ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಎರಡನೇ ಪುತ್ರ ವಿಕ್ರಮ್​ ರವಿಚಂದ್ರನ್​ ಅವರ ಚೊಚ್ಚಲ ಚಿತ್ರ 'ತ್ರಿವಿಕ್ರಮ' ಸದ್ಯ ಸ್ಯಾಂಡಲ್​ವುಡ್​ನಲ್ಲಿ ತೆರೆಗೆ ಬರೋ ಮುನ್ನವೇ  ಸಾಕಷ್ಟು ವಿಶೇಷತೆಗಳೊಂದಿಗೆ ಸದ್ದು ಮಾಡುತ್ತಿದೆ.  ಸ್ಟಾರ್​ ಕಾಸ್ಟ್, ಸಾಹಸ ದೃಶ್ಯಗಳ ಶೂಟಿಂಗ್​ ​ಸೇರಿದಂತೆ ಅನೇಕ ವಿಚಾರದಲ್ಲಿ ಚಿತ್ರೀಕರಣದ ಹಂತದಲ್ಲೇ ಸಿನಿರಸಿಕರಲ್ಲಿ ನಿರೀಕ್ಷೆಗಳ ಬೆಟ್ಟವನ್ನೆ ಕಟ್ಟುವಂತೆ ಮಾಡಿದೆ.

ರಾಜಸ್ಥಾನದ ಮರುಳುಗಾಡಿನಲ್ಲಿ ತ್ರಿವಿಕ್ರಮನ ಸಂಚಾರ

ಸಹನಾ ಮೂರ್ತಿ ಆ್ಯಕ್ಷನ್‌ ಕಟ್‌ನಲ್ಲಿ ಮೂಡಿ ಬರುತ್ತಿರುವ  'ತ್ರಿವಿಕ್ರಮ' ಚಿತ್ರಕ್ಕೆ ಆಕಾಂಕ್ಷಾ ಶರ್ಮಾ ಜೋಡಿಯಾಗಿ ಮಿಂಚಲಿದ್ದಾರೆ. ಕರ್ನಾಟಕದ ಸುಂದರ ಸ್ಥಳಗಳಾದ ಬೆಂಗಳೂರು, ಉಡುಪಿ, ಕೊಡಚಾದ್ರಿ, ತೀರ್ಥಹಳ್ಳಿ, ಸಾಗರದಲ್ಲಿ ಮೂರನೇ ಹಂತದ ಶೂಟಿಂಗ್​ ನಡೆದಿದ್ದು ನಾಲ್ಕನೇ ಹಂತದ ಚಿತ್ರೀಕರಣಕ್ಕಾಗಿ ರಾಜಸ್ಥಾನ ಹಾಗೂ ಜೋಧ್​ಪುರದಲ್ಲಿ  10 ದಿನಗಳಿಂದ ಸಾಂಗ್ ಹಾಗೂ ಕೆಲ ಸನ್ನಿವೇಶಗಳ ಶೂಟಿಂಗ್ ನಡೆಯುತ್ತಿದೆ. ನಾಯಕ ವಿಕ್ರಂ, ಬಾಲಿವುಡ್​ ನಟ ರೋಹಿತ್​ ರಾಯ್​, ನಟಿ ಆಕಾಂಕ್ಷ ಹಾಗೂ ಸಾಧುಕೋಕಿಲ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಮುಖ್ಯ ಸನ್ನಿವೇಶಗಳ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಮಾಡಲಾಗುತ್ತದೆ.

ರವಿಚಂದ್ರನ್‌ ಪುತ್ರ ವಿಕ್ರಮ್‌ ಚಿತ್ರದ ಫಸ್ಟ್‌ಲುಕ್‌!

ಸಾಧುಕೋಕಿಲ- ಚಿಕ್ಕಣ್ಣ ಕಾಮಿಡಿ ಕಾಂಬಿನೇಷನ್

'ತ್ರಿವಿಕ್ರಮ'  ಪಕ್ಕಾ ಕಮರ್ಷಿಯಲ್ ಲವ್​ ಸ್ಟೋರಿ ಆಗಿದ್ದು ಪ್ರೇಕ್ಷಕರನ್ನು ನಕ್ಕು ನಗಿಸಲು ಸ್ಯಾಂಡಲ್​ವುಡ್​ ಕಾಮಿಡಿ ಕಿಂಗ್‌ಗಳಾದ  ಸಾಧುಕೋಕಿಲ ಹಾಗೂ ಯಂಗ್​ ಅಂಡ್​ ಎನರ್ಜಿಟಿಕ್​ ಚಿಕ್ಕಣ್ಣ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ  ಚಿಕ್ಕಣ್ಣ ಕಾಮಿಡಿ ಕಮಾಲ್​ ಮಾಡಿದ್ರೆ ಎರಡನೇ ಭಾಗದಲ್ಲಿ ಸಾಧು ಕೋಕಿಲ  ಮೋಡಿ ಮಾಡಲಿದ್ದಾರೆ.

'ತ್ರಿವಿಕ್ರಮ' ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್‌ಗೆ ಬಾಲಿವುಡ್ ನಟ ರೋಹಿತ್ ರಾಯ್ ವಿಲನ್!