ಚೆನ್ನೈ: ಇತ್ತೀಚಿನ ತಪಾಸಣೆ ವೇಳೆ ಅವರಲ್ಲಿ ಕೊರೋನಾ ನೆಗೆಟಿವ್‌ ಬಂದಿದೆ ಎಂದು ಪುತ್ರ ಎಸ್‌.ಪಿ.ಚರಣ್‌ ಮಾಹಿತಿ ನೀಡಿದ್ದಾರೆ.

ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಚರಣ್‌ ‘ತಂದೆಯ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಅವರಿಗೆ ಕೊರೋನಾ ನೆಗೆಟಿವ್‌ ಬಂದಿದೆ. ಜೊತೆಗೆ ಶ್ವಾಸಕೋಶದಲ್ಲಿ ಉಂಟಾಗಿದ್ದ ಸೋಂಕು ನಿವಾರಣೆ ಆಗುತ್ತಿದೆ. ಅವರೀಗ ಫಿಸಿಯೋಥೆರಪಿ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ‘ಆಸ್ಪತ್ರೆಯಲ್ಲೇ ತಂದೆ- ತಾಯಿಯ ವಿವಾಹ ವಾಷಿಕೋತ್ಸವವನ್ನು ಸಣ್ಣದಾಗಿ ಆಚರಿಸಲಾಯಿತು. ಇದರ ಜೊತೆಗೆ ತಂದೆ ಐಪ್ಯಾಡ್‌ನಲ್ಲಿ ಕ್ರಿಕೆಟ್‌ ಮತ್ತು ಟೆನಿಸ್‌ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಐಪಿಎಲ್‌ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದಾರೆ. ತಂದೆ ಗುಣಮುಖರಾಗಲಿ ಎಂದು ಅಭಿಮಾನಿಗಳ ಪ್ರಾರ್ಥನೆ, ಪ್ರೀತಿ-ವಿಶ್ವಾಸಕ್ಕೆ ತಾವೆಂದಿಗೂ ಚಿರಋುಣಿ’ ಎಂದು ಎಸ್‌ಪಿ ಚರಣ್‌ ತಿಳಿಸಿದ್ದಾರೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ ಎಸ್‌ಪಿಬಿ ಅವರು ಆ.5ರಂದು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು.