Asianet Suvarna News Asianet Suvarna News

ಮಂತ್ರಾಲಯದಲ್ಲಿ ಶಿವಣ್ಣ; ಕುಟುಂಬ ಸಮೇತ ರಾಯರ ದರ್ಶನ ಪಡೆದ ಹ್ಯಾಟ್ರಿಕ್ ಹೀರೋ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಶಿವರಾಜ್ ಕುಮಾರ್ ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಧನ್ಯರಾದರು. 

Shivarajkumar visits Mantralaya Temple with his family sgk
Author
First Published Dec 3, 2022, 2:51 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ವೇದ ಸಿನಿಮಾದ ಟೀಸರ್ ಬಿಡುಗಡೆ ಹಿನ್ನೆಲೆ ಶಿವರಾಜ್ ಕುಮಾರ್ ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ರಾಯರ ದರ್ಶನ ಪಡೆದು ಶಿವಣ್ಣ ದಂಪತಿ ಧನ್ಯರಾದರು. ಮೊದಲಿಗೆ ಮಂಚಲಮ್ಮ ದೇವಿಯ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ಬಳಿಕ ರಾಯರ ಮಠಕ್ಕೆ ಭೇಟಿ ನೀಡಿದರು. ರಾಯರ ದರ್ಶನದ ಬಳಿಕ ಸಂಜೆ ರಾಯಚೂರಿನ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ. ವೇದ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಇಡೀ ತಂಡ ಹಾಜರಿರಲಿದೆ. 

ವೇದ ಸಿನಿಮಾ ನಿರ್ದೇಶಕ ಹರ್ಷ ಸಾರಥ್ಯದಲ್ಲಿ ಮೂಡಿ ಬಂದಿದೆ. ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್ ನಲ್ಲಿ ಈಗಾಗಲೇ 3 ಸಿನಿಮಾಗಳು ಬಂದಿವೆ. ಇದೀಗ 4ನೇ ಸಿನಿಮಾ ವೇದ ಆಗಿದ್ದು ರಿಲೀಸ್‌ಗೆ ಸಜ್ಜಾಗಿದೆ. ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಹರ್ಷ ಇದೀಗ ವೇದ ಮೂಲಕ ಮತ್ತೆ ಶಿವರಾಜ್ ಕುಮಾರ್ ಜೊತೆ ಬರ್ತಿದ್ದಾರೆ.  ಅಂದಹಾಗೆ ಇಂದು ರಾಯಚೂರಿನಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಇಡೀ ಸಿನಿಮಾತಂಡ ಹಾಜರಿರಲಿದೆ.

 

Follow Us:
Download App:
  • android
  • ios