‘ನನ್ನ ತಂದೆ ಸೇನೆಯಲ್ಲಿದ್ದರು. ಅಲ್ಲಿ ಪ್ರತಿಯೊಂದು ಕಂಟೋನ್ಮಂಟ್ ಅನ್ನು ಇನ್ನೊಂದಕ್ಕೆ ಸಂಪರ್ಕಿಸಲು ಹಿಂದಿ ಭಾಷೆಯನ್ನೇ ಬಳಸುತ್ತಿದ್ದರು. ನನ್ನ ತಂದೆಯ ಈ ಹಿನ್ನೆಲೆಯಿಂದ ಬಹುಶಃ ಹಿಂದಿ ನನ್ನ ಮೇಲೆ ಪ್ರಭಾವ ಬೀರಿರಬಹುದು. ನನ್ನ ಸಾಮರ್ಥ್ಯವನ್ನು ನಾನು ಸಂಪೂರ್ಣ ಬಳಸಲು ಉತ್ಸುಕಳಾಗಿದ್ದೇನೆ. ಎಂದಿದ್ದಾರೆ.
ಬಾಲಿವುಡ್‌ಗೆ ಹೋಗಲಿರುವ ಶ್ರೀಲೀಲಾ
ಕನ್ನಡದ ಮತ್ತೊಂದು 'ಪ್ರತಿಭಾ ಪಲಾಯನ' ಸದ್ಯದಲ್ಲೇ ನಡೆಯಲಿದೆಯಾ? ಹೌದು, ಎನ್ನುತ್ತಿವೆ ಸುದ್ದಿ ಮೂಲಗಳು. ಇದೇನೂ ಇಂದು ನಿನ್ನೆಯ ಮಾತಲ್ಲ, ಹಲವು ದಶಕಗಳಿಂದ ನಡೆಯುತ್ತಲೇ ಬಂದಿವೆ. ಅದರಲ್ಲಿಯೂ ಕನ್ನಡದ ಹಲವು ನಾಯಕಿಯರಿಗೆ ಪರಭಾಷೆಯಲ್ಲಿ ಈಗ ಡಿಮ್ಯಾಂಡ್ ಬಹಳಷ್ಟು ಇದೆ. ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಸಖತ್ ಮಿಂಚುತ್ತಿದ್ದಾರೆ. ಅವರ ಹಾದಿಯಲ್ಲಿ ಹೋದವರು ನಟಿ ಶ್ರೀಲೀಲಾ. ಅವರಿಬ್ಬರೂ ಅಲ್ಲಿ ಅವಕಾಶಪಡೆಯುತ್ತಿರುವಾಗಲೂ ಮತ್ತೊಬ್ಬರು ಕನ್ನಡತಿ ಬಾಲಿವುಡ್ ಬಾಗಲು ತಟ್ಟಿದ್ದಾರೆ.
ಚಾನ್ಸ್ ಕನ್ಫರ್ಮ್?
ಅವರು ಬೇರಾರೂ ಅಲ್ಲ, 'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್. ಹೌದು, 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ರಿಷಬ್ ಶೆಟ್ಟಿಯವರ ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ ಚಾಪ್ಟರ್ 1'ನಲ್ಲಿ ಕನಕವತಿ ಪಾತ್ರದಲ್ಲಿ ಭಾರೀ ಮಿಂಚಿದ್ದಾರೆ. ಕೇವಲ ಸೌಂದರ್ಯದ ಬೊಂಬೆ ಎನ್ನಿಸಿಕೊಳ್ಳದೇ ಅಗತ್ಯವಿರುವ ನಟನೆಯನ್ನೂ ಮಾಡಿ ತಾವೊಬ್ಬರು ಅತ್ಯುತ್ತಮ ನಟಿಯೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದೀಗ ನಟಿ ರುಕ್ಮಿಣಿ ವಸಂತ್ ಅವರು ಬಾಲಿವುಡ್ ಸಿನಿಮಾದಲ್ಲಿ ಚಾನ್ಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ, ಈ ನಟಿಯ ಮಾತೂ ಕೂಡ ದಾಖಲಾಗಿದೆ.
ಹಾಗಿದ್ದರೆ, ನಟಿ ರುಕ್ಮಿಣಿ ವಸಂತ್ ಹೇಳಿದ್ದೇನು? ಈ ಕುರಿತು 'ಹಿಂದೂಸ್ತಾನ್ ಟೈಮ್ಸ್"ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರುಕ್ಷ್ಮಿಣಿ ವಸಂತ್, ಬಾಲಿವುಡ್ ಸಿನಿಮಾದಲ್ಲಿ ನಟಿಸಲು ನಾನಂತೂ ಭಾರೀ ಉತ್ಸುಕಳಾಗಿದ್ದೇನೆ. ಹಲವರ ಜೊತೆ ಮಾತುಕತೆಗಳು ನಡೆಯುತ್ತಿವೆ, ನಾನಂತೂ ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ. ಜೊತೆಗೆ, ತಮ್ಮ ಹಿಂದಿ ಜ್ಞಾನದ ಕುರಿತು ಕೂಡ ಮಾತನಾಡಿರುವ ರುಕ್ಷ್ಮಿಣಿ ವಸಂತ್, 'ಬಾಲ್ಯದಿಂದಲೂ ನನಗೆ ಹಿಂದಿ ಪರಿಚಿತವಾದ ಭಾಷೆ. ಚಿಕ್ಕ ವಯಸ್ಸಿನಿಂದಲೂ ನಾನು ಹಿಂದಿ ಬಲ್ಲೆ. ಹಿಂದಿ ಚಿತ್ರಗಳನ್ನು ನಾನು ನೋಡುತ್ತಲೇ ಇರುತ್ತೇನೆ. ಎಂದು ಹೇಳಿವ ಮೂಲಕ ಹಿಂದಿ ಸಿನಿಮಾ ಮಾಡುವುದು ಕನ್ಫರ್ಮ್ ಎಂಬಂತೆ ಮಾತನ್ನಾಡಿದ್ದಾರೆ.
ನನ್ನ ತಂದೆ ಸೇನೆಯಲ್ಲಿದ್ದರು
ಅಷ್ಟೇ ಅಲ್ಲ, 'ನನ್ನ ತಂದೆ ಸೇನೆಯಲ್ಲಿದ್ದರು. ಅಲ್ಲಿ ಪ್ರತಿಯೊಂದು ಕಂಟೋನ್ಮಂಟ್ ಅನ್ನು ಇನ್ನೊಂದಕ್ಕೆ ಸಂಪರ್ಕಿಸಲು ಹಿಂದಿ ಭಾಷೆಯನ್ನೇ ಬಳಸುತ್ತಿದ್ದರು. ನನ್ನ ತಂದೆಯ ಈ ಹಿನ್ನೆಲೆಯಿಂದ ಬಹುಶಃ ಹಿಂದಿ ನನ್ನ ಮೇಲೆ ಪ್ರಭಾವ ಬೀರಿರಬಹುದು' ಎಂದಿರುವ ರುಕ್ಷ್ಮಿಣಿ ವಸಂತ್, ನನಗೆ ಇಲ್ಲಿಯವರೆಗೆ ಹಿಂದಿ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿಲ್ಲ. ನನ್ನ ಸಾಮರ್ಥ್ಯವನ್ನು ನಾನು ಸಂಪೂರ್ಣ ಬಳಸಲು ಉತ್ಸುಕಳಾಗಿದ್ದೇನೆ. ಆ ದೇವರ ದಯೆ ನನ್ನ ಮೇಲೆ ಇದ್ದರೆ, ಶೀಘ್ರದಲ್ಲಿಯೇ ಇದು ಕೂಡ ಸಾಧ್ಯವಾಗಲಿದೆ' ಎಂದಿದ್ದಾರೆ. ಹೀಗೆ ಹೇಳುವ ಮೂಲಕ ತಮಗೆ ಹಿಂದಿಯಲ್ಲಿ ಚಾನ್ಸ್ ಸಕ್ಕಿದೆ ಅಥವಾ ಸಿಗಲಿರುವುದು ಪಕ್ಕಾ ಎಂಬಂತೆ ಮಾತನ್ನಾಡಿದ್ದಾರೆ.
ರುಕ್ಮಿಣಿ ವಸಂತ್ ಪರಭಾಷೆಗೆ ಕಾಲಿಡುತ್ತಿರುವುದು ಹೊಸ ವಿಷಯ ಅಷ್ಟೇ. ಈಗಾಗಲೇ, ಹಿಂದಿಯಲ್ಲಿ ರಶ್ಮಿಕಾ ನಂಬರ್ ನಟಿಯಾಗಿ ಮಿಂಚುತ್ತಿದ್ದಾರೆ. ಶ್ರೀಲೀಲಾ ಈಗಾಗಲೇ ನಟಿಸುತ್ತಿದ್ದಾರೆ. ಇನ್ನು ರಚಿತಾ ರಾಮ್ ಕೂಡ ಒಂದು ಕಾಲು ಕಾಲಿವುಡ್‌ನಲ್ಲಿ ಇಟ್ಟಿದ್ದಾಗಿದೆ. ಸಪ್ತಮಿ ಗೌಡ ಹಿಂದಿ ಮತ್ತು ತೆಲುಗು ಚಿತ್ರರಂಗವನ್ನು ಒಂದು ರೌಂಡ್ ಹಾಕಿಕೊಂಡು ಮರಳಿ ಕನ್ನಡಕ್ಕೆ ಬಂದಿದ್ದಾರೆ. ಇನ್ನೂ ರುಕ್ಕಿಣಿ ವಸಂತ್ ಅವರ ಹವಾ ಸದ್ಯ ದೇಶದೆಲ್ಲೆಡೆಯಲ್ಲೂ ಇದೆ. "ಕಾಂತಾರ"ದಲ್ಲಿ ನಟಿಸುವ ಮುನ್ನವೇ ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಪ್ರವೇಶ ಮಾಡಿದ್ದ ರುಕ್ಷ್ಮಿಣಿ ವಸಂತ್, ಈಗ ಬಹಳಷ್ಟು ಬೇಡಿಕೆ ಗಳಿಸಿದ್ದಾರೆ. ಇದೀಗ, ಬಾಲಿವುಡ್‌ಗೂ ರುಕ್ಮಿಣಿ ಕಾಲಿಡುವುದು ಪಕ್ಕಾ ಎನ್ನಬಹುದು.
ರುಕ್ಷ್ಮಿಣಿ ವಸಂತ್ ಅವರಿಗೀಗ 29 ವರ್ಷ. ಕನ್ನಡದ "ಬೀರ್‌ಬಲ್" ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ ರುಕ್ಷ್ಮಿಣಿ ವಸಂತ್, ಸದ್ಯ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಆರು ವರ್ಷಗಳಲ್ಲಿ ಮೂರು ಭಾಷೆಗಳಲ್ಲಿ ನಟಿಸಿದ್ದಾರೆ. ಈಗ ಬಾಲಿವುಡ್‌ಗೆ ವಲಸೆ ಹೋಗುವುದಕ್ಕೆ ಟೈಂ ಬಂದಂತಿದೆ. ಯಶ್ ಅಭಿನಯದ ಪ್ಯಾನ್ ವರ್ಲ್ಡ್ ಸಿನಿಮಾ "ಟಾಕ್ಸಿಕ್" ಹೊರತು ಪಡಿಸಿದರೆ ಬೇರೆ ಯಾವ ಚಿತ್ರಗಳನ್ನು ರುಕ್ಷ್ಮಿಣಿ ವಸಂತ್ ಒಪ್ಪಿಕೊಂಡಿಲ್ಲ. ಸದ್ಯ ರುಕ್ಕಿಣಿ ವಸಂತ್ ಬೇಡಿಕೆಯನ್ನು ಗಮನಿಸಿದರೆ, ಮುಂದೆ ಅವರು ಕನ್ನಡದಲ್ಲಿ ನಟಿಸುವುದು ಕಷ್ಟ ಎನ್ನಬಹುದು. ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ ಅವರಂತೆಯೇ ಪರಭಾಷೆಯಲ್ಲಿಯೇ ರುಕ್ಮಿಣಿ ವಸಂತ್ ನಟಿಸ್ತಾರಾ? ಅಥವಾ ಮತ್ತೆ ಕನ್ನಡಕ್ಕೆ ಬರ್ತಾರಾ? ಕಾದು ನೋಡಬೇಕಿದೆ.


