ಮಾಜಿ ಸಚಿವ ಅಭಯ್‌ ಚಂದ್ರ ಜೈನ್‌, ಹಾಗೂ ಕಾಂಗ್ರೆಸ್‌ ಮುಖಂಡ ವೀರಣ್ಣ ಮತ್ತಿಕಟ್ಟೆಆ ದಿನ ಅತಿಥಿಗಳಾಗಿ ಬಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ವಿಭಿನ್ನವಾಗಿ ಬರಬೇಕೆನ್ನುವ ಹೊಸಬರ ತುಡಿತದಂತೆ ಈ ಚಿತ್ರಕ್ಕೂ ಹೊಸಬಗೆಯಲ್ಲಿ ಟೈಟಲ್‌ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ. ದಾಸರ ಪದದ ಮೊದಲ ಸಾಲನ್ನೇ ಟೈಟಲ್‌ ಆಗಿಸಿಕೊಂಡು ಕುತೂಹಲ ಮೂಡಿಸಿದೆ.

ಪ್ರೀತಿ ಪ್ರೇಮ ಅಂದರೆ.... ಇವರು ಹೇಳ್ತಾರೆ ನೀವು ಮಾಡಿ!

‘ಕೃಷ್ಣ ಗಾರ್ಮೆಂಟ್ಸ್‌’ ಚಿತ್ರದ ನಂತರ ಯುವ ನಿರ್ದೇಶಕ ಸಿದ್ಧು ಪೂರ್ಣ ಚಂದ್ರ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಬಸವೇಶ್ವರ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಡಾ. ಶರಣಪ್ಪ ಎಂ. ಕೊಟಗಿ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ.‘ ತಿಥಿ’ ಚಿತ್ರದ ಖ್ಯಾತಿಯ ನಟಿ ಪೂಜಾ ಇಲ್ಲಿ ವರ್ಧನ್‌ ತೀರ್ಥಹಳ್ಳಿ ಅವರಿಗೆ ಜೋಡಿ ಆಗಿದ್ದಾರೆ. ಆ ದಿನ ಮುಹೂರ್ತದ ಜತೆಗೆ ಮೊದಲ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದ ಮುಂದೆ ಬಂದಿದ್ದ ಚಿತ್ರತಂಡ ಪರಿಚಯಾತ್ಮಕ ಮಾತುಗಳ ಮೂಲಕ ಚಿತ್ರದ ವಿಶೇಷತೆ ಹೇಳಿಕೊಂಡಿತು.‘ ಹಫ್ತಾ ಚಿತ್ರದ ನಂತರ ಒಳ್ಳೆಯ ಕತೆಗಳ ನಿರೀಕ್ಷೆಯಲ್ಲಿದ್ದೆ. ಆ ನಿಟ್ಟಿನಲ್ಲಿ ಸಾಕಷ್ಟುಕತೆ ಕೇಳಿದೆ. ಅದೇ ವೇಳೆ ಸಿದ್ಧು ಪೂರ್ಣ ಚಂದ್ರ ಅವರು ಸಿಕ್ಕರು. ಚಿತ್ರದ ಕತೆ ಹೇಳಿದರು . ಅದು ಇಷ್ಟವಾಯಿತು . ನಾನಿಲ್ಲಿ ಒಬ್ಬ ಕ್ರಿಮಿನಲ್‌ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಕ್ಲೈಮ್ಯಾಕ್ಸ್‌ ನಲ್ಲಿ ಆತ ಒಳ್ಳೆಯ ವ್ಯಕ್ತಿಯಾಗಿ ಪರಿವರ್ತನೆ ಆಗುತ್ತಾನೆ. ಅದು ಹೇಗೆ ಎನ್ನುವುದು ಸಸ್ಪೆನ್ಸ್‌. ಉಳಿದಂತೆ ಆ ಪಾತ್ರದ ಮೂಲಕ ನಿರ್ದೇಶಕರು ಒಳ್ಳೆಯ ಸಂದೇಶ ಹೇಳುವ ಪ್ರಯತ್ನ ಮಾಡಿದ್ದಾರೆ’ ಎನ್ನುತ್ತಾ ತಮ್ಮ ಪಾತ್ರದ ವಿವರ ನೀಡಿದರು ನಟ ವರ್ಧನ್‌.

ನಿಖಿಲ್‌ ಕುಮಾರಸ್ವಾಮಿ ಭಾವೀ ಪತ್ನಿಗೆ ಈ ಕೆಲಸ ಬೇಕಂತೆ! .

ಇನ್ನು ಪೂಜಾ ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ . ಅವರು ಸ್ಮಶಾನದಲ್ಲಿರುವ ಹುಡುಗಿ. ನಾಯಕನ ವ್ಯಕ್ತಿತ್ವವನ್ನು ಬದಲಿಸುವ ಪಾತ್ರ. ಸಿನಿಮಾ ಬೇಡ ಎನ್ನುವಾದ ನಿರ್ದೇಶಕರು ಈ ಕತೆ ಹೇಳಿದರು. ಮೆಚ್ಚುಗೆ ಆಗಿ ಅಭಿನಯಿಸಲು ಒಪ್ಪಿಕೊಂಡೆ’ ಎಂದರು. ಚಿತ್ರದ ಬಹುತೇಕ ಚಿತ್ರೀಕರಣ ಸ್ಮಶಾನದಲ್ಲೇ ನಡೆಯಲಿದೆಯಂತೆ. ಅದಕ್ಕಾಗಿ ರಾಮನಗರದ ಬಳಿಯ ಸ್ಮಶಾನವೊಂದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸಿನಿಮಾದ ಸಿದ್ಧ ಸೂತ್ರಗಳನ್ನು ಒಡೆಯುವ ಸಿನಿಮಾ ಇದು’ ಎನ್ನುವ ಮಾತುಗಳ ಮೂಲಕ ಇದೊಂದು ಡಿಫರೆಂಟ್‌ ಸಿನಿಮಾ ಎಂದು ಹೇಳುವ ಪ್ರಯತ್ನ ಮಾಡಿದರು ನಿರ್ದೇಶಕ ಸಿದ್ದು ಪೂರ್ಣಚಂದ್ರ. ಬಲ ರಾಜ್ವಾಡಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವರ್ಧನ್‌ ಅವರಿಗೆ ಶುಭ ಕೋರಲು ನಟರಾದ ರಾಘವ್‌ ನಾಗ್‌, ಬಿಗ್‌ಬಾಸ್‌ ದಿವಾಕರ್‌ ಬಂದಿದ್ದರು.