ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆಗೆ ಕವಿ ಕುಮಾರ್ ವಿಶ್ವಾಸ್ ಕಾರಣ ಎಂಬ ಆರೋಪ ಕೇಳಿಬಂದಿದೆ. ತೈಮೂರ್ ಹೆಸರಿನ ಬಗ್ಗೆ ವಿಶ್ವಾಸ್ ಆಕ್ಷೇಪ ವ್ಯಕ್ತಪಡಿಸಿದ್ದನ್ನೇ ಕಾರಣವಾಗಿಸಿ, ಬಂಧಿಸಬೇಕೆಂಬ ಕೂಗು ಕೇಳಿಬಂದಿದೆ. ಆದರೆ, ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ಹಾಗೂ ಆಗರ್ಭ ಶ್ರೀಮಂತ ಸೈಫ್ ಅಲಿ ಖಾನ್ (Saif Ali Khan) ಮೇಲೆ ಮೊನ್ನೆ ರಾತ್ರಿ ನಡೆದ ದಾಳಿ ಬಳಿಕ ಬಹಳಷ್ಟು ಸಂಗತಿಗಳು ನಡೆಯತೊಡಗಿವೆ. ಸೈಫ್ ಮೇಲೆ ದಾಳಿಮಾಡಿರುವ ಆರೋಪಿಯನ್ನು ಬಂಧಿಸಲಾಗಿದ್ದು ಆತನಿಂದ ಈ ಬಗ್ಗೆ ಬಾಯಿ ಬಿಡಿಸುವ ಪ್ಯತ್ನ ನಡೆಯುತ್ತಿದೆ. ಇತ್ತ, ಸೈಫ್ ಅಲಿ ಮೇಲಿನ ದಾಳಿ ಹಿನ್ನೆಲೆಯಲ್ಲಿ ಕವಿ ಕುಮಾರ್ ವಿಶ್ವಾಸ್‌ನನ್ನು (Poet Kumar Vishwas) ಬಂಧಿಸಬೇಕು ಎಂಬ ಕೂಗು ಜೋರಾಗುತ್ತಿದೆ. ಯಾಕೆ ಹೀಗೆ? ಏನಾಗುತ್ತಿದೆ?
ಹೌದು, ನಟ ಸೈಫ್ ಅಲಿ ಖಾನ್ ಅವರಿಗೆ ಮಧ್ಯರಾತ್ರಿ ಮನೆಗೇ ಬಂದು ಚೂರಿಯಲ್ಲಿ ಇರಿಯಲಾಗಿದೆ ಎಂದರತೆ ಅದು ಸಣ್ಣ ಸಂಗತಿಯೇ ಅಲ್ಲ. ಟೈಟ್ ಸೆಕ್ಯುರಿಟಿ ಇರುವ ಅಪಾರ್ಟ್ಮೆಂಟ್‌ನಲ್ಲಿ ಹೀಗೆ ಯಾರೋ ಒಬ್ಬ ಆಗುಂತಕ ಬಂದು ಸಿನಿಮಾ ಸ್ಟಾರ್ ಮೇಲೆ ಪ್ರತ್ಯಕ್ಷ ದಾಳಿ ಮಾಡಿದ್ದಾನೆ ಎಂದರೆ ಇದು ಶಾಕಿಂಗ್ ಸಂಗತಿಯೇ ಸರಿ! ಆದರೆ, ಘಟನೆ ಆಗಿಹೋಗಿದೆ. ಈ ಬಗ್ಗೆ ಸಿಸಿ ಟಿವಿ ಆಧರಿಸಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆ ಆರೋಪಿಯನ್ನು ವಿಚಾರಿಸಲಾಗುತ್ತಿದೆ. ಆದರೆ, ಈ ಘಟನೆ ಹಿನ್ನೆಲೆಯಲ್ಲಿ ಕವಿಯೊಬ್ಬರನ್ನು ಬಂಧಿಸಿ ಎಂಬ ಕೂಗು ಎದ್ದಿರುವುದು ಏಕೆ?
ಸೈಫ್ ಅಲಿ ಖಾನ್‌ಗೆ ಚಾಕೂ ಹಾಕುವ ಮೊದಲು ಶಾರುಖ್ ಮುಗಿಸಲು ಸಂಚು ರೂಪಿಸಿದ್ದ!
ಇದು ಒಂಥರಾ ವಿಚಿತ್ರವಾಗಿದೆ ಎನ್ನಲಾಗುತ್ತಿದೆ. 'ಎತ್ತಿಗೆ ಜ್ವರ ಬಂದರೆ ಎಮ್ಮಗೆ ಯಾಕೆ ಬರೆ?' ಎಂದು ಹಲವರು ಕೇಳುತ್ತಿದ್ದಾರೆ. ಆದರೆ, 'ಎತ್ತಣ ಮಾಮರ ಎತ್ತಣ ಕೋಗಿಲೆ ' ಎಂಬಂತೆ, ಇದಕ್ಕೆ ಹಳೆಯ ಘಟನೆಯೊಂದು ತಳುಕು ಹಾಕಿಕೊಂಡಿದೆ. ಇತ್ತೀಚೆಗೆ ಕವಿ ಕುಮಾರ್ ವಿಶ್ವಾಸ್ ಅವರು ಸ್ಟೇಜ್ ಒಂದರಲ್ಲಿ ಸೈಫ್ ಹಾಗೂ ಕರೀನಾ ದಂಪತಿಗಳ ಮಗ ತೈಮೂರ್ ಹೆಸರಿನ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಕಾರಣಕ್ಕೆ ಅವರನ್ನೀಗ ಟಾರ್ಗೆಟ್ ಮಾಡಲಾಗುತ್ತಿದೆ. ಹಾಗಿದ್ದರೆ ಕವಿ ಕುಮಾರ್ ವಿಶ್ವಾಸ್ ಅವರು ತೈಮೂರ್ ಬಗ್ಗೆ ಹೇಳಿದ್ದೇನು?
ಕುಮಾರ್ ವಿಶ್ವಾಸ್ ಅವರು 'ಭಾರತದಲ್ಲಿ ಹಲವು ನಟರಿಗೆ ದೇಶಾಭಿಮಾನದ ಕೊರತೆಯಿದೆ. ಈ ದೇಶದ ಮೇಲೆ ದಂಡೆತ್ತಿ ಬಂದ ವಿದೇಶಿ ದಾಳಿಕೋರರ ಹೆಸರುಗಳನ್ನೇ ಕೆಲವರು ತಮ್ಮ ಮಕ್ಕಳಿಗೆ ಇಡುತ್ತಿದ್ದಾರೆ. ಅವರದೇ ಸಮೂದಾಯದ ಸಾಕಷ್ಟು ಬೇರೆ ಹೆಸರುಗಳು ಇದ್ದರೂ ಅದ್ಯಾಕೆ ದಾಳಿಕೋರರ ಹೆಸರುಗಳನ್ನೇ ಇಡುವ ಅಗತ್ಯವಿತ್ತು? ತೈಮೂರ್ ಖಾನ್ ಹೆಸರಿನ ಬದಲು ಬೇರೆ ಹೆಸರು ಇಡಬಹುದಿತ್ತಲ್ಲ' ಎಂದಿದ್ದರು. ಅದಾದ ಬಳಿಕ ಕೆಲವೇ ದಿನಗಳಲ್ಲಿ ಈಗ ಈ ದಾಳಿ ನಡೆದಿದ್ದು, ಅವರ ಮಾತುಗಳಿಗೂ ಸೈಫ್ ಮೇಲಿನ ದಾಳಿಗೂ ಲಿಂಕ್ ಮಾಡಲಾಗಿದೆ.
ಗಂಡನ ಬಿಟ್ಟು ಬರಲಾರೆ ಎಂದಿದ್ದ ಪ್ರಿಯಾಂಕಾ ಚೋಪ್ರಾ ಭಾರತದಲ್ಲೇ ಇದ್ದಾರೆ ಏಕೆ?
ಈ ಕಾರಣಕ್ಕೆ ಇದೀಗ, ಸೈಫ್ ಮೇಲಿನ ದಾಳಿಗೆ ಕುಮಾರ್ ವಿಶ್ವಾಸ್ ಅವರೇನಾದರೂ ಕಾರಣ ಆಗಿರಬಹುದು. ಆದ್ದರಿಂದ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂಬ ಕೂಗು ಎದ್ದಿದೆ. ಆದರೆ ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಸ್ಟೇಜ್ ಮೇಲೆ ತಮ್ಮ ಅನಿಸಿಕೆ ಹೊರಹಾಕಿದ್ದಾರೆ ಅಷ್ಟೇ. ಆದರೆ, ಈ ದಾಳಿಗೂ ಅವರಿಗೂ ಯಾಕೆ ಲಿಂಕ್ ಮಾಡ್ಬೇಕು? ಅವರ ವಿರುದ್ಧ ಸಾಕ್ಷಿಗಳಿದ್ದರೆ ಬಂಧಿಸಬಹುದೇ ಹೊರತೂ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂಬುದು ಮೂರ್ಖತನದ ಪರಮಾವಧಿ ಎನ್ನುತ್ತಿದ್ದಾರೆ.
