Asianet Suvarna News Asianet Suvarna News

ಗಾಯಕಿ ಅನನ್ಯಾ ಭಟ್ ಈಗ 'ಸೇನಾಪುರ' ಚಿತ್ರಕ್ಕೆ ನಾಯಕಿ!

ಬಹು ಭಾಷಾ ಗಾಯಕಿ ಅನನ್ಯಾ ಭಟ್ ಈಗ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 

Singer Ananya Bhat Senapura film teaser goes viral vcs
Author
Bangalore, First Published Sep 25, 2021, 3:10 PM IST
  • Facebook
  • Twitter
  • Whatsapp

ರಂಗಭೂಮಿ ಕಲಾವಿದೆ (Theatre Artiste), ಬಹುಭಾಷಾ ಗಾಯಕಿ ಅನನ್ಯಾ ಭಟ್ (Ananya Bhat) ತಮ್ಮ ಮೊದಲ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಮಹಿಳಾ ಪ್ರಧಾನ ಕಥೆ ಇರುವ ಸಿನಿಮಾ 'ಸೇನಾಪುರದಲ್ಲಿ' ನಟಿಸುತ್ತಿದ್ದಾರೆ. ನಟಿ ಮಾತ್ರವಲ್ಲ ಈ ಚಿತ್ರದಲ್ಲಿ ಎರಡು ಹಾಡುಗಳಿಗೆ ಧ್ವನಿ ನೀಡುತ್ತಿದ್ದಾರೆ ಹಾಗೂ ಸಂಗೀತ ಸಂಯೋಜನೆ (Music Compose) ಮಾಡಲಿದ್ದಾರೆ. 

ಬಿಸಿಲು ನಾಡಿನ ಒಡಲಲ್ಲಿ ನಡೆಯುವ ಅಕ್ರಮ ಗಣಿ ದಂಧೆ (Illegal Mining) ಕರಾವಳಿವರೆಗೂ ಚಾಚಿಕೊಂಡಿದೆ. ಈ ಅಂಶವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ.  ಅಕ್ರಮ ಗಣೆ ದಂಧೆ ಸುತ್ತ ನಡೆಯುವ ನೈಜ ಘಟನೆಗಳನ್ನು ಇಟ್ಟುಕೊಂಡು 'ಸೇನಾಪುರ' (Senapura) ಸಿನಿಮಾ ಮಾಡಲಾಗುತ್ತಿದೆ. 

Singer Ananya Bhat Senapura film teaser goes viral vcs

'ಆ್ಯಕ್ಟರ್ (Actor) ಆಗಿ ನಟಿಸಿರುವ ಸಿನಿಮಾಗಳಿವೆ. ಆದರೆ ಲೀಡ್ ಆಗಿ ಮಾಡುತ್ತಿರುವ ಮೊದಲ ಸಿನಿಮಾ ಇದು. ಆ್ಯಕ್ಟಿಂಗ್‌ ನನಗೆ ಹೊಸತಲ್ಲ. ಯಾಕೆಂದರೆ ನಾನು ಕಲಿತಿರುವುದು ಥಿಯೇಟರ್‌ನಲ್ಲಿ. ಅಲ್ಲಿಂದಲೇ ನಾನು ಸಿಂಗರ್ (Singer) ಆಗಬೇಕು ಎಂದು ಪ್ರೇರಣೆ ಸಿಕ್ಕಿದ್ದು. ಮಂಡ್ಯ ರಮೇಶ್ (Mandya Ramesh) ಹಾಗೂ ರಾಜು ಅನಂತ್‌ಸ್ವಾಮಿ (Raju Ananthaswamy) ಅವರಿಗೆ ಧನ್ಯವಾದಗಳನ್ನು ತಿಳಿಸಲು ಇಷ್ಟ ಪಡುವೆ. ಆ್ಯಕ್ಟಿಂಗ್ ನನಗೆ ತುಂಬಾ ಇಷ್ಟ, ನಾನು ಯಾವಾಗಲೂ ನಾಟಕ (Drama) ಮಾಡುತ್ತಿದ್ದೆ. ಬೆನಕ ತಂಡದಲ್ಲಿ (Benaka Team) ಈಗಲೂ ನಾಟಕ ಮಾಡುತ್ತೀನಿ. ಸಿನಿಮಾ ಮಾಡೋಕೆ ಸ್ವಲ್ಪ ಇರಿಸು ಮುರಿಸು ಇತ್ತು. ಏಕೆಂದರೆ ಆ ಪಾತ್ರದಿಂದ ಸಿನಿಮಾದಲ್ಲಿ ಏನೋ ಬದಲಾವಣೆ ಆಯ್ತು ಅನ್ನುವ ಹಾಗೆ ಇರಬೇಕು. ಹೀಗಾಗಿ ನಾನು ಯಾವ ಕಥೆಯvdvt ಒಪ್ಪಿಕೊಂಡಿರಲಿಲ್ಲ. ನನಗೆ ಅನಿಸಬೇಕು ನಾನು ಈ ಕ್ಯಾರೆಕ್ಟರ್ ಮಾಡಬೇಕು ಅಂತ. ಅದಕ್ಕಾಗಿ ಕಾಯುತ್ತಿದ್ದೆ. ಈಗ ಆ ಕ್ಯಾರೆಕ್ಟರ್ ಬಂತು. ಸೇನಾಪುರ ಸಿನಿಮಾ ಮಾಡ್ತಿದ್ದೀನಿ,' ಎಂದು ಅನನ್ಯಾ ಭಟ್ ಟೀಸರ್ ರಿಲೀಸ್ (Teaser Release) ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 

'ಸೋಜಿಗದ ಸೂಜು ಮಲ್ಲಿಗೆ' ಮೂಲಕ ಟ್ರೆಂಡಾದ ಅನನ್ಯ ಭಟ್ !

'ಸೇನಾಪುರ ಸಿನಿಮಾ ನನಗೆ ವಿಶೇಷ. ಏಕೆಂದರೆ ಲೀಡ್ ಪಾತ್ರ (Lead Role)ದ ಜೊತೆಗೆ ಮ್ಯೂಸಿಕ್ ಡೈರೆಕ್ಷನ್ (Music Direction) ಮಾಡ್ತಿದ್ದೀನಿ. ಈ ಸಿನಿಮಾ ನನ್ನ ಮೊದಲ ಡೆಬ್ಯೂಗೆ ಸಾಕ್ಷಿ ಆಗುತ್ತೆ. ಮೂವಿ ರೀಲ್ಸ್ (Movie Reels) ಸಿಕ್ಕ ಮೇಲೆ ಗೊತ್ತಾಗುತ್ತದೆ ಎಷ್ಟು ಚಾಲೆಂಜಿಂಗ್ ಇದೆ ಎಂದು. ನಾನು ಹಾಡಿರೋದು, ಕಂಪೂಸ್ ಮಾಡಿರುವ ಸಿನಿಮಾ ಹೊರತಾಗಿಯೂ ಎರಡು ಡಿಫರೆಂಟ್ ಹಾಡುಗಳು ರೆಡಿಯಾಗಿವೆ. ನನ್ನ ಪಾತ್ರ ಹೇಗಿದೆ ಅಂದ್ರೆ ಎನ್‌ಜಿಓ (NGO) ಮೂಲಕ ಬರುವ ಟೀಚರ್, ಹಳ್ಳಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಕೇಳಲು ಬರುತ್ತಾಳೆ. ಹಳ್ಳಿಯಲ್ಲಿ ನಡೆಯುವ ಚಟುವಟಿಕೆಗಳು, ಅಲ್ಲಿನ ಜನರ ಮನಸ್ಥಿತಿ ಎಲ್ಲಾ ತಿಳಿದುಕೊಳ್ಳುತ್ತಾಳೆ. ಜನರಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದಾಳೆ,' ಎಂದು ಚಿತ್ರ ಕಥೆಯ ಬಗ್ಗೆ ಸುಳಿವು ನೀಡಿದ್ದಾರೆ.

ಜಾನಪದ (Folk Song) ಗೀತೆಯ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ಕಂಠದಿಂದ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿರುವ ಅನನ್ಯಾ ಹಾಡಿರುವ ಸೋಜುಗಾರ ಸೂಜುಮಲ್ಲಿಗೆ ಇವತ್ತಿಗೂ ಯೂ ಟ್ಯೂಬಲ್ಲಿ ವೀಕ್ಷಣೆ ಪಡೆಯುತ್ತಿದೆ. ಎರಡು ವರ್ಷಗಳ ಹಿಂದೆ ಸದ್ಗುರ ಉಪಸ್ಥಿತಿಯಲ್ಲಿ ಇಶಾ ಫೌಂಡೇಷನ್ ನಡೆಸಿರುವ ಈ ಕಾರ್ಯಕ್ರಮದಲ್ಲಿ ಅನನ್ಯಾ ಸೋಜುಗಾದ ಹಾಡು ಹೇಳಿದ್ದರು. ಆ ಹಾಡು ಕೇಳಿದ ಸದ್ಗುರು ವಾಸುದೇವ್ ಕಣ್ಣಲ್ಲಿ ನೀರು ಉಕ್ಕಿತ್ತು.

 

Follow Us:
Download App:
  • android
  • ios