ಹೀಗಾಗಿ ಅಪ್ಪು ಅಭಿಮಾನಿಗಳಿಗೆ ಹೊಸ ವರ್ಷ ಸಂಭ್ರಮ ತಂದಿದೆ. ಯಾಕೆಂದರೆ ತೆರೆ ಮೇಲೆ ಬರಲು ಸಜ್ಜಾಗಿರುವುದು ‘ಯುವರತ್ನ’ ಸಿನಿಮಾ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ, ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಏಪ್ರಿಲ್‌ 1ರಂದು ಬಿಡುಗಡೆ ಆಗಲಿದೆ.

ಈಗಾಗಲೇ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿರುವುದರಿಂದ ಪುನೀತ್‌ ಅಭಿಮಾನಿಗಳಲ್ಲಿ ಕ್ರೇಜ್‌ ಹೆಚ್ಚಾಗಿದೆ. ತಮ್ಮ ಸಿನಿಮಾ ಬಿಡುಗಡೆಯ ಮೂಲಕ ಜತೆಗೆ 2021ರ ಹೊಸ ವರ್ಷವನ್ನು ‘ಯುವರತ್ನ’ ಚಿತ್ರತಂಡ ಅದ್ದೂರಿಯಾಗಿ ಸ್ವಾಗತಿಸುತ್ತಿದೆ. ಸದ್ಯಕ್ಕೆ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ಎರಡು ಹಾಡುಗಳು ಬಿಡುಗಡೆ ಆಗಿವೆ. ಯೂತ್‌ ಪವರ್‌ ಹೇಳುವ ಒಂದು ಹಾಡು ಹಾಗೂ ಮೆಲೋಡಿಯಿಂದ ಕೂಡಿದ ರೊಮ್ಯಾಂಟಿಕ್‌ ಹಾಡು ಮತ್ತೊಂದು. ಹೀಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿರುವುದು ಉಳಿದ ಬಿಗ್‌ ಬಜೆಟ್‌ ಚಿತ್ರಗಳ ಬಿಡುಗಡೆಗೂ ಉತ್ಸಾಹ ತುಂಬಿದೆ.

ಯುವರತ್ನ ಚಿತ್ರದ ಹಾಡು ಬಿಡುಗಡೆ; ಹೇಗಿದೆ ಕೇಳಿ! 

ತಮಿಳಿನ ಸಾಯೇಷಾ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಪುನೀತ್‌ರಾಜ್‌ಕುಮಾರ್‌ ನಟನೆಯ ಸಿನಿಮಾ ತೆರೆ ಕಾಣುತ್ತಿರುವುದು ‘ಯುವರತ್ನ’ ಚಿತ್ರದ ಹೈಲೈಟ್‌.