ತಮಿಳು ಮಾತನಾಡಲು ಭಯ ಯಾಕೆ? ಹೆದರಿಕೊಂಡು ಬದುಕುವುದಕ್ಕೆ ಆಗಲ್ಲ: ಶಿವರಾಜ್‌ಕುಮಾರ್ ಹೇಳಿಕೆ ವೈರಲ್
ತಮಿಳು ಸಂದರ್ಶನದಲ್ಲಿ ಶಿವರಾಜ್‌ಕುಮಾರ್ ನೀಡಿದ ಹೇಳಿಕೆ ವೈರಲ್. ಅಣ್ಣಾವ್ರ ಮಕ್ಕಳೇ ಹೀಗೆ ಹೇಳಿಬಿಟ್ಟರೆ ನಾವು ಏನು ಮಾಡೋದು ಅಂತಿದ್ದಾರೆ ಅಭಿಮಾನಿಗಳು.....
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಕೆಲವು ದಿನಗಳ ಹಿಂದೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿನಿ ರಸಿಕರ ಗಮನ ಸೆಳೆದಿದೆ. ಬ್ಯಾಕ್ ಟು ಬ್ಯಾಕ್ ಬಿಗ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿರುವ ಶಿವಣ್ಣ ಈಗ ತಮಿಳು ಚಿತ್ರರಂಗಲ್ಲೂ ಮಿಂಚಲು ಸಜ್ಜಾಗಿದ್ದಾರೆ. ನಟ ಯೋಗಿ ಬಾಬು ಜೊತೆ ಸಿನಿಮಾವೊಂದರಲ್ಲಿ ಮಿಂಚಲಿದ್ದಾರೆ. ಈಗಾಗಲೆ ತಲೈವ ರಜನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನರಸಿಂಹ ಪಾತ್ರದಲ್ಲಿ ಅಬ್ಬರಿಸಿದ್ದು, ಶಿವಣ್ಣ ಪರ್ಫಾರ್ಮೆನ್ಸ್‌ಗೆ ಟಾಲಿವುಡ್ ಮಂದಿ ಫಿದಾ ಆಗಿದ್ದಾರೆ.
ಶಿವಣ್ಣ ವೈರಲ್ ಹೇಳಿಕೆ:
ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣ ತಮಿಳು ಭಾಷೆ ಬಗ್ಗೆ ಮಾತನಾಡಿರುವುದು ಹೊಸ ಸಂಚಲನ ಸೃಷ್ಟಿ ಮಾಡಿದೆ. ಕೈರಂ ವಾಶಿ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡುವಾಗ 'ನಾವು ಯಾಕೆ ತಮಿಳಿನಲ್ಲಿ ಮಾತನಾಡುವುದಕ್ಕೆ ಭಯ ಪಡಬೇಕು?' ಎಂದು ಶಿವಣ್ಣ ಹೇಳಿದ್ದಾರೆ. ನಾಟಕ ಎಲ್ಲಾ ಮಾಡೋಕೆ ಸಾಧ್ಯವಿಲ್ಲ ಹೆದರಿಕೊಂಡು ಬದುಕುವುದಕ್ಕೆ ಆಗುವುದಿಲ್ಲ ಅಂದಿದ್ದಾರೆ. ನಾನು ಚಿಕ್ಕಂದಿನಿಂದಲೂ ಇರುವುದೇ ಹೀಗೆ. ಹೆದರಬೇಕು ಆದರೆ ಒಳ್ಳೆಯದಕ್ಕೆ ಹೆದರಬೇಕು, ಬೇಡದ ವಿಚಾರಗಳಿಗೆ ನಾವು ಯಾಕೆ ಹೆದರಬೇಕು' ಎಂದು ಶಿವಣ್ಣ ಹೇಳಿದ್ದಾರೆ.
ಹೊಸ ಅಧ್ಯಾಯ ಆರಂಭ; ತಾಯಿಯಾಗುತ್ತಿರುವ ಸಂಭ್ರಮದಲ್ಲಿ ತಬಲಾ ನಾಣಿ ಪುತ್ರಿ!
ನಾವು ಬೇರೆ ದೇಶದಲ್ಲಿ ಇಲ್ಲ ನಾವು ಭಾರತದಲ್ಲಿ ಇದ್ದೀವಿ. ಭಾರತ ನಮ್ಮದು ಎಲ್ಲಾ ರಾಜ್ಯಗಳು ನಮ್ಮದು. ಏನೇ ಸಮಸ್ಯೆ ಇದ್ದರೂ ನಮ್ಮ ನಡುವೆ ಇರುತ್ತದೆ. ಭಾಷೆ ಅಥವಾ ಮತಗಳ ಕಾರಣಕ್ಕೆ ಯಾಕೆ ಕಿತ್ತಾಡಬೇಕು? ತಪ್ಪಲ್ಲವೇ? ನಾವು ಮನುಷ್ಯರು ಅವರು ಮನುಷ್ಯರು. ಒಬ್ಬ ಮನುಷ್ಯನಿಗೆ ಬಲೆ ಕೊಡಬೇಕು. ಈ ಭಾಷೆ ಮಾತನಾಡಬಾರದು ಆ ಭಾಷೆ ಮಾತನಾಡಬಾರದು ಎಂದರೆ ಯಾವ ನ್ಯಾಯ? ಆ ಭಾಷೆ ಏನು ಮಾಡಿತ್ತು ಪಾಪ? ತಮಿಳು ಮಾತನಾಡುವುದೇ ತಪ್ಪಾ? ಎಂದಿದ್ದಾರೆ ಶಿವಣ್ಣ.
ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಶ್ರೀಮುರಳಿ 'ಬಘೀರ' ಸಿನಿಮಾ; ವಾರ ಕಳೆಯುತ್ತಿದ್ದಂತೆ ಇಳಿಕೆ
ಅಣ್ಣಾವ್ರ ಮಕ್ಕಳೆಲ್ಲಾ ಹುಟ್ಟಿದ್ದು ತಮಿಳುನಾಡಿನಲ್ಲಿ. ನಮಗೆ ಹುಟ್ಟಲು ಜಾಗ ಕೊಡ್ತು ಓದೋಕೆ ವಿದ್ಯೆ ಕೊಡ್ತು ಚಿತ್ರರಂಗ ಅನ್ನ ಕೊಟ್ಟಿದೆ ಎಲ್ಲಾ ಮರೆತುನಾನು ಅದು ಕೆಟ್ಟ ಜಾಗ ಎನ್ನುವುದಕ್ಕೆ ಸಾಧವ್ಯೇ? ಅದು ಎಷ್ಟು ನ್ಯಾಯ? ಹೆದರುತ್ತಲೇ ಇದ್ದರೆ ಬದುಕಲು ಅಗಲ್ಲ ಸತ್ಯ ಏನೇ ಇದ್ದರೂ ಅದನ್ನು ಒಪ್ಪಿಕೊಂಡು ಮುಂದೆ ಸಾಗುವವನೇ ಮನುಷ್ಯ ಎಂದು ಶಿವಣ್ಣ ಮಾತನಾಡಿದ್ದಾರೆ.