ವಸಿಷ್ಠ ಸಿಂಹ ಮತ್ತು ಸ್ಟೆಫಿ ಪಟೇಲ್‌ ಲಂಡನ್‌ಗೆ ಹೋಗಿ ಬಂದಿದ್ದಾರೆ. ಅವರು ಲಂಡನ್‌ಗೆ ಹೋಗಿದ್ದು ‘ಲವ್‌ ಲಿ’ ಚಿತ್ರದ ಚಿತ್ರೀಕರಣಕ್ಕೆ. ವಸಿಷ್ಠ ಸಿಂಹ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ.

ವಸಿಷ್ಠ ಸಿಂಹ ಮತ್ತು ಸ್ಟೆಫಿ ಪಟೇಲ್‌ ಲಂಡನ್‌ಗೆ ಹೋಗಿ ಬಂದಿದ್ದಾರೆ. ಅವರು ಲಂಡನ್‌ಗೆ ಹೋಗಿದ್ದು ‘ಲವ್‌ ಲಿ’ ಚಿತ್ರದ ಚಿತ್ರೀಕರಣಕ್ಕೆ. ವಸಿಷ್ಠ ಸಿಂಹ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ಸದ್ಯ ಚಿತ್ರತಂಡ ಲಂಡನ್‌ನ ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ಮುಗಿಸಿ ಭಾರತಕ್ಕೆ ವಾಪಸ್ ಆಗಿದೆ. ವಸಿಷ್ಠ ಸಿಂಹ, ‘ಹತ್ತು ಹಲವು ಭಾವಗಳನ್ನು ಹೊಂದಿರುವ ಸುಂದರ ಕತೆಯನ್ನು ಹೊಂದಿರುವ ಸಿನಿಮಾ. ಒಂದು ಕಡೆ ರೊಮ್ಯಾಂಟಿಕ್ ಲವ್‌ ಸ್ಟೋರಿ ಸಾಗುತ್ತಿದ್ದರೆ ಮತ್ತೊಂದು ಕಡೆ ರೌಡಿಸಂ ಕಥಾ ಹಂದರವೂ ಇದೆ. ನೈಜ ಘಟನೆಯನ್ನು ಸಿನಿಮೀಯವಾಗಿ ಹೇಳಿರುವುದು ಈ ಸಿನಿಮಾದ ವಿಶಿಷ್ಟತೆ’ ಎನ್ನುತ್ತಾರೆ.

ನಿರ್ದೇಶಕ ಚೇತನ್ ಕೇಶವ್, ‘ಇದು ವಸಿಷ್ಠ ಸಿಂಹ ವೃತ್ತಿ ಬದುಕಿನಲ್ಲಿಯೇ ಅತಿ ಹೆಚ್ಚು ಬಜೆಟ್‌ನ ಸಿನಿಮಾ. ಈ ಸಿನಿಮಾದಲ್ಲಿ ಹಲವು ಆಯಾಮಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ’ ಎನ್ನುತ್ತಾರೆ, 'ನಿರ್ಮಾಪಕರ ಸಹಕಾರದಿಂದ ಸಿನಿಮಾ ಇಷ್ಟು ಚೆನ್ನಾಗಿ ಬಂದಿದೆ. ಸಾಂಗ್ ನಂತೆ ಸಿನಿಮಾ ಕೂಡ ಕಲರ್ ಫುಲ್ ಆಗಿದೆ. ಪ್ರೀತಿಯಲ್ಲಿ ಏನೆಲ್ಲಾ ಇರುತ್ತೆ ಎಂಬುದೇ ಈ ಸಿನಿಮಾ. ಮೊದಲ ಭಾಗದಲ್ಲಿ ರೋಮ್ಯಾಂಟಿಕ್ ಕಥೆ ಇದ್ದರೆ, ದ್ವಿತೀಯಾರ್ಧದಲ್ಲಿ ಕಂಟೆಂಟ್ ಬಗ್ಗೆ ಹೇಳಲಾಗಿದೆ. ನಾನು 9 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶಕ ನರ್ತನ್ ಜೊತೆ ಮಫ್ತಿ ಚಿತ್ರಕ್ಕೆ ಕೆಲಸ ಮಾಡಿದ್ದೇನೆ. ಸ್ಕೂಲ್ ದಿನಗಳಿಂದ ನನಗೆ ಸಿನಿಮಾ ಮಾಡುವ ಆಸೆ ಎಂದರು.

ಮುಂದುವರಿದು ಮಾತನಾಡಿ, ಉಪೇಂದ್ರ, ರವಿಚಂದ್ರನ್ ಅವರು ನನಗೆ ಸ್ಪೂರ್ತಿ. ಆದರೆ ನಾನು ಹೆಚ್ಚಾಗಿ ಆ್ಯಕ್ಷನ್ ಸಿನಿಮಾಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಈ ಚಿತ್ರದಲ್ಲಿ ಮಾಸ್ , ಕ್ಲಾಸ್ ಎರಡನ್ನು ಬಳಸಿದ್ದೇನೆ. ಚಿತ್ರದಲ್ಲಿ ಸೋಷಿಯಲ್ ಮೆಸೇಜ್ ಕೂಡ ಇದೆ. ಮಂಗಳೂರು, ಬೆಂಗಳೂರು ಉಡುಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಲಂಡನ್‌ನಲ್ಲಿ ಒಂದು ಸಾಂಗ್ ಶೂಟಿಂಗ್ ಮಾಡಲು ಯೋಜನೆ ಹಾಕಲಾಗಿದೆ. ರೌಡಿಸಮ್, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್‌ನಲ್ಲಿ ಸಿನಿಮಾ ಸಾಗುತ್ತದೆ. 

Haripriya-Vasishta Simha: ಕೃಷ್ಣಮಠದಲ್ಲಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ-ಹರಿಪ್ರಿಯಾ!

ಪ್ರೀತಿ, ನಂಬಿಕೆ ಮೇಲೆ ಸಂಬಂಧಗಳು ಮುಖ್ಯ. ಅವುಗಳನ್ನು ಹೇಗೆ ಉಳಿಸುಕೊಳ್ಳಬೇಕು ಎಂಬುದು ಈ ಕಥೆಯಲ್ಲಿದೆ ಎಂಬುದು ಚೇತನ್‌ ಮಾತು. 'ನನ್ನನ್ನು ತುಂಬಾ ಕಾಡಿದಂತಹ ಸಿನಿಮಾ. ಇದು ಸುಂದರ ಪ್ರೇಮಕಥೆಯ ಚಿತ್ರ. ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ನಿರ್ಮಾಪಕರು ಸೇರಿದಂತೆ ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು ನಾಯಕ ವಸಿಷ್ಠ ಸಿಂಹ. ಮೇ 13ರಂದು ಅನೂಪ್ ಸೀ‍ಳಿನ್ ಸಂಗೀತ ನೀಡಿರುವ, ವಶಿಷ್ಠ ಸಿಂಹ ಹಾಡಿರುವ ಸಿನಿಮಾದ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ರವೀಂದ್ರ ಕುಮಾರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.