ಆ ಕುಟುಂಬಕ್ಕೆ ಏನೋ ಆಗಿದೆ, ದೇವರೇ ದೃಷ್ಠಿ ಹಾಕಿದ್ದಾನೆ: ಸ್ಪಂದನಾ ಬಗ್ಗೆ ಗಿರಿಜಾ ಲೋಕೇಶ್‌ ಭಾವುಕ

 ಒಟ್ಟಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಸ್ಪಂದನಾ ಮತ್ತು ಸೃಜನ್ ಲೋಕೇಶ್. ಮೃದು ಸ್ವಭಾವನ ಸ್ಪಂದನಾ ನೆನೆದು ಕಣ್ಣೀರಿಟ್ಟ ಹಿರಿಯ ನಟಿ. 

Spandana Vijay Raghavendra is soft spoken says Girija Lokesh vcs

ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಸ್ಪಂದನಾ ಇನ್ನಿಲ್ಲ ಎಂದು ಭಾವುಕರಾಗಿದ್ದಾರೆ. ಕಣ್ಣು ಮುಂದೆ ಬೆಳೆದಿರುವ ರಾಘು ಜೀವನದಲ್ಲಿ ಈ ರೀತಿ ಘಟನೆ ನಡೆದಿದ್ದಕ್ಕೆ ದೇವರೆ ಕಾರಣ ಎಂದಿದ್ದಾರೆ

'ಸ್ಪಂದನಾ ಇಲ್ಲ ಅಂತ ವಿಚಾರ ಕೇಳಿ ನನ್ನ ಜೀವನೇ ನಿಂತು ಹೋಗಿತ್ತು. ಜೂನ್ 28 ನಮ್ಮ ಮನೆಯಲ್ಲಿ ಸಂಭ್ರಮವೋ ಸಂಭ್ರಮ ಏಕೆಂದರೆ ಅಂದು ನನ್ನ ಮಗ ಸೃಜನ್ ಮತ್ತು ಸ್ಪಂದನಾ ಹುಟ್ಟುಹಬ್ಬ. ಇಲ್ಲಿಗೆ ಬಂದು ಸೃಜನ್‌ ಜೊತೆ ಕೇಕ್ ಕಟ್ ಮಾಡಿ ಆಮೇಲೆ ಅವರ ಫ್ರೆಂಡ್ಸ್‌ ಜೊತೆ ಹೋಗುತ್ತಿದ್ದಳು ಇದನ್ನು ಹೇಗೆ ಮರೆಯುವುದು? ವರ್ಷ ವರ್ಷ ನಡೆಯುತ್ತಿತ್ತು. ಚೆಂದುಳ್ಳಿ ಚೆಲುವೆ ಆ ಮಗು...ಎಷ್ಟು ಚೆಲುವಿತ್ತು ಹೃದಯ ಸೌಂದರ್ಯನೂ ಅಷ್ಟೇ ಇತ್ತು. ರಾಘು ಒಳ್ಳೆ ಹುಡುಗ ಒಳ್ಳೆ ಕಲಾವಿದ. ನಿಜಕ್ಕೂ ಆ ಕುಟುಂಬಕ್ಕೆ ಏನೋ ಅಗಿತ್ತು ಆ ದೇವರೇ ದೃಷ್ಠಿ ಹಾಕಿದ್ದಾನೆ ಸಣ್ಣ ಸಣ್ಣ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾನೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಗಿರಿಜಾ ಲೋಕೇಶ್ ಮಾತನಾಡಿದ್ದಾರೆ.

ಲಾಕ್‌ಡೌನಲ್ಲಿ ಸ್ಪಂದನಾ ವಿಜಯ್‌ ದಪ್ಪಗಾಗಿದ್ದರು ಈಗ ಸಣ್ಣ ಆಗಿದ್ದಾರೆ: ಮನೆ ಕೆಲಸದವರ ಮಾತು

'ತಂದೆ ತಾಯಿ ವಯಸ್ಸಾಗಿರುವವರು ಇದ್ದಾರೆ ನೋಡಿಕೊಳ್ಳಬೇಕು ಹಿರಿ ಸೊಸೆ. ಹೆಣ್ಣು ಮಕ್ಕಳಿಗೆ ಯಾವ ಕೆಟ್ಟ ಅಭ್ಯಾಸ ಇರುತ್ತೆ? ಜಾಲಿಯಾಗಿ ಬ್ಯಾಂಕಾಕ್‌ಗೆ ಟ್ರಿಪ್ ಹೋಗುವುದೇ ತಪ್ಪಾ? ಮಲಗಿರುವವರು ದೇವರು ಕರೆದುಕೊಳ್ಳುತ್ತಾನೆ ಅಂದ್ರೆ ದೇವರನೇ ದೂರಬೇಕು.  ಆಕೆಗೆ ಒಂದು ಕಾಯಿಲೆ ಏನೂ ಇರಲ್ಲ ಸಂಕಟ ಆಗುತ್ತಿದೆ... ನಮಗೆ ಅದು ತಿನ್ನಬೇಡಿ ಇದು ತಿನ್ನಬೇಡಿ ಎನ್ನುತ್ತಾರೆ ಡಾಕ್ಟರ್‌ಗಳು ಆದರೆ ಆ ಹುಡುಗಿ ಏನು ತಪ್ಪು ಮಾಡಿತ್ತು? ಆ ಪುಟ್ಟ ಹುಡುಗ ತಾಯಿ ಸಾವನ್ನು ಹೇಗೆ ಸ್ವೀಕರಿಸುತ್ತಾನೆ ತಂದೆ ಹೇಗೆ ಸಹಿಸಿಕೊಳ್ಳುತ್ತಾರೆ ಗೊತ್ತಿಲ್ಲ. ಅಪರಾದವನ್ನು ದೇವರ ಮೇಲೆ ಹಾಕಬೇಕು. ನನ್ನ ಸೊಸೆಗೆ ಅವರ ತಮ್ಮ ಹೇಳಿದ್ದಾರೆ.  ಮನೆಯಲ್ಲಿ ಇರುವವರು ಸಂಬಂಧಿಕರು ಹೇಗೆ ಈ ಆಘಾತ ತಡೆದುಕೊಳ್ಳುತ್ತಾರೆ. ಸ್ಪಂದನಾ ಫಾರಿನ್‌ಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ ನಾನು ಯಾಕೆ ಅದನ್ನು ಪ್ರಶ್ನೆ ಮಾಡಬೇಕು. ರಾಘು ಮದುವೆಯಾದ ದಿನದಿಂದ ಸ್ಪಂದನಾ ನನಗೆ ಚೆನ್ನಾಗಿ ಗೊತ್ತು, ಸಮಾಜದಲ್ಲಿ ರಾಘು ಮತ್ತು ಸ್ಪಂದನಾ ಒಳ್ಳೆ ಹೆಸರು ಮಾಡಿದ್ದಾರೆ ಗೌರವ ಪಡೆದಿದ್ದಾರೆ. ನನ್ನ ಮಗ ಡ್ಯಾನ್ಸಿಂಗ್ ಚಾಂಪಿಯನ್‌ ಕಾರ್ಯಕ್ರಮದಲ್ಲಿ ರಾಘುನೇ ಜಡ್ಜ್‌ ಆಗಿ ಸ್ಪಂದನಾ ಬಂದಿದ್ದರು ನಾನು ಹೋಗಿರಲಿಲ್ಲ. ಈ ವರ್ಷ ಬರ್ತಡೇ ದಿನ ಸ್ಪಂದನಾ ಬಂದಿರಲಿಲ್ಲ' ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ.

ನಮ್ದು ಲವ್ ಮ್ಯಾರೇಜ್‌ ಅಲ್ಲ ಪಕ್ಕಾ ಅರೇಂಜ್ಡ್‌ ಮ್ಯಾರೇಜ್; ವಿಜಯ್ ರಾಘವೇಂದ್ರ-ಸ್ಪಂದನಾ ಮ್ಯಾರೇಜ್ ಸ್ಟೋರಿ!

'ಪೋಷಕರಿಬ್ಬರಿಗೂ ವಯಸ್ಸಾಗಿದೆ ಮಗ ಪುಟ್ಟ ಹುಡುಗ ಹೇಗೆ ಈ ನೋವು ತಡೆದುಕೊಳ್ಳುತ್ತಾರೆ ಗೊತ್ತಿಲ್ಲ. ಅವರ ಮನೆಗೆ ಇಬ್ಬರು ಒಳ್ಳೆ ಸೊಸೆಯರು ಸಿಕ್ಕಿದ್ದಾರೆ. ಜೋರಾಗಿ ಮಾತನಾಡಿದರೆ ತಪ್ಪಾಗುತ್ತದೆ ಎಂದು ಮೃದು ಧ್ವನಿಯಲ್ಲಿ ಮಾತನಾಡುತ್ತಿದ್ದಳು. ಆಕೆಗೆ ಯಾವ ಕಾಯಿಲೆ ಇರಲಿಲ್ಲ ಶೌರ್ಯ ಎಷ್ಟು ಚೆನ್ನಾಗಿದ್ದಾನೆ ನೋಡಲು ಪಾಪ ಅನಿಸುತ್ತದೆ. ಎಂಜಾಯ್ ಮಾಡಲು ಹೋಗಿದ್ದು ಹೀಗೆ ಆಗಿರುವುದು ಯಾರೂ ಕಲ್ಪನೆ ಮಾಡಿಕೊಂಡಿರಲಿಲ್ಲ. ಆಕೆಗೆ 36 ಅಥವಾ 37 ವಯಸ್ಸು ಆಗಿರಬಹುದು ಡಯಟ್ ಮಾಡಿಕೊಂಡು ಆರೋಗ್ಯ ನೋಡಿಕೊಳ್ಳುತ್ತಿದ್ದರು. ನಾವು ಚೆನ್ನಾಗಿ ಊಟ ಮಾಡುತ್ತಿದ್ದವರು ಊಟಕ್ಕೆ ತುಪ್ಪ ಸುರಿಯುತ್ತಿದ್ದರು ಆದರೆ ಈಗಿನ ಮಕ್ಕಳು ಕಡಿಮೆ ತಿನ್ನುತ್ತಾರೆ ಮನೆ ಕೆಲಸ ಮಾಡುವುದಿಲ್ಲ. ಹಳೆ ಕಾಲದಲ್ಲಿ ನಡೆಯುತ್ತಿದ್ದ ರೀತಿ ಚೆನ್ನಾಗಿತ್ತು ಈಗಿನ ಮಕ್ಕಳು ಒಂದು ದೋಸೆ ಸಾಕು ಎನ್ನುತ್ತಾರೆ ತುಪ್ಪ ಹಾಕಿದರೆ ಬೇಡ ಎನ್ನುತ್ತಾರೆ. ಹೀಗಾಗಿ ನನ್ನ ಮೊಮ್ಮಕ್ಕಳಿಗೆ  ಚೆನ್ನಾಗಿ ತಿನಿಸುತ್ತಿರುವೆ' ಎಂದಿದ್ದಾರೆ ಗಿರಿಜಾ ಲೋಕೇಶ್.

Latest Videos
Follow Us:
Download App:
  • android
  • ios