ಒಟಿಟಿ ಪ್ರವೇಶಿಸಿ ದಾಖಲೆ ಬರೆದ ಘೋಸ್ಟ್: 10 ಸಾವಿರ ಚದರ ಅಡಿಯ ಪೋಸ್ಟ್ ರಿಲೀಸ್!
ಶಿವರಾಜ್ ಕುಮಾರ್ ಅವರ ಅಭಿನಯದ ಘೋಸ್ಟ್ ಚಿತ್ರ ಒಟಿಟಿ ಪ್ರವೇಶಿಸುತ್ತಿದ್ದಂತೆಯೇ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ 10 ಸಾವಿರ ಚದರ ಅಡಿಯ ಪೋಸ್ಟ್ ಅನಾವರಣಗೊಳಿಸಲಾಗಿದೆ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ ಅಭಿನಯದ ಘೋಸ್ಟ್ ಚಿತ್ರ ಕಳೆದ ತಿಂಗಳು ರಿಲೀಸ್ ಆಗಿದೆ. ಇದಾಗಲೇ ಚಿತ್ರ ಭರ್ಜರಿ ಯಶಸ್ಸು ಗಳಿಸಿದೆ. ಶ್ರೀನಿ ನಿರ್ದೇಶನದ ಸಿನಿಮಾ ಇದೀಗ ಒಟಿಟಿಗೆ ಕಾಲಿಟ್ಟಿದೆ. ನಿನ್ನೆ ಅಂದರೆ ನವೆಂಬರ್ 17ರಂದು ಜೀ5ನಲ್ಲಿ ಇದು ಬಿಡುಗಡೆ ಆಗಿದೆ. ಇದಕ್ಕಾಗಿ ಜೀ5 ಕಡೆಯಿಂದ ಹೊಸ ಪ್ರಯತ್ನ ಮಾಡಲಾಗಿದ್ದು, 10 ಸಾವಿರ ಅಡಿಯ ‘ಘೋಸ್ಟ್’ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರ ವಿಡಿಯೋ ವೈರಲ್ ಆಗಿದೆ. ಇದರ ವಿಡಿಯೋ ಅನ್ನು ಹರೀಶ್ ಅರಸು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಾಹಸ ಥ್ರಿಲ್ಲರ್ ಸಿನಿಮಾ ಘೋಸ್ಟ್ ಇದೇ ನವೆಂಬರ್ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಶಿವಣ್ಣನ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲದೆ ಇರುವವರು ಜೀ5 ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು. ಈಗಾಗಲೇ ನೋಡಿರುವವರು ಇನ್ನೊಮ್ಮೆ ಒಟಿಟಿಯಲ್ಲೂ ನೋಡಬಹುದು ಎಂದು ಅವರು ತಿಳಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಹತ್ತು ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರ್ ಅನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂಇಎಸ್ ಗ್ರೌಂಡ್ ನಲ್ಲಿ ಘೋಸ್ಟ್ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಲಾಗಿದೆ. ಸಂದೇಶನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಘೋಸ್ಟ್' ಸಿನಿಮಾ ನಿರ್ಮಾಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ.
ಘೋಸ್ಟ್ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ನಿರ್ದೇಶಕ ಶ್ರೀನಿ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಅವರ ಹೊಸ ಲುಕ್ ದರ್ಶನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಘೋಸ್ಟ್' ಸಿನಿಮಾ ನಿರ್ಮಾಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತವಿದೆ. ಶಿವಣ್ಣನ ಜೊತೆ ಮಲಯಾಳಂ ನಟ ಜಯರಾಮ್, ಬಾಲಿವುಡ್ ನಟ ಅನುಪಮ್ ಖೇರ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಭೂತ-ಪ್ರೇತಗಳ ದ್ವೀಪದಲ್ಲಿ ಡಾ.ಬ್ರೋ! ಹತ್ರ ಹೋದ್ರೆ ಅಲ್ಲೇ ಮಿಸ್ಸಿಂಗ್, ವಾಪಸಾಗೋ ಮಾತೇ ಇಲ್ಲ...
ಅಷ್ಟಕ್ಕೂ ಈ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಲೇ ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದರು. ಶಿವರಾಜ್ ಕುಮಾರ್ ಅವರ ಗ್ಯಾಂಗ್‌ಸ್ಟರ್ ಲುಕ್, ಖಡಕ್ ಡೈಲಾಗ್‌ಗಳು ಹೈಲೈಟ್ ಆಗಿದ್ದವು. ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಡಲ್ಲ. ಸಾಮ್ರಾಜ್ಯ ಧ್ವಂಸ ಮಾಡುವ ನನ್ನಂಥವರನ್ನು ಸಮಾಜ, ಇತಿಹಾಸ ಎಂದೂ ಮರೆತಿಲ್ಲ ಎನ್ನುವ ಮೂಲಕ ಶುರುವಾಗುವ ಟ್ರೇಲರ್ನಲ್ಲಿ ಶಿವರಾಜ್ ಕುಮಾರ್ ಅವರು ದೆ ಕಾಲ್ ಮಿ ಘೋಷ್ಟ್ ಎನ್ನುವ ಮೂಲಕ ಫ್ಯಾನ್ಸ್ ಚಪ್ಪಾಳೆ ಗಿಟ್ಟಿಸಿದ್ದಾರೆ.
'ಸಂದೇಶ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿ 'ಘೋಸ್ಟ್' ನಿರ್ಮಾಣವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಅಬ್ಬರ ತೋರಿತ್ತು ಸಿನಿಮಾ. ಇನ್ನು ಈ ಸಿನ್ಮಾಗೆ ಅರ್ಜುನ್ ಜನ್ಯಾ ಸಂಗೀತ ಇದೆ. ನಟ ಶಿವಣ್ಣ ಅವರ ಜೊತೆಗೆ ಮಲಯಾಳಂ ನಟ ಜಯರಾಮ್ & ಬಾಲಿವುಡ್ ನಟ ಅನುಪಮ್ ಖೇರ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಮತ್ತು ಇತರರು ಸಾಥ್ ನೀಡಿದ್ದರು. ಹೀಗಾಗಿ ಸಿನಿಮಾ ಭಾರತದ ಮೂಲೆ ಮೂಲೆಯಲ್ಲು ಸದ್ದು ಮಾಡಿತ್ತು. ಈಗ ಓಟಿಟಿ ಅಂಗಳದಲ್ಲೂ ದಾಖಲೆ ಬರೆಯಲು ಸಜ್ಜಾಗಿದೆ.
ದೀಪಿಕಾ ನನ್ನ ಸ್ಪರ್ಧಿನೇ ಅಲ್ಲ, ಅವಳೇನಿದ್ರೂ... ಕರೀನಾ ಕಪೂರ್ ಅಹಂಕಾರದ ಮಾತಿಗೆ ನೆಟ್ಟಿಗರ ಕ್ಲಾಸ್