Leader Ramaiah: ತೆರೆ ಮೇಲೆ ಬರಲಿದೆ ಸಿದ್ದರಾಮಯ್ಯ ಬಯೋಪಿಕ್: ಸಿಎಂ ಪಾತ್ರಕ್ಕೆ ನಟನಾರು?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಯೋಪಿಕ್ ಲೀಡರ್​ ರಾಮಯ್ಯ ಚಿತ್ರದ ಶೂಟಿಂಗ್​ಗೆ ಭರ್ಜರಿ ತಯಾರಿ ನಡೆದಿದ್ದು, ಸಿಎಂ ಪಾತ್ರಕ್ಕೆ ನಟಿಸ್ತಿರೋರ್ಯಾರು?
 

shooting of Chief Minister Siddaramaiahs biopic Leader Ramaiah soon suc

ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ರಾಜಕೀಯ ವಲಯದಲ್ಲಿ ಒಂದೆಡೆ ಬಿರುಸಿನ ಚಟುವಟಿಕೆ ನಡೆಯುತ್ತಿದ್ದರೆ, ಅದೇ ವೇಳೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯನವರ  ಜೀವನಾಧಾರಿತ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಚುನಾವಣೆಯ ಸಮಯದಲ್ಲಿ ಇವೆಲ್ಲಾ ಬೇಡ ಎಂದು ಖುದ್ದು ಸಿದ್ದರಾಮಯ್ಯನವರು ಹೇಳಿದ್ದರು ಎನ್ನಲಾಗಿತ್ತು. ಆದರೂ ಸಿನಿಮಾದ ಬಗ್ಗೆ ವಿಧ ವಿಧ  ಸುದ್ದಿಗಳು ಹರಡಿದ್ದವು. ಇದಾದ ಬಳಿಕ ಕಳೆದ ಮಾರ್ಚ್​ 30ರಂದು  ಈ ಬಯೋಪಿಕ್​ನ  ಪೋಸ್ಟರ್‌ ಕೂಡ ರಿಲೀಸ್‌ ಮಾಡಲಾಗಿತ್ತು. ಲೀಡರ್ ರಾಮಯ್ಯ ಹೆಸರಿನ ಸಿನಿಮಾ ಪೋಸ್ಟರ್ ಅನ್ನು ಸಿದ್ದರಾಮಯ್ಯನವರ ಮನೆಯ ಮುಂದೆ  ಅನಾವರಣ ಮಾಡಲಾಗಿತ್ತು. ನಂತರ ಆ ಸಿನಿಮಾದ ಬಗ್ಗೆ ಅಷ್ಟಾಗಿ ಸುದ್ದಿಗಳು ಇರಲಿಲ್ಲ. ಇದೀಗ ಸಿನಿಮಾ ಕುರಿತು ಬಿಗ್​ ಅಪ್​ಡೇಟ್ಸ್​ ಹೊರಬಂದಿದೆ. ಅದೇನೆಂದರೆ, ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಗಂಗಾವತಿ ಮೂಲದ ಹಯಾದ್ ಪೀರ್ ಸಂಸ್ಥೆಯು ಚಿತ್ರದ ಅಂತಿಮ  ಹಂತದ ಸಿದ್ಧತೆಯಲ್ಲಿದೆ ಎಂದು ವರದಿಯಾಗಿದೆ. ಲೀಡರ್​ ರಾಮಯ್ಯ ಎಂದು ಹೆಸರಿಟ್ಟಿರುವ ಈ ಚಿತ್ರಕ್ಕೆ  A King Raised by the People ಅರ್ಥಾತ್​  ಜನರಿಂದ ಬೆಳೆದು ಬಂದ ರಾಜ ಎಂಬ ಟ್ಯಾಗ್‌ಲೈನ್ ನೀಡಲಾಗಿದೆ.  

ಈ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಹೊರಬಂದಿದೆ. ಅದೇನೆಂದರೆ, ಚಿತ್ರವನ್ನು ಗೌರಿಬಿದನೂರಿನ  ಸತ್ಯರತ್ನಂ (SathyaRatnam) ನಿರ್ದೇಶನ ಮಾಡಲಿದ್ದು, ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬುದು. ಅಂದಾಜು 30 ಕೋಟಿ ರೂಪಾಯಿಯ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೇ ಮೂರನೆಯ ತಾರೀಖಿನಂದು ಸಿದ್ದರಾಮಯ್ಯ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಆ ದಿನದಂದೇ ಚಿತ್ರ ಬಿಡುಗಡೆ ಮಾಡಬೇಕು ಅನ್ನೋದು ನಿರ್ದೇಶಕ ಸತ್ಯ ರತ್ನಮ್‌ ಅವರ ಕನಸಾಗಿತ್ತು. ಈಗ ಚಿತ್ರದ ಅಂತಿಮ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.  

ತೆರೆಮೇಲೆ ಕಲ್ಪನಾ ಚಾವ್ಲಾ ಬಯೋಪಿಕ್: ಭಾರತದ ಮೊದಲ ಮಹಿಳಾ ಗಗನಯಾತ್ರಿ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟಿ

ಸಿದ್ಧರಾಮಯ್ಯ (Siddaramaiah) ಅವರ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ ನಟಿಸುವ ಸಾಧ್ಯತೆ ಇದೆ ಎಂದು ಮೊದಲಿನಿಂದಲೂ ಕೇಳಿಬಂದಿದ್ದು, ಅವರೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ.  ಈಗಾಗಲೇ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಲಾಗಿದೆ ಎನ್ನುವ ವರದಿಯಾಗಿದ್ದು,  ವಿಜಯ್‌ ಸೇತುಪತಿ ಕೂಡ ಇದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ವಿಜಯ್​ ಸೇತುಪತಿ (Vijay Setupathi) ಅವರು ಬೇರೆ ಬೇರೆ ಸಿನಿಮಾ ಒಪ್ಪಿಕೊಂಡಿರುವ ಕಾರಣಕ್ಕೆ ಸಿದ್ದರಾಮಯ್ಯನವರಾಗಿ  ನಟಿಸಲು ಇನ್ನೂ ಡೇಟ್​ ಫಿಕ್ಸ್​ ಮಾಡಿಲ್ಲವಂತೆ.  ಅವರ ಡೇಟ್ಸ್ ಪಡೆಯಲು ಮತ್ತು ಕೆಲಸ ಆರಂಭಿಸಲು ಪ್ರೊಡಕ್ಷನ್ ಹೌಸ್ ಸಿದ್ಧವಾಗಿದೆ.  ಆದ್ದರಿಂದ ವಿಜಯ್ ಸೇತುಪತಿಯೇ  ನಟಿಸುವುದು ಪಕ್ಕಾ ಎನ್ನಲಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗು ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 

ಅಷ್ಟಕ್ಕೂ ಈ ಚಿತ್ರ ಎರಡು ವಿಭಾಗಗಳಲ್ಲಿ (Two Parts) ಬರಲು ಕಾರಣವೇನೆಂದರೆ, ಮೊದಲ ಪಾರ್ಟ್​ನಲ್ಲಿ  ಸಿದ್ದರಾಮಯ್ಯನವರ ಬಾಲ್ಯ ಮತ್ತು ಯೌವ್ವನದ ಕುರಿತು ವಿವರಣೆ ನೀಡಲಾಗುತ್ತದೆ. ರಾಜಕೀಯ ಪ್ರವೇಶಕ್ಕೂ ಮುನ್ನ ಸಿದ್ದರಾಮಯ್ಯನವರ ವಕೀಲಿ ವೃತ್ತಿ ನಡೆಸುತ್ತಿದ್ದರು. ಈ ಬಗ್ಗೆಯೂ ಮೊದಲ ಪಾರ್ಟ್​ನಲ್ಲಿ ತೋರಿಸಲಾಗುತ್ತದೆಯಂತೆ.  ಇದರ ಜೊತೆಗೆ ಅವರು ಯೌವ್ವನ ಕಾಲದಲ್ಲಿಯೇ ನಡೆಸಿದ  ಹೋರಾಟಗಳು ಹಾಗೂ ಅವರ ರಾಜಕೀಯ ಎಂಟ್ರಿಯ ಬಗ್ಗೆಯೂ ಇರಲಿದೆಯಂತೆ. ಮುಂದಿನ ದಿನಗಳ ಬಗ್ಗೆ ಪಾರ್ಟ್​-2ನಲ್ಲಿ ತೋರಿಸಲಾಗುತ್ತದೆ. ಸಿದ್ದರಾಮಯ್ಯ ಕೂಡ ಚಿತ್ರದಲ್ಲಿ ಕೊನೆಯ ಅರ್ಧ ಗಂಟೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಶೂಟಿಂಗ್​ ಶೀಘ್ರದಲ್ಲಿಯೇ ಶುರುವಾಗಲಿದೆ ಎನ್ನಲಾಗಿದೆ. 

ನಂದಿನಿ ಬ್ರ್ಯಾಂಡ್‌ ರಾಯಭಾರಿಯಾಗಿ ಶಿವ ರಾಜ್‌ಕುಮಾರ್‌ ಆಯ್ಕೆ: ರಾಜ್‌ಕುಮಾರ್‌, ಪುನೀತ್‌ ಬಳಿಕ ಶಿವಣ್ಣ
 

Latest Videos
Follow Us:
Download App:
  • android
  • ios