ರೈಲ್ವೆ ಮಾಸ್ಟರ್ ಪಾತ್ರದಲ್ಲಿ ಶಿವಣ್ಣ: ಯಾವ ಸಿನಿಮಾದ ಲುಕ್ ಇದು?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಲುಕ್ ವೈರಲ್ ಆಗಿದೆ. ರೈಲ್ವೆ ಮಿನಿಸ್ಟರ್ ಪಾತ್ರದಲ್ಲಿ ಶಿವಣ್ಣಕಾಣಿಸಿಕೊಂಡಿದ್ದು ಯಾವ ಸಿನಿಮಾದ ಪಾತ್ರ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸಂಚುರಿ ಸ್ಟಾರ್ ವಿವಿಧ ರೀತಿಯ ಪಾತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆಸಿದ್ದಾರೆ. ರೌಡಿಯಾಗಿ, ರೈತನಾಗಿ, ಸಾಮಾನ್ಯ ಮನುಷ್ಯನಾಗಿ, ಫ್ಯಾಮಿಲಿ ಮ್ಯಾನ್ ಆಗಿ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಎಲ್ಲಾ ರೀತಿಯ ಪಾತ್ರಗಳಿಗೂ ಹೊಂದಿಕೊಳ್ಳುವ ದೇಹ ಶಿವಣ್ಣ ಅವರದ್ದು. ಇದೀಗ ಶಿವಣ್ಣ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಶಿವಣ್ಣ ರೈಲ್ವೆ ಮಾಸ್ಟರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಶಿವಣ್ಣ ಅವರ ರೈಲ್ವೆ ಮಾಸ್ಟರ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇದು ಯಾವ ಸಿನಿಮಾಗೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಶಿವಣ್ಣ ರೈಲ್ವೆ ಮಾಸ್ಟರ್ ಆಗಿದ್ದು ಕ್ಯಾಪ್ಟನ್ ಮಿಲ್ಲರ್ ಗಾಗಿ. ಹೌದು ತಮಿಳಿನಲ್ಲಿ ಶಿವಣ್ಣ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ರೈಲ್ವೆ ಮಾಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರೈಲ್ವೆ ಸ್ಟೇಷನ್ನಲ್ಲಿ ರೈಲ್ವೆ ಮಾಸ್ಟರ್ ಸಮವಸ್ತ್ರ ಧರಿಸಿ ಕುರ್ಚಿಯ ಮೇಲೆ ಕುಳಿತು ಇಂಗ್ಲೀಷ್ ಪೇಪರ್ ಓದುತ್ತಿರುವ ಶಿವಣ್ಣನ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಜೊತೆಗೆ ಪೈಲೆಟ್ ಸಮವಸ್ತ್ರ ಧರಿಸಿರುವ ಶಿವಣ್ಣನ ಚಿತ್ರಗಳೂ ಸಹ ವೈರಲ್ ಆಗಿವೆ. ಅಂದಹಾಗೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ ಧನುಷ್ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅತಿ ಹೆಚ್ಚು ಸಂಭಾವನೆ ಪಡೆವ ಟಾಪ್ 10 ಕನ್ನಡದ ನಟರಾರು? ಅವರು ಪಡೆಯುವುದೆಷ್ಟು?
ಶಿವಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲದೆ ಆಗಾಗ್ಗೆ ನೆರೆ ಚಿತ್ರರಂಗದ ಗೆಳೆಯರ ಆಹ್ವಾನದ ಮೇರೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಹೋಗಿ ನಟಿಸಿ ಬರುತ್ತಿದ್ದಾರೆ. ‘ಜೈಲರ್’, ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗಳ ಬಳಿಕ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಅವರೊಟ್ಟಿಗೆ ಇನ್ನೊಂದು ಸಿನಿಮಾದಲ್ಲಿ ಶಿವಣ್ಣ ನಟಿಸುವ ಸಾಧ್ಯತೆ ಇದೆ.
ಲೆಕ್ಕಾಚಾರ ಬಿಟ್ಟು ಬೇರೆ ವಿಷಯ ಮಾತನಾಡಿ ಬಗೆಹರಿಸುತ್ತೇವೆ: ಸುದೀಪ್-ಕುಮಾರ್ ಮನಸ್ಥಾಪಕ್ಕೆ ಶಿವಣ್ಣ ಎಂಟ್ರಿ!
ಕನ್ನಡದಲ್ಲಿಯಂತೂ ಶಿವರಾಜ್ ಕುಮಾರ್ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರೇ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ಹೇಳಿದಂತೆ ಸುಮಾರು 10-12 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ. ಯಾವ ತಂಡ ಮೊದಲು ಚಿತ್ರೀಕರಣಕ್ಕೆ ರೆಡಿಯಾಗುತ್ತದೆಯೋ ಅವರೊಟ್ಟಿಗೆ ಸಿನಿಮಾ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ ‘ಘೋಸ್ಟ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ‘ಘೋಸ್ಟ್’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ವೈರಲ್ ಆಗಿದೆ.