ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ ಇದೇ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಮೂರು ಹಾಡುಗಳು ಹಾಗೂ ಟೀಸರ್‌ ಮೂಲಕ ಹೊಸ ಸಂಚಲನ ಮೂಡಿಸಿರುವ ಪವರ್ ಬಾಯ್ ಕ್ರೇಜ್‌ ಹೆಚ್ಚುತ್ತಿದೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿದ್ದು, ಕಿರುತೆರೆ ನಟಿ ಶ್ವೇತಾ ಪ್ರಸಾದ್ ಸಾಥ್‌ ನೀಡಿದ್ದಾರೆ. 

ಏಪ್ರಿಲ್‌ 1ರಂದು ಪುನೀತ್‌ ರಾಜ್‌ಕುಮಾರ್ ಸಿನಿಮಾ 'ಯುವರತ್ನ' ಬಿಡುಗಡೆ!

ಯುವರತ್ನ ಚಿತ್ರದಲ್ಲಿ ತೆಲುಗು ನಟಿ ಸಾಯೇಶಾ ಅಭಿನಯಿಸಿದ್ದಾರೆ. ಸಾಯೇಶಾ ಪಾತ್ರಕ್ಕೆ ನಟಿ ಶ್ವೇತಾ ಧ್ವನಿ ನೀಡಿದ್ದಾರೆ. ಮೊದಲ ಬಾರಿ ಡಬ್ ಮಾಡಲು ಅವಕಾಶ ಬಂದಿರುವ ಕಾರಣ ಶ್ವೇತಾ, ಒಂದೇ ಏಟಿಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸಾಯೇಶಾ ಮೊದಲ ಕನ್ನಡ ಸಿನಿಮಾ ಆಗಿರುವ ಕಾರಣ ಎಷ್ಟು ಎಕ್ಸೈಟ್ ಆಗಿದ್ದರೋ, ಅಷ್ಟೇ ಎಕ್ಸೈಟ್ ಶ್ವೇತಾ ಸಹ ಮೊದಲ ಬಾರಿಗೆ ವಾಯ್ಸ್ ಓವರ್ ನೀಡುವಾಗ ಆಗಿದ್ದರು. 

1 ಮಿಲಿಯನ್ ವೀಕ್ಷಣೆ ಪಡೆದ 'ಊರಿಗೊಬ್ಬನೆ ರಾಜಾ' ಹಾಡು!

"

ಧಾರಾವಾಹಿಯಿಂದ ಹೊರ ಬಂದ ಶ್ವೇತಾ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಗಾರ್ಡನಿಂಗ್ ಮಾಡುತ್ತಾ, ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಸಖತ್ ಬ್ಯುಸಿಯಾಗಿರುವ ಶ್ವೇತಾ ಆಗಾಗ ಕೆಲವು ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಶ್ವೇತಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತವೆ. ಯುವರತ್ನ ಚಿತ್ರದ ಮೂಲಕ ಡಬ್ಬಿಂಗ್ ಲೋಕಕ್ಕೆ ಕಾಲಿಟ್ಟಿರುವ ಶ್ವೇತಾಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.