಾಯಿಗೆ ಸಂಕಷ್ಟ ತಂದಿಟ್ಟ ಅಲಯನ್ಸ್: ಮನೆ ಲಾಕ್, ಫೋನ್ ಸ್ವಿಚ್ ಆಫ್, ಕೇರಳಕ್ಕೆ ಎಸ್ಕೇಪ್

ನಿರ್ದೇಶಕ ತ್ರಿವಿಕ್ರಮ್ ಪತ್ನಿ ಸಾಯಿ ಸೌಜನ್ಯ ಮತ್ತು ಮಹೇಶ್ ಬಾಬು ಎಂಟರ್‌ಟೈನ್ಮೆಂಟ್ ಜಂಟಿಯಾಗಿ ಸಿನಿಮಾ ಮಾಡುತ್ತಿರುವ ಸಿನಿಮಾ ಇದಾಗಿದ್ದು ವೈಷ್ಣವ್ ತೇಜ್ ನಾಯಕನಾಗಿ ಅಭಿನಯಿಸಲಿದ್ದಾರೆ. ಪ್ರಡ್ಯೂಸರ್ಸ್‌ ಗಿಲ್ಡ್‌ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್‌ರಕಾರ ಹೀರೋಯಿನ್‌ಗಳಿಗೆ ನೀಡಲಾಗುವ ಸಂಭಾವನೆಯಲ್ಲಿಯೇ ಅವರು ಉಳಿದುಕೊಳ್ಳುವ ವೆಚ್ಚವನ್ನು ಭರಿಸಬೇಕು. ಇಷ್ಟೆಲ್ಲಾ ಇದ್ದರೂ ನಿರ್ಮಾಪಕರು ಸ್ಪೆಷಲ್ ಟ್ರೀಟ್ಮೆಂಟ್ ಕೊಡುತ್ತಿರುವುದಕ್ಕೆ ಹಲವರು ವಾದ ಮಾಡುತ್ತಿದ್ದಾರೆ.

ಲೀಲಾ ಪರ ಅಭಿಮಾನಿಗಳು:

ನಾಯಕ ವೈಷ್ಣವ್ ತೇಜ್ (Vaishnav Tej) ಹಿಟ್ ಸಿನಿಮಾಗಳನ್ನು ನೀಡಿಲ್ಲ ಆದರೂ ಅವರಿಗೆ 3 ರಿಂದ 4 ಕೋಟಿ ರೂಪಾಯಿ ಸಂಭಾನೆ ನೀಡಲಾಗುತ್ತಿದೆ ಹೀಗಿರುವಾಗ ಹಿಟ್ ಸಿನಿಮಾ , ಸ್ಟಾರ್ ನಟರ ಜೊತೆ ಅಭಿನಯಿಸಿರುವ ಲೀಲಾಗೆ 10 ಕೋಟಿ ಕೊಡುವುದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.

 ಸ್ವರ್ಣಲತಾ ವಿವಾದ:

ಅಲಯನ್ಸ್‌ ಕಾಲೇಜಿನ ಮಾಲಿಕತ್ವ ಹಾಗೂ ಆಡಳಿತ ಗದ್ದುಗೆಗಾಗಿ ಕೆಲ ವರ್ಷಗಳಿಂದ ಸಹೋದರರ ನಡುವೆ ಗಲಾಟೆ ನಡೆಯುತ್ತಿದ್ದು, ಈಗಲೂ ಸಹ ನಾನೇ ಅಸಲಿ ಮಾಲೀಕ ಎಂದು ಸಾಬೀತು ಪಡಿಸಲು ಹಿರಿಯಣ್ಣನಾದ ಮಧುಕರ್‌ ಅಂಗೂರ್‌ ತನ್ನ ಗುಂಪಿನೊಂದಿಗೆ ಕಾಲೇಜಿಗೆ ಪ್ರವೇಶಿಸಿ ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ.

ಈ ಬಾರಿಯ ಅಲಯನ್ಸ್‌ ಗಲಾಟೆಯಲ್ಲಿ ಸ್ಯಾಂಡಲ್‌ವುಡ್‌ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪಾಲ್ಗೊಂಡಿದ್ದು, ಸ್ವಲ್ಪ ಕುತೂಹಲಕ್ಕೆ ಕಾರಣವಾಗಿದೆ. ಅಲಯನ್ಸ್‌ ಕಾಲೇಜಿನ ರಿಜಿಸ್ಟ್ರಾರ್‌ ಡಾ

ನಿವೇದಿತಾ ಮಿಶ್ರಾ ಆನೇಕಲ್‌ ಠಾಣೆಗೆ ದೂರು ನೀಡಿದ್ದು, ಮಧುಕರ್‌ ಅಂಗೂರ್‌ ಎಂಬುವವರು ತಮ್ಮ ಜೊತೆ 50 ಮಂದಿಯನ್ನು ಕರೆತಂದು ಮಾರಕಾಸ್ತ್ರಗಳ ಜೊತೆಗೆ ಬಂದೂಕು ಹಿಡಿದು ಭೀತಿ ಹುಟ್ಟಿಸಿ ದಾಂಧಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಸುಧೀರ್‌ ಅಂಗೂರ್‌ ಸುಪರ್ದಿಯಲ್ಲಿರುವ ಅಲಯನ್ಸ್‌ ಕಾಲೇಜಿಗೆ ವಿರೋಧಿ ಬಣ್ಣದ ಅಣ್ಣ ಮಧುಕರ್‌ ಅಂಗೂರ್‌ ಹಾಗೂ ಸ್ವರ್ಣಲತಾ ಕೋರ್ಚ್‌ ಆದೇಶವನ್ನು ತಂದು, ಬೆಂಗಾವಲಿಗೆ ಸುಮಾರು 50 ಮಂದಿ ಬೌನ್ಸರ್‌ಗಳೊಂದಿಗೆ ಸೆ.10ರಂದು ಬಂದು ದಾಂಧಲೆ ನಡೆಸಿದ್ದು, ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ತಾನೇ ಮುಂದಿನ ಚಾನ್ಸಲರ್‌ ಎನ್ನುವಂತೆ ಮಧುಕರ್‌ ಜೊತೆ ಆವಾಜ್‌ ಹಾಕಿ ದರ್ಪ ತೋರಿರುವುದು ದೊಡ್ಡ ಸುದ್ದಿಯಾಗಿದೆ. ದೂರಿನ ಅನ್ವಯ ಅಲಯನ್ಸ್‌ ಯೂನಿವರ್ಸಿಟಿ ಒಳಗೆ ಶಸ್ತ್ರಾಸ್ತ್ರ ಹಿಡಿದು ಅಕ್ರಮ ಪ್ರವೇಶ ಮಾಡಿದ ಮಧುಕರ್‌, ಸ್ವರ್ಣಲತಾ, ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, 1 ಪಿಸ್ತೂಲ್‌, 4 ಬಂದೂಕು, 20 ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಅಲಯನ್ಸ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಗೊಂದಲದ ವಾತಾವರಣ ಕಾರಣ ಆನೇಕಲ್‌ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿ, ಈಗಾಗಲೇ ಮಧುಕರ್‌ ಅಂಗೂರ್‌ ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios