ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಶಿಲಾದಿತ್ಯ  ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ವತಃ ಶ್ರೇಯಾ ಇನ್‌ಸ್ಟಾಗ್ರಾಂನಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಉಲ್ಲಾಸದ ಹೂಮಳೆ ಗಾಯಕಿ ಶ್ರೇಯಾಗೆ ಬರ್ಥ್‌ಡೇ ವಿಶ್‌ನ ಸುರಿಮಳೆ 

ಶ್ರೇಯಾ ಪೋಸ್ಟ್:
'ಬೇಬಿ ಶ್ರೇಯಾದಿತ್ಯ ಆನ್‌ ದಿ ವೇ. ಶಿಲಾದಿತ್ಯ ಮತ್ತು ನಾನು ಈ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಥ್ರಿಲ್ ಆಗಿದ್ದೀವಿ.  ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ನಮಗೆ ಬೇಕಿದೆ. ನಮ್ಮ ಜೀವನದ ಹೊಸ ಅಧ್ಯಾಯ ಶುರುವಾಗಲಿದೆ,' ಎಂದು ಶ್ರೀಯಾ ಬರೆದುಕೊಂಡಿದ್ದಾರೆ.

ಶ್ರೇಯಾ ಹಾಗೂ ಶಿಲಾದಿತ್ಯ 2015ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಂಗಾಳಿ ಶೈಲಿಯಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಇವರಿಬ್ಬರೂ 10 ವರ್ಷಗಳ ಕಾಲ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದು ಸಪ್ತಪದಿ ತುಳಿದರು. ಬರೋಬ್ಬರಿ 6 ವರ್ಷಗಳ ನಂತರ ಪುಟ್ಟ ಅತಿಥಿ ಅಗಮನವಾಗುತ್ತಿರುವ ವಿಚಾರ ತಿಳಿದು ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹಾಗೂ ಅಪ್ತರು ಶುಭ ಹಾರೈಸುತ್ತಿದ್ದಾರೆ.

21 ಕೆಜಿ ತೂಕ ಕಡಿಮೆ ಮಾಡಿಕೊಂಡು ಬಾಡಿ ಶೇಮಿಂಗ್‌ ಟ್ರೋಲರ್ಸ್‌ ಬಾಯಿ ಮುಚ್ಚಿಸಿದ ನೇಹಾ ಧುಪಿಯಾ! 

ಬಾಟಲ್ ಹಾಗೂ ಬೀಚ್ ಬ್ಲೂ ಟಾಪ್‌ ಧರಿಸಿ ಬೇಬಿ ಬಂಪ್ ತೋರಿಸುತ್ತಿರುವ ಶ್ರೇಯಾ ಫೋಟೋಗೆ, ದಿಯಾ ಮಿರ್ಜಾ, ಮೋಹನ ಶಕ್ತಿ, ಸೋಫಿ ಚೌದ್ರಿ, ವಿಶಾಲ್ ದನಾಲಿ, ರಾಘವ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶ್ರೇಯಾ ಆರೋಗ್ಯ ವಿಚಾರಿಸಿ, ಪ್ರೆಗ್ನೆಂಸಿ ಗ್ಲೋ ಬಗ್ಗೆ ಹೊಗಳಿದ್ದಾರೆ.