ತಮ್ಮ ಹೆಸರಿನಲ್ಲಿರುವ ಫೇಕ್ ಕೇಸ್‌ ಎನು? ಯಾಕೆ ವಿಕ್ಟಿಮ್‌ ಟು ಸರ್ವೈವರ್ ಎಂದು ಬರೆದುಕೊಂಡೆ ಎಂದು ಮೊದಲ ಬಾರಿ ದೌರ್ಜನ್ಯದ ಬಗ್ಗೆ ನಟಿ ಭಾವನಾ ಮಾತನಾಡಿದ್ದಾರೆ.  

ಕನ್ನಡ ಚಿತ್ರರಂಗದ ಸುಂದರಿ ಭಾವನಾ ಮೆನನ್‌ ಐದು ವರ್ಷಗಳ ಹಿಂದೆ ದೌರ್ಜನ್ಯಕ್ಕೆ ಒಳಗಾಗಿದ್ದರು, ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಆರೋಪಿ ವಿರುದ್ಧ ಹೊರಾಡಲು ಸಜ್ಜಾದ್ದರು. ಕೋರ್ಟ್‌ನಲ್ಲಿ ಕೇಸ್‌ ನಡೆಯುತ್ತಿರುವ ಕಾರಣ ಪ್ರಕರಣದ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಮಹಿಳಾ ದಿನಾಚರಣೆ ಪ್ರಯುಕ್ತ ಹಿರಿಯ ಪತ್ರಕರ್ತೆ ಬರ್ಖಾ ದತ್ ಜೊತೆ ಮಾಡಿದ ಸಂದರ್ಶನದಲ್ಲಿ ಈ ಘಟನೆ ಬಗ್ಗೆ ಮಾತನಾಡಿದ್ದಾರೆ.

ಭಾವನ ಮಾತುಗಳು:
'ನನಗೆ ತುಂಬಾನೇ ನರ್ವಸ್ ಆಗುತ್ತಿದೆ. ಮಾತನಾಡುವುದಕ್ಕೆ ಎಮೋಷನಲ್ ಫೀಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನನಗೆ ಬಗ್ಗೆ ಒಂದು ವಿಚಾರ ಪದೇ ಪದೇ ಹೈಲೈಟ್ ಅಗಿ, ಹರಿದಾಡುತ್ತಿದೆ, ಈಗ ಅದರ ಬಗ್ಗೆ ನಾನು ನೇರವಾಗಿ ಉತ್ತರ ಕೊಡಲೇಬೇಕು. ಕೋರ್ಟಲ್ಲಿ ಕೇಸ್ ನಡೆಯುತ್ತಿರುವ ಕಾರಣ ಈ ಕೇಸ್‌ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ನಾನು ಎಲ್ಲಿಯೂ ರಿವೀಲ್ ಮಾಡಬಾರದು. Victime to Surviver ಜರ್ನಿ ಬಗ್ಗೆ ನಾನು ಬರೆದುಕೊಂಡಿದ್ದೆ. 2017 ಫೆಬ್ರವರಿ 17ರಂದು ಈ ಘಟನೆ ನಡೆಯಿತು. ಆ ಒಂದು ಅನಿರೀಕ್ಷಿತ ಘಟನೆಯಿಂದ ನನ್ನ ಇಡೀ ಜೀವನ ಉಲ್ಟಂಪಲ್ಟ ಆಗಿದೆ,' ಎಂದು ಭಾವನಾ ಮಾತನಾಡಿದ್ದಾರೆ.

'ಘಟನೆ ನಡೆದ ದಿನದಿಂದಲೂ ನನ್ನ ಮೈಂಡ್ ಏನೋ ಹುಡುಕುತ್ತಲೇ ಇತ್ತು. ಯಾರು ಮಾಡಿದ್ದು ಎಂದು ತಿಳಿದುಕೊಂಡು ಅವರು ಮೇಲೆ ಬ್ಲೇಮ್ ಮಾಡಿ ನನ್ನ ತಪ್ಪು ಇಲ್ಲ ಎಂದು ಹೇಳಬೇಕಿತ್ತು. ತಲೆ ತುಂಬಾ ಯೋಚನೆ ಇರುತ್ತಿತ್ತು. ನೆಮ್ಮದಿ ಇರಲಿಲ್ಲ. ಇವೆಲ್ಲಾ ನನಗೆ ಯಾಕೆ ಆಗಬೇಕಿತ್ತು ಅಂತ. 2015ರಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡೆ, ಅವರು ಇದ್ದಿದ್ದರೆ ನನಗೆ ಇದೆಲ್ಲಾ ಆಗುತ್ತಿರಲಿಲ್ಲ, ಶೂಟಿಂಗ್ ಇಲ್ಲದಿದ್ದರೆ, ನನಗೆ ಈ ರೀತಿ ಅಗುತ್ತಿರಲಿಲ್ಲ. ಹೀಗೆ ಒಂದೊಂದೇ ಬೇಡದ ಯೋಚನೆಗಳು ಬರುತ್ತಿದ್ದವು. ಇಲ್ಲ ಇದು ಕೆಟ್ಟ ಕನಸು. ಮಲಗಿಕೊಂಡು ಎದ್ದರೆ, ಎಲ್ಲಾ ಸರಿ ಅಗುತ್ತದೆ ಎಂದು ಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಕೆಲವೊಮ್ಮೆ ಜೀವನ ಹಿಂದಕ್ಕೆ ಹೋಗಬೇಕು. ನಾನು ಮತ್ತೆ ಆ ಕ್ಷಣಕ್ಕೆ ಹೋಗಿ ಆಗಿದ್ದನ್ನೆಲ್ಲಾ ಸರಿ ಮಾಡಬೇಕು ಅಂದುಕೊಳ್ಳುತ್ತಿದ್ದೆ. ನನ್ನ ಲೈಫ್ ನಾರ್ಮಲ್ ಆಗಬೇಕು. ಇದ್ದಕ್ಕಿದ್ದಂತೆ ಸ್ಟಾರ್ ನಟಿ ಅಂತಾರೆ. ವಿಕ್ಟಿಮ್ ಅನ್ನುತ್ತಾರೆ. ಈ ಟ್ಯಾಗ್‌ ಹಿಂಸೆ ಆಗುತ್ತಿತ್ತು. ಪ್ರತಿ ಸಲ ಇದರ ಬಗ್ಗೆ ಯೋಚನೆ ಮಾಡಿದಾಗಲೂ ನನ್ನನ್ನೇ ನಾನು ದೂರಿಕೊಳ್ಳುತ್ತಿದ್ದೆ,' ಎಂದು ಭಾವನಾ ಹೇಳಿದ್ದಾರೆ.

Assault Case: 5 ವರ್ಷ ಬಳಿಕ ಮೌನ ಮುರಿದ ಭಾವನಾ ಮೆನನ್

    'ಈ ಕೇಸ್ ಟ್ರಯಲ್ ಆಗಿದ್ದು 2020ರಲ್ಲಿ. ಆಗ ನಾನು 15 ದಿನಗಳ ಕಾಲ ಕೋರ್ಟ್‌ಗೆ ಹೋಗಬೇಕಿತ್ತು. ಆ 15 ದಿನಗಳ ನಾನು ಜೀವನದಲ್ಲಿ ಎಂದೂ ಮರೆಯುವುದಕ್ಕೆ ಆಗೋಲ್ಲ. 15 ದಿನಗಳ ಹೀಯರಿಂಗ್ ಮುಗಿಸಿಕೊಂಡು ಹೊರ ಬಂದ ನಂತರ ನನಗೆ ಸರ್ವೈವರ್‌ ಫೀಲ್ ಆಗುತ್ತಿತ್ತು. ನಾನು ವಿಕ್ಟಿಮ್‌ ಅಲ್ಲ ಅನಿಸುತ್ತಿತ್ತು. ಇದು ನನಗೆ ಮಾತ್ರವಲ್ಲ ಅನೇಕ ಹುಡುಗಿಯರಿಗೆ ಮಾರ್ಗವಾಗುತ್ತದೆ ಎಂದು ನಿರ್ಧಾರ ಮಾಡಿಕೊಂಡೆ. ನನ್ನ ಮೈಂಡ್ ತುಂಬಾನೇ ಸ್ಟ್ರಾಂಗ್ ಆಗಿತ್ತು.' ಎಂದಿದ್ದಾರೆ ಭಾವನಾ.

    'ಈ 5 ವರ್ಷ ಜರ್ನಿ ನನಗೆ ತುಂಬಾ ಕಷ್ಟ ಆಗಿತ್ತು. ಏಕೆಂದರೆ ಟಿವಿಯಲ್ಲಿ ನಡೆಯುತ್ತಿದ್ದ ಮಾತುಕತೆಗಳು ಬೇಸರವಾಗುತ್ತಿತ್ತು. 2017ರಲ್ಲಿ ದೊಡ್ಡ ಗುಂಪಿನ ಜನರು ನನ್ನ ಪರವಾಗಿ ನಿಂತುಕೊಂಡಿದ್ದರು. ಅಲ್ಲಿ ಮತ್ತೊಂದು ಗುಂಪಿನ ಜನರು ಟಿವಿಯಲ್ಲಿ ಕುಳಿತುಕೊಂಡು ನನ್ನ ಬಗ್ಗೆ ಸಲ್ಲದ ಕಾಮೆಂಟ್ ಮಾಡುತ್ತಿದ್ದರು. ಅವರಿಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ. ಅವಳು ಹೀಗೆ ಮಾಡಬಾರದಿತ್ತು, ಹಾಗೆ ಇರಬೇಕಿತ್ತು ಅಂತ ಹೇಳುತ್ತಿದ್ದರು. ಆದರೆ ಯಾರಿಗೂ ಗೊತ್ತಿಲ್ಲ ಘಟನೆ ನಡೆದಿದ್ದು ಸಂಜೆ 7 ಗಂಟೆಗೆ. ಎಷ್ಟು ಬೇಸರ ಆಗುತ್ತಿತ್ತು. ನೋವು ಆಗುತ್ತಿತ್ತು, ಅಂದ್ರೆ ನಾನು ಹೆಸರು ಹಾಳು ಮಾಡುವುದಕ್ಕೆ ಈ ರೀತಿ ಪ್ಲ್ಯಾನ್ ಮಾಡಿಸಿರುವೆ ಎಂದು ನನ್ನ ಮೇಲೆ ದೂರುತ್ತಿದ್ದರು. ನನ್ನ ಮನಸ್ಸು ಸಾವಿರಾರೂ ತುಂಡುಗಳಾಗಿ ಮುರಿದು ಹೋಗಿದ್ದವು. ಇಲ್ಲ ನಾನು ಸ್ಟ್ರಾಂಗ್ ಅಂದುಕೊಳ್ಳುತ್ತಿದ್ದೆ. ಆದರೆ, ಅವರು ಮಾತನಾಡುತ್ತಿದ್ದಾಗ ಮತ್ತೆ ಬ್ರೇಕ್ ಆಗುತ್ತಿದ್ದೆ. ಕರಳು ಕಿತ್ತುಕೊಂಡು ಬರುವಷ್ಟು ಜೋರಾಗಿ ಕೂಗಬೇಕು ಅನಿಸುತ್ತಿತ್ತು. ಹೆಸರು ಮಾಡಲು ನನಗೆ ನಾನೇ ಈ ರೀತಿ ಮಾಡಿಕೊಳ್ಳುವಂಥ ಹುಡುಗಿ ನಾನಲ್ಲ. ನನ್ನ ಫ್ಯಾಮಿಲಿ ಹಾಗೆ ಕಲಿಸಿಲ್ಲ. ಮೊದಲೇ ನನ್ನ ಹೆಸರು ಹಾಳಾಗಿತ್ತು. ಏನು ಮಾಡಬೇಕು ಎನ್ನುವ ಯೋಚನೆಯಲ್ಲಿ ನಾನಿದ್ದೆ. ಒಂದು ನೆಮ್ಮದಿ ಅಂದ್ರೆ ಆ ಸಮಯದಲ್ಲಿ ಸೋಷಿಯಲ್ ಮೀಡಿಯಾದಿಂದ ಹೊರ ಬಂದಿದ್ದೆ. ಹೀಗಾಗಿ ಪರ್ಸನಲ್ ಅಟ್ಯಾಕ್ ಕಡಿಮೆ ಆಯ್ತು,' ಎಂದು ಭಾವನಾ ಮಾತನಾಡಿದ್ದಾರೆ.

    '2019ರಲ್ಲಿ ನಾನು ಸೋಷಿಯಲ್ ಮೀಡಿಯಾ ಸೇರಿಕೊಂಡೆ. ಆಗಲೂ ಅನೇಕ ನನಗೆ ಮೆಸೇಜ್ ಮಾಡುತ್ತಿದ್ದರು. ಯಾಕೆ ಇನ್ನು ಬದುಕಿರುವೆ, ಅವಮಾನ ಅಗಿದೆ. ಹೋಗಿ ಸಾಯಬಾರದಾ ಎಂದು ಮಂದಿ ಸಲಹೆ ನೀಡುತ್ತಿದ್ದರು. ನೀನು ಮಾಡಿರುವುದಕ್ಕೆ ನೀನು ಅನುಭವಿಸುತ್ತೀರಾ ಎನ್ನುತ್ತಿದ್ದರು. ಜನರಿಗೆ ಗೊತ್ತಾಗಬೇಕು ನನ್ನ ಜೀವನದಲ್ಲಿ ಏನು ಆಗುತ್ತಿದೆ, ಎಂದು ನಾನು ಜನವರಿಯಲ್ಲಿ ನನ್ನದ ಆಲೋಚನೆಯ ಪೋಸ್ಟ್, ಬರೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡೆ. ಕೆಲವೊಮ್ಮೆ ಬೇಸರವಾದಾಗ ಇದರ ಬಗ್ಗೆಯೂ ಮಾತನಾಡಬಾರದು ಅನಿಸುತ್ತದೆ. ಇದೆಲ್ಲಾ ಬಿಟ್ಟು ಹೋಗಬೇಕು ಅನಿಸುತ್ತಿತ್ತು. ನನ್ನ ಫ್ಯಾಮಿಲಿಗೂ ಹೇಳಿದ್ದೀನಿ, ನಾರ್ಮಲ್ ಲೈಫ್‌ ಬೇಕು ಅಂತ. ಆದರೆ ನನ್ನ ಆತ್ಮಸ್ಥೈರ್ಯ ಗಟ್ಟಿಯಾಗಿದೆ. ನಾನು ಮುಗ್ಧೆ. ಈ ಘಟನೆಗೆ ಸಂಬಂಧಿಸಿದಂತೆ ನನ್ನ ತಪ್ಪು ಏನೂ ಇಲ್ಲ. ಅದನ್ನು ನಾನು ಪ್ರೂವ್ ಮಾಡಬೇಕು. ಎಷ್ಟೊಂದು ಜನ ನನ್ನ ಪರ ನಿಂತಿದ್ದಾರೆ. ಆ ಶಕ್ತಿಗಳು ಬಗ್ಗೆ ಮಾತನಾಡಲು ಪದಗಳು ಇಲ್ಲ ಆದರೆ ಇದನ್ನು ಫೈಟ್ ಮಾಡಿ ಸತ್ಯ ಹೊರ ತರುತ್ತೀನಿ,' ಎಂದು ಭಾವನಾ ಹೇಳಿದ್ದಾರೆ.

    YouTube video player