ಪ್ರತಿ ಬಾರಿಯೂ ದೀಪಾವಳಿಯನ್ನು ವಿಶೇಷವಾಗಿ ಆಚರಣೆ ಮಾಡಲಿರುವ ಪ್ರಧಾನಿ ಮೋದಿ ಈ ಬಾರಿಯ ದೀಪಾವಳಿ ಸಂಭ್ರಮವನ್ನು ಅದ್ದೂರಿಯಾಗಿ ಮಾಡಲಿದ್ದಾರೆ. ಕೇದಾರನಾಥ-ಬ್ರದಿನಾಥ್‌-ಅಯೋಧ್ಯಾ ಸೇರಿದಂತೆ ಇನ್ನೂ ಕೆಲ ಸ್ಥಳವನ್ನು ಅವರು ಹಬ್ಬಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. 

ನವದೆಹಲಿ (ಅ.20): ಪ್ರತಿ ಸಲದಂತೆ ಈ ಸಲವೂ ಪ್ರಧಾನಿ ಮೋದಿ ಅವರು ಅದ್ದೂರಿಯಾಗೇ ದೀಪಾವಳಿ ಆಚರಿಸೋಕೆ ತಯಾರಾಗ್ತಿದಾರೆ.. ಹಾಗಾದ್ರೆ ಈ ದೀಪಾವಳಿಗೆ ಮೋದಿ ಪ್ಲಾನ್ ಏನು..? ಕೇದಾರನಾಥದಿಂದ ಕಾಶ್ಮೀರದ ತನಕ, ಮೋದಿ ಹೊರಡಲಿದ್ದಾರೆ ಯಾತ್ರೆ.. ಅಯೋಧ್ಯೆ ಸಡಗರಕ್ಕೂ ಸಾಕ್ಷಿಯಾಗಲಿದ್ದಾರೆ.. ಕ್ಲೈಮ್ಯಾಕ್ಸ್ ಅಲ್ಲಿ ಸೈನಿಕರ ಜೊತೆ ಹಬ್ಬ ಆಚರಿಸಲಿದ್ದಾರೆ.

ದೀಪಾವಳಿ ಬಂತು ಅಂದ್ರೆ ಸಾಕು, ಎಲ್ಲರೂ ಅವರವರ ಕುಟುಂಬಗಳ ಜೊತೆಗೂಡಿ, ಅದ್ದೂರಿಯಾಗಿ ಹಬ್ಬ ಆಚರಿಸ್ತಾರೆ.. ಆದ್ರೆ, ಮೋದಿ ಅವರು, ತಮ್ಮ ಪರಿವಾರ ಅಂತಲೇ ಕರೆಯೋ ಯೋಧರ ಜೊತೆ ಸಿಹಿ ಹಂಚಿಕೊಳ್ತಾ ಸಂಭ್ರಮಿಸ್ತಾರೆ.. ಈ ಸಲ ಸಂಭ್ರಮಿಸೋಕೆ ಅವರು ದೇಶದ ಪ್ರಮುಖ ಪ್ರದೇಶಗಳಿಗೆ ತೆರಳಲಿದ್ದಾರೆ.

ದೀಪಾವಳಿಗೆ ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು, ಮಾರಾಟ ಮಾಡಿದರೂ ಶಿಕ್ಷೆ!

ಮೋದಿ ಅವರ ಈ ಸಲದ ದೀಪಾವಳಿ ಪಟಾಕಿ, ಚೀನಿ ನಾಯಕರ ಎದೆಯಲ್ಲಿ ಭಯ ಹುಟ್ಟಿಸ್ತಾ ಇದೆ. ಚೀನಾ ಸಮೀಪದ ಗಡಿ ಜಿಲ್ಲೆಯಲ್ಲಿ ಅವರು ಈ ಬಾರಿ ದೀಪಾವಳಿ ಆಚರಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.