ರವಿಚಂದ್ರನ್ ನಟನೆಯ ಕನ್ನಡಿಗ ಚಿತ್ರದಲ್ಲಿ ಶಿವಣ್ಣ ಹಾಡು ಟೈಟಲ್ ಹಾಡನ್ನು ಶಿವರಾಜ್ ಕುಮಾರ್ ಹಾಡಿದ್ದಾರೆ

ಜಟ್ಟ ಗಿರಿರಾಜ್ ನಿರ್ದೇಶಿಸಿ, ರವಿಚಂದ್ರನ್ ಅಭಿನಯಿಸಿರುವ ‘ಕನ್ನಡಿಗ’ ಚಿತ್ರದ ಟೈಟಲ್ ಹಾಡನ್ನು ಶಿವರಾಜ್ ಕುಮಾರ್ ಹಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಜಾನಪದ ಶೈಲಿಯ ಗೀತೆಗೆ ಶಿವಣ್ಣ ಧ್ವನಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿವಣ್ಣ ಹಾಗೂ ಕ್ರೇಜಿಸ್ಟಾರ್ ‘ಕೋದಂಡರಾಮ’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಈಗ ಹಾಡಿನ ಮೂಲಕ ಇಬ್ಬರು ಜತೆಯಾಗಿದ್ದಾರೆ. ಎನ್‌ಎಸ್ ರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಶಂಕರ್‌ನಾಗ್ ಜೊತೆ ರೊಮ್ಯಾಂಟಿಕ್ ಸೀನ್: ಬಾಲಿವುಡ್ ನಟಿ ಹೇಳಿದ್ದಿಷ್ಟು

ರವಿಚಂದ್ರನ್ ಈ ಹಿಂದೆ ಈ ರೀತಿಯ ಪಾತ್ರವನ್ನು ನಿರ್ವಹಿಸಿಲ್ಲ ಎಂದು ಹೇಳಿದ್ದಾರೆ. "ಇದು ನನಗೆ ಹೊಸದು ಮತ್ತು ನಾನು ಈ ಮೊದಲು ಈ ರೀತಿಯ ಚಿತ್ರದಲ್ಲಿ ನಟಿಸಿಲ್ಲ. ಇದು ನನಗೆ ಹೊಸತನ. ಗಿರಿರಾಜ್ ನಿರೂಪಿಸಿದ ಕಥೆ ನನಗೆ ಇಷ್ಟವಾಯಿತು" ಎಂದು ಅವರು ರವಿಚಂದ್ರನ್ ಹೇಳಿದ್ದರು.