ಶಿವರಾಜ್‌ ಕುಮಾರ್‍ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರು ಚಿನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡು ಜನರಿಗೆ ಕನ್‌ಫ್ಯೂಸ್‌ ಮಾಡ್ತಿದ್ದಾರೆ ಎನ್ನುವ ಹಾಸ್ಯದ ಪ್ರಶ್ನೆಗೆ ನಟ ಹೇಳಿದ್ದೇನು? 

ನಟ ಶಿವರಾಜ್‌ಕುಮಾರ್‌ ಅವರ ನಟನೆಯ ‘ಭೈರತಿ ರಣಗಲ್‌’ ನಾಳೆ ಅಂದ್ರೆ ನವೆಂಬರ್‌ 16ರಂದು ಬಿಡುಗಡೆಯಾಗಲಿದೆ. ಮಫ್ತಿ ಚಿತ್ರದ ನಂತರದ ಭೈರತಿ ರಣಗಲ್ ಚಿತ್ರದ ಮೇಲೆ ಬಹು ನಿರೀಕ್ಷೆ ಹೊಂದಿರುವ ಅವರು, ಈ ಚಿತ್ರದ ಮೂಲಕ ತಮ್ಮ 127 ಚಿತ್ರಗಳ ಮೈಲಿಗಲ್ಲನ್ನು ತಲುಪುತ್ತಿದ್ದಾರೆ. ಭೈರತಿ ರಣಗಲ್ ಚಿತ್ರವನ್ನ ನರ್ತನ್ ನಿರ್ದೇಶಿಸಿದ್ದಾರೆ. ಇದು ಶಿವರಾಜ್‌ ಅವರ ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರ ಎನ್ನಲಾಗಿದೆ. ಭೈರತಿ ರಣಗಲ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ಇದ್ದಾರೆ. ಅಮೃತಧಾರೆ ಖ್ಯಾತಿಯ ಭೂಮಿಕಾ ಅಂದರೆ ಛಾಯಾ ಸಿಂಗ್ ಕೂಡ ನಟಿಸಿದ್ದಾರೆ.

ಇದರ ನಡುವೆಯೇ, ಶಿವರಾಜ್‌ ಕುಮಾರ್‌ ಅವರು ಜಾಹೀರಾತು, ರಿಯಾಲಿಟಿ ಷೋಗಳಲ್ಲಿಯೂ ಬ್ಯುಜಿ ಆಗಿದ್ದಾರೆ. ಇದಾಗಲೇ ಕೆಲವು ಜಾಹೀರಾತುಗಳಿಗೆ ಶಿವಣ್ಣ ರಾಯಭಾರಿಯಾಗಿದ್ದರೆ, ಡಾನ್ಸ್‌ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿದ್ದಾರೆ. ಇವರ ಬಹುಮುಖ್ಯವಾಗಿರುವ ಜಾಹೀರಾತು ಎಂದರೆ, ಕಲ್ಯಾಣ್‌ ಜ್ಯುವೆಲ್ಲರ್ಸ್. ವಿಶೇಷ ಎಂದರೆ ಪುನೀತ್‌ ರಾಜ್‌ಕುಮಾರ್‌ ಅವರು ಕೂಡ ಚಿನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅವರು ಮಣಿಪ್ಪುರಂ ಗೋಲ್ಡ್‌ ಲೋನ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಇದೇ ವಿಷಯವಾಗಿ ಶಿವರಾಜ್‌ ಕುಮಾರ್‌ ಅವರಿಗೆ ತಮಾಷೆಯ ಪ್ರಶ್ನೆ ಕೇಳಲಾಗಿದೆ. 

ನಾನೊಬ್ಬ ದೊಡ್ಡ ಕುಡುಕ ಎನ್ನುತ್ತಲೇ ಡ್ರಿಂಕ್ಸ್‌ ಮಿಕ್ಸಿಂಗ್‌ ಬಗ್ಗೆ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌: ವಿಡಿಯೋ ವೈರಲ್‌!

ಕೀರ್ತಿ ನಾರಾಯಣ ಅವರ ಷೋನಲ್ಲಿ ಆಗಮಿಸಿದ್ದ ಶಿವರಾಜ್‌ ಕುಮಾರ್‌ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿರುವ ಕೀರ್ತಿ ಅವರು, ಚಿನ್ನದ ವಿಷ್ಯದಲ್ಲಿ ಶಿವರಾಜ್‌ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಕನ್‌ಫ್ಯೂಸ್‌ ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಕೀರ್ತಿ ಅವರು, ನಮಗೆ ಇಡೀ ದೊಡ್ಮನೆನೇ ಇಷ್ಟ. ವಿಶೇಷವಾಗಿ ಪುನೀತ್‌ ರಾಜ್‌ಕುಮಾರ್‌ ಅವರೂ ಇಷ್ಟ, ನೀವೂ ಇಷ್ಟ. ಆದರೆ ಇಬ್ಬರೂ ಸೇರಿ ಜನಕ್ಕೆ ಕನ್‌ಫ್ಯೂಸ್‌ ಮಾಡುತ್ತಿದ್ದೀರಿ ಎಂದು ಕೀರ್ತಿ ಅವರು ಶಿವರಾಜ್‌ ಕುಮಾರ್‌ ಅವರಿಗೆ ಕೇಳಿದಾಗ, ಅರೆ ಕ್ಷಣ ಶಿವಣ್ಣ ಅವ್ರೇ ಕನ್‌ಫ್ಯೂಸ್‌ ಆದ್ರು. ಆಗ ಮಾತನಾಡಿದ ಕೀರ್ತಿ ಅವರು, ನೀವು ಗೋಲ್ಡ್‌ ತಗೋಳಿ ಅಂತೀರಿ, ಅಪ್ಪು ಗೋಲ್ಡ್‌ ಅಡ ಇಡಿ ಅಂತಾರೆ. ನಾವು ಏನ್‌ ಮಾಡ್ಬೇಕು ಅಂತ ತರ್ಲೆ ಪ್ರಶ್ನೆ ಕೇಳಿದರು. ಅಷ್ಟೇ ಹಾಸ್ಯದ ರೂಪದಲ್ಲಿ ಶಿವರಾಜ್‌ಕುಮಾರ್‌ ಕೊಟ್ಟ ಉತ್ತರ ಏನೆಂದರೆ, ಕಷ್ಟ-ಸುಖ ಎರಡೂ ಬೇಕು. ನಮ್ಮ ಫ್ಯಾಮಿಲಿ ಕಷ್ಟಕ್ಕೂ ಆಗತ್ತೆ, ಸುಖಕ್ಕೂ ಆಗತ್ತೆ ಎನ್ನುವ ಮೂಲಕ ತಾವು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಮಜಾಯಿಷಿಯನ್ನು ಅಷ್ಟೇ ಬುದ್ಧಿವಂತಿಕೆಯಿಂದ ಕೊಟ್ಟರು. 

 ಶಿವರಾಜ್‌ಕುಮಾರ್‌ ಅವರು ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಕನ್‌ಫರ್ಮ್ ಮಾಡಿರುವ ಶಿವರಾಜ್‌ ಕುಮಾರ್‌ ಅವರು, ನನಗೆ ಅನಾರೋಗ್ಯ ಸಮಸ್ಯೆ ಇರುವಂಥದ್ದು ಮುಚ್ಚಿಡುವ ವಿಷಯ ಏನೂ ಅಲ್ಲ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಹಲವು ಹಂತಗಳಲ್ಲಿ ಚಿಕಿತ್ಸೆ ನಡೆಯಲಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಪುಟ್ಟಕ್ಕನ ಮಗಳು ಸ್ನೇಹಾಳನ್ನು ಚಿತೆಗೇರಿಸೋ ಮುನ್ನ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು? ವಿಡಿಯೋ ವೈರಲ್

View post on Instagram