ಶಿವರಾಜ್‌ ಕುಮಾರ್ ಹೃದಯ ವಿದ್ರಾವಕ ಸೇಡಿನ ಸಿನಿಮಾ; ಫೆಬ್ರವರಿ 10ರಿಂದ ZEE5 ಗ್ಲೋಬಲ್‌ನಲ್ಲಿ ಸ್ಟ್ರೀಮಿಂಗ್

ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಫೆಬ್ರವರಿ 10ರಿಂದ ZEE5 ಗ್ಲೋಬಲ್‌ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ.

shivaraj kumar starrer vedha movie streeming on february 10th in Zee5 global sgk

ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಫೆಬ್ರವರಿ 10ರಿಂದ ZEE5 ಗ್ಲೋಬಲ್‌ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ.  ನಟ, ನಿರ್ಮಾಪಕ ಮತ್ತು ಟಿವಿ ನಿರೂಪಕ ಶಿವರಾಜ್‌ ಕುಮಾರ್ ಸೇಡು ತೀರಿಸಿಕೊಳ್ಳುವ ಪ್ರಮುಖ ಪಾತ್ರದಲ್ಲಿ ನಟಿಸಿರುವು ಸಿನಿಮಾವಿದು. ಇದು ಅವರ ನಟನೆ ವೃತ್ತಿ ಜೀವನದ 125 ನೇ ಸಿನಿಮಾವಾಗಿದೆ. ಕಳೆದ ವರ್ಷ ಡಿಸೆಂಬರ್ ಮಧ್ಯದಲ್ಲಿ ಜೀ ಸ್ಟುಡಿಯೋಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಧಿಕೃತ ಟ್ರೈಲರ್ ಅನ್ನು  ರಿಲೀಸ್ ಮಾಡಲಾಯಿತು. ಬಳಿಕ ಈ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಡಿಸೆಂಬರ್ 23 ರಂದು ವೇದಾ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿತು. ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಚಿತ್ರದಲ್ಲಿ ನಟ ಶಿವ ರಾಜ್‌ಕುಮಾರ್ ಮತ್ತು ಗಾನವಿ ಲಕ್ಷ್ಮಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ರೆ, ಉಮಾಶ್ರೀ, ಅದಿತಿ ಸಾಗರ್, ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ಪೋಷಕ ಪಾತ್ರಗಳಲ್ಲಿದ್ದಾರೆ. ಇದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಲಭ್ಯವಿರುತ್ತದೆ.

ಸಿನಿಮಾದ ನಿರೂಪಣೆ ಹಿಂಸೆ ಮತ್ತು ಪ್ರತೀಕಾರವನ್ನು ಒಂದು ಶಕ್ತಿಯುತ ಪ್ಯಾಕೇಜ್‌ನೊಂದಿಗೆ ಸಂಯೋಜಿಸಲಾಗಿದೆ. ದಯೆ ಜೊತೆಗೆ ಶಕ್ತಿಯುತ ಮತ್ತು ನಿಷ್ಠುರ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಮುಖ್ಯ ಪಾತ್ರಗಳಾದ ವೇದ ಮತ್ತು ಕನಕ ಪ್ರಕಾರ, ಮಹಿಳೆಯರನ್ನು ಲೈಂಗಿಕವಾಗಿ ನಿಂದಿಸುವವರಿಗೆ ಮರಣದಂಡನೆ ವಿಧಿಸಬೇಕು. ಈ ಆಕ್ಷನ್ ಡ್ರಾಮಾವನ್ನು ಹರ್ಷ ನಿರ್ದೇಶನ ಮಾಡಿದ್ದಾರೆ. ಗೀತಾ ಶಿವರಾಜಕುಮಾರ್, ಜೀ ಸ್ಟುಡಿಯೋಸ್ ಸಹಯೋಗದೊಂದಿಗೆ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಕಥಾವಸ್ತು

ಈ ಸಿನಿಮಾ ಲೈಂಗಿಕ ಕಿರುಕುಳದ ಸೂಕ್ಷ್ಮ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಇದು ತನ್ನ ಮಗಳು ಕನಕ (ಅದಿತಿ ಸಾಗರ್)ಳಿಗೆ ಹಿಂಸೆ ನೀಡಿದ ಮತ್ತು ಅವನ ಹೆಂಡತಿ ಪುಷ್ಪಾ (ಗಾನವಿ ಲಕ್ಷ್ಮಣ್)ಳನ್ನು ಕೊಂದ ಪ್ರತಿಯೊಬ್ಬರ ಮೇಲೂ ಸೇಡು ತೀರಿಸಿಕೊಳ್ಳುವ ವ್ಯಕ್ತಿಯ ಕಥೆಯಾಗಿದೆ. ನೀಲಾ ತನ್ನ ಅಜ್ಜಿ ರಮಾ , ನಿವೃತ್ತ ಇನ್ಸ್‌ಪೆಕ್ಟರ್‌(ವೀಣಾ ಪೊನ್ನಪ್ಪ)ಗೆ ಬಸ್‌ನಲ್ಲಿ ನೀಡಿದ ಕಿರುಕುಳದ ಬಗ್ಗೆ ಹೇಳುತ್ತಾಳೆ. ಒಮ್ಮೆ ಕೊಲೆಗೈದ ತಂದೆ ಮತ್ತು ಮಗಳ ಬಗ್ಗೆ ಪುಸ್ತಕವನ್ನು ಓದುವಂತೆ ರಮಾ ಅವಳಿಗೆ ಸಲಹೆ ನೀಡುತ್ತಾಳೆ. ನೀಲಾ ತಾನು ಎದುರಿಸಿದ ಕಿರುಕುಳದ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತಾಳೆ ಹಾಗೂ ವೇದ ಮತ್ತು ಕನಕನಿಗೆ ಏನಾಯಿತು ಎಂಬುದರ ಸುತ್ತ ಈ ಕಥೆ ಸುತ್ತುತ್ತದೆ.

ತಾರಾಬಳಗ 

* ಶಿವರಾಜ್ ಕುಮಾರ್ 
* ಭಾರತ್ ಸಾಗರ್ (ರುದ್ರ)
* ಗಾನವಿ ಲಕ್ಷ್ಮಣ್ (ಪುಷ್ಪಾ)
* ಶ್ವೇತಾ ಚಂಗಪ್ಪ (ಪಾರಿ, ಲೈಂಗಿಕ ಕಾರ್ಯಕರ್ತೆ)
* ಉಮಾಶ್ರೀ (ಶಕ್ರಿ)
* ಅದಿತಿ ಸಾಗರ್ (ಕನಕ)
* ವೀಣಾ ಪೊನ್ನಪ್ಪ (ಇನ್ಸ್ಪೆಕ್ಟರ್ ರಮಾ) 
* ರಘು ಶಿವಮೊಗ್ಗ (ದಯಾ) 
* ಲಾಸ್ಯಾ ನಾಗರಾಜ್ 
* ಜಗ್ಗಪ್ಪ ( ಚಿನ್ನಯ್ಯ) 
* ಚೆಲುವರಾಜ್ ( ಬೀರ)
* ಪ್ರಸನ್ನ (ನಂಜಪ್ಪ)
* ವಿನಜ್ ಬಿಡ್ಡಪ್ಪ (ಗಿರಿ)
* ಸಂಜೀವ್ 
* ಕುರಿ ಪ್ರತಾಪ್ (ಬಸ್ ಕಂಡಕ್ಟರ್)

ಬಿಡುಗಡೆ ದಿನಾಂಕ 

ಮಕ್ಕಳ ದುರುಪಯೋಗದ ಬಗ್ಗೆ ವೇದ ತಿಳಿಸುತ್ತದೆ. ಇದು ಮಹಿಳೆಯರು ಅನುಭವಿಸುತ್ತಿರುವ ದೈನಂದಿನ ಕಿರುಕುಳದ ಸಮಸ್ಯೆಯನ್ನು ವಾಣಿಜ್ಯ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆ. 

ಈ ಸಿನಿಮಾದ ಸ್ಟ್ರೀಮಿಂಗ್ ಹಕ್ಕುಗಳನ್ನು ZEE5 ಪಡೆದುಕೊಂಡಿರುವುದರಿಂದ, ಇದು ಫೆಬ್ರವರಿ 10, 2023 ರಿಂದ ZEE5 ಗ್ಲೋಬಲ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನೀವು ಈ ಸಿನಿಮಾದ ಟ್ರೈಲರ್ ಅನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬಹುದು.

Latest Videos
Follow Us:
Download App:
  • android
  • ios