Asianet Suvarna News Asianet Suvarna News

Kabza; ಅದ್ದೂರಿಯಾಗಿ ಬರ್ತಿದೆ ರಿಯಲ್ ಸ್ಟಾರ್ 'ಕಬ್ಜ', ಶಿವಣ್ಣ ಜೊತೆ ಇರ್ತಾರೆ ಮತ್ತೋರ್ವ ಸ್ಪೆಷಲ್ ಗೆಸ್ಟ್

ಬಹುನಿರೀಕ್ಷೆಯ ಈ ಚಿತ್ರದ ಟೀಸರ್​ ರಿಲೀಸ್​ ಕಾರ್ಯಕ್ರಮ ಇಂದು (ಸೆಪ್ಟಂಬರ್ 17) ನಡೆಯುತ್ತಿದೆ. ಅದ್ದೂರಿಯಾಗಿ ನಡೆಯುತ್ತಿರುವ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಭಾಗಿಯಾಗುತ್ತಿದ್ದಾರೆ. 

Shivaraj kumar and rana daggubati special guest in upendra's kabza teaser release event sgk
Author
First Published Sep 17, 2022, 11:51 AM IST

ಕನ್ನಡ ಸಿನಿಮಾರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸ್ಯಾಂಡಲ್ ವುಡ್  ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇಡೀ ಭಾರತೀಯ ಸಿನಿಮಾರಂಗವೇ ತಿರುಗಿ ನೊಡುವಂತ ಪ್ರಯತ್ನಗಳು ಸ್ಯಾಂಡಲ್ ವುಡ್‌ನಲ್ಲಿ ನಡೆಯುತ್ತಿವೆ. ಈಗಾಗಲೇ ಅನೇಕ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿದೆ. ಇದೀಗ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದೇ ರಿಯಾಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ. ಆರ್​. ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಅನೇಕ ಪೋಸ್ಟರ್​ಗಳು ಗಮನ ಸೆಳೆದಿದ್ದು ಈಗ ಸಿನಿಮಾದ ಟೀಸರ್​ ನೋಡುವ ಸಮಯ ಬಂದಿದೆ. ಅನೇಕ ವರ್ಷದಿಂದ ಕಾಯುತ್ತಿದ್ದ ಸಮಯ ಈಗ ಬಂದಿದೆ ಎಂದು ರಿಯಲ್ ಸ್ಟಾರ್ ಅಭಿಮಾನಿಗಳು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಅಂದಹಾಗೆ ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಕೂಡ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್​ ಅಭಿನಯಿಸುತ್ತಿದ್ದಾರೆ. 
 
ಅಂದಹಾಗೆ ಬಹುನಿರೀಕ್ಷೆಯ ಈ ಚಿತ್ರದ ಟೀಸರ್​ ರಿಲೀಸ್​ ಕಾರ್ಯಕ್ರಮ ಇಂದು (ಸೆಪ್ಟಂಬರ್ 17) ನಡೆಯುತ್ತಿದೆ. ಅದ್ದೂರಿಯಾಗಿ ನಡೆಯುತ್ತಿರುವ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಭಾಗಿಯಾಗುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ರೆ ಇನ್ನು ಪಕ್ಕದ ಟಾಲಿವುಡ್‌ನಿಂದ ರಾಣಾ ದಗ್ಗುಬಾಟಿ ಬರ್ತಿದ್ದಾರೆ. ಇಂದು ಸಂಜೆ  ಬೆಂಗಳೂರಿನ ಓರಾಯನ್​ ಮಾಲ್​ನಲ್ಲಿ ಟೀಸರ್​ ರಿಲೀಸ್​ ಕಾರ್ಯಕ್ರಮ ನಡೆಯಲಿದೆ. 5 ಭಾಷೆಗಳಲ್ಲಿ ಟೀಸರ್​ ಬಿಡುಗಡೆ ಆಗುತ್ತಿರುವುದರಿಂದ ಹೊರರಾಜ್ಯಗಳಿಂದಲೂ ಪತ್ರಕರ್ತರು ಆಗಮಿಸಲಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಲಿದ್ದಾರೆ. ಟೀಸರ್​ ಹೇಗಿರಲಿದೆ ನೋಡಲು ಅಭಿಮಾನಿಗಳು ಈಗಾಗಲೇ ಕಾತರರಾಗಿದ್ದಾರೆ. 

Shivaraj kumar and rana daggubati special guest in upendra's kabza teaser release event sgk

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಬಂಪರ್ ಬಹುಮಾನ ಗೆಲ್ಲಿ

ಅಂದಹಾಗೆ ಸೆಪ್ಟಂಬರ್ 18 ರಿಯಲ್ ಸ್ಟಾರ ಉಪೇಂದ್ರ ಅವರ ಹುಟ್ಟುಹಬ್ಬ. ಜನ್ಮದಿನದ ಒಂದು ದಿನಕ್ಕೂ ಮೊದಲೇ ಬಹುನಿರೀಕ್ಷೆಯ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ಮಾಡಲಾಗುತ್ತಿದೆ. ಅಲ್ಲದೆ ಸುಮಾರು 3 ವರ್ಷಗಳಿಂದ ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಪೋಸ್ಟರ್ ಗಳು ಬಿಟ್ಟರೆ ಸಿನಿಮಾದಿಂದ ಬೇರೆ ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಮೊದಲ ಹಂತವಾಗಿ ಟೀಸರ್ ಬಡುಗಡೆ ಮಾಡುತ್ತಿದೆ ಸಿನಿಮಾತಂಡ. ರೆಟ್ರೋ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಪೋಸ್ಟರ್ ಗಳು ಈಗಾಗಲೇ ವೈರಲ್ ಆಗಿವೆ.   

ಹೊಸ ಲುಕ್‌ಲ್ಲಿ ಕಾಣಿಸಿಕೊಂಡ ಸುದೀಪ್; ಯಾವ ಸಿನಿಮಾಗೆ? ಇಲ್ಲಿದೆ ಮಾಹಿತಿ

ಕಬ್ಜ ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ. ಉಪೇಂದ್ರ ಮತ್ತು ಕಿಚ್ಚ ಸುದೀಪ್​ ಈಗಾಲೆ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗಾಗಲೇ ಮೇಕಿಂಗ್ ಮೂಲಕ ಸದ್ದು ಮಾಡುತ್ತಿದ್ದ ಕಬ್ಜ ಟೀಸರ್ ಹೇಗಿರಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

 

Follow Us:
Download App:
  • android
  • ios