ನನ್ನ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ, ಅಮೆರಿಕಾದಲ್ಲಿ ಸರ್ಜರಿ ಆಗಲಿದೆ: ಶಿವರಾಜ್‌ಕುಮಾರ್
'ಭೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿಸಿರುವ ಶಿವಣ್ಣ ಅವರು ಬೇರೆ ಎಲ್ಲ ಸಿನಿಮಾಗಳ ಡೇಟ್ಸ್ ಅನ್ನು ಸದ್ಯ ಕ್ಯಾನ್ಸಲ್ ಮಾಡಿಸಿದ್ದಾರೆ. ಕಾರಣ, ಅಮೆರಿಕಾದಲ್ಲಿ ಜನವರಿ ಎಂಡ್ ವರೆಗೆ ಇರಬೇಕಾಗಬಹುದು! ನಟ ಶಿವಣ್ಣ ಬೇಗ ಹುಶಾರಾಗಿ ಬರಲಿ ಎಂಬುದು ಕರುನಾಡು ಸೇರಿದಂತೆ..
ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shiva Rajkumar) ಗಂಭೀರ ಖಾಯಿಲೆಗೆ ತುತ್ತಾಗಿದ್ದಾರೆ. ಚಿಕಿತ್ಸೆಗಾಗಿ ಸದ್ಯದಲ್ಲೇ ಶಿವಣ್ಣ ಅಮೆರಿಕಾಗೆ ತೆರಳಲಿದ್ದು, ನಾಲ್ಕು ಸೆಷನ್ ಟ್ರೀಟ್‌ಮೆಂಟ್ ಬಳಿಕ 2025ರ ಜನವರಿಯಲ್ಲಿ ನಟ ಶಿವರಾಜ್‌ಕುಮಾರ್ ಅವರಿಗೆ ಅಮೆರಿಕಾದಲ್ಲಿ ಸರ್ಜರಿ ಆಗಲಿದೆ. ಹೀಗಾಗಿ ಶಿವಣ್ಣ ಅವರು ಸದ್ಯ ಎಲ್ಲ ಸಿನಿಮಾಗಳ ಶೂಟಿಂಗ್ ಪೋಸ್ಟ್‌ಪೋನ್ ಮಾಡಿದ್ದಾರೆ.
'ಭೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿಸಿರುವ ಶಿವಣ್ಣ ಅವರು ಬೇರೆ ಎಲ್ಲ ಸಿನಿಮಾಗಳ ಡೇಟ್ಸ್ ಅನ್ನು ಸದ್ಯ ಕ್ಯಾನ್ಸಲ್ ಮಾಡಿಸಿದ್ದಾರೆ. ಕಾರಣ, ಅಮೆರಿಕಾದಲ್ಲಿ (America) ಜನವರಿ ಎಂಡ್ ವರೆಗೆ ಇರಬೇಕಾಗಬಹುದು! ನಟ ಶಿವಣ್ಣ ಬೇಗ ಹುಶಾರಾಗಿ ಬರಲಿ ಎಂಬುದು ಕರುನಾಡು ಸೇರಿದಂತೆ ಅವರ ಎಲ್ಲ ಅಭಿಮಾನಿಗಳ ಹಾರೈಕೆಯಾಗಿದೆ. ಇದೀಗ ಈ ಸುದ್ದಿ ಎಲ್ಲಾ ಕಡೆ ಹರಡಿದ್ದು, ಕರುನಾಡ ಚಕ್ರವರ್ತಿ ಶಿವಣ್ಣ ಶೀಘ್ರ ಗುಣಮುಖರಾಗಿ ಬರಲಿ ಎಂದು ಅಸಂಖ್ಯಾತ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಬ್ಯಾಡ್ ನ್ಯೂಸ್, ರಾಮ್‌ಚರಣ್ ಜೊತೆಗಿನ ಸಿನಿಮಾ ಮುಂದಕ್ಕೆ ಹಾಕಿದ ಶಿವರಾಜ್‌ಕುಮಾರ್!
ಈ ಕಾರಣಕ್ಕೆ, ನಟ ಶಿವಣ್ಣ ಸಿನಿಮಾ ಜರ್ನಿಯಲ್ಲಿ ಹೊಸದೊಂದು ಮೈಲಿಗಲ್ಲು ಆಗಲಿರುವುದು ಸದ್ಯಕ್ಕೆ ಮುಂದಕ್ಕೆ ಹೋಗಿದೆ. ಅದು 'ಆರ್‌ಆರ್‌ಆರ್' ಸಿನಿಮಾ (RRR) ಖ್ಯಾತಿಯ ತೆಲುಗು ನಟ ರಾಮ್‌ಚರಣ್ ಜೊತೆಗಿನ ಸಿನಿಮಾದಲ್ಲಿ ನಟನೆ. ಹೌದು, ಕನ್ನಡದ ನಟ ಶಿವರಾಜ್‌ಕುಮಾರ್ ಅವರು ತೆಲುಗು ನಟ ರಾಮ್‌ಚರಣ್ ಜೊತೆಗೂಡಿ 'RC-16' ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಸದ್ಯ ಅನಾರೋಗ್ಯದ ಕಾರಣಕ್ಕೆ ಇದನ್ನು ಮುಂದೂಡಲಾಗಿದೆ. ಟ್ರೀಟ್‌ಮೆಂಟ್ ಬಳಿಕ ಶೂಟಿಮಗ್ ಟೀಮ್ ಸೇರಿಕೊಳ್ಳಲಿದ್ದಾರಂತೆ ಶಿವಣ್ಣ.
ಈ ಬಗ್ಗೆ ಮಾತನಾಡಿರುವ ನಟ ಶಿವಣ್ಣ ಅವರು 'ನಾನು ನನ್ನ ಅನಾರೋಗ್ಯವನ್ನು ನನ್ನ ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ. ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನು ಕೂಡ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ. ಹೌದು, ನನಗೆ ಹುಶಾರಿಲ್ಲ, ಆದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಅಮೆರಿಕಾದಲ್ಲಿ ಟ್ರೀಟ್‌ಮೆಂಟ್ ಹಾಗೂ ಸರ್ಜರಿ ನಡೆಯಲಿದೆ' ಎಂದಿದ್ದಾರೆ.
ಹಾಗಿದ್ರೆ ಶಿವಣ್ಣಂಗೆ 'ಜೈ' ಅಂದೇಬಿಟ್ರು ದರ್ಶನ್ ಫ್ಯಾನ್ಸ್; ಶಿವರಾಜ್‌ಕುಮಾರ್ ಹೇಳಿದ್ದೇನು?
ಸಹಜವಾಗಿಯೇ ನಟ ಶಿವಣ್ಣರ ಅಭಿಮಾನಿಗಳು ಆತಂಕಕ್ಕೆ ಈಡಾಗುತ್ತಾರೆ. ಆದರೆ ಆ ಬಗ್ಗೆ ಸ್ವತಃ ಶಿವಣ್ಣ 'ನನ್ನ ಅನಾರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಲೂ ನಾನು ಶೂಟಿಂಗ್ ಹಾಗೂ ರಿಯಾಲಿಟಿ ಶೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಕಿತ್ಸೆಗೆ ಹೋಗಿಬಂದ ಬಳಿಕ ಮತ್ತೆ ನನ್ನ ಕೆಲಸವನ್ನು ಎಂದಿನಂತೆ ಮುಂದುವರಿಸಲಿದ್ದೇನೆ' ಎಂದಿದ್ದಾರೆ.
'ಅಭಿಮಾನಿಗಳಿಂದ ಯಾವುದನ್ನೂ ಮುಚ್ಚಿಡಬೇಕಾದ ಅಗತ್ಯ ನನಗಿಲ್ಲ' ಎಂದಿರುವ ನಟ ಶಿವಣ್ಣ ಅವರು, ಹೊರಗಡೆ ಜಗತ್ತಿಗೆ ಎಷ್ಟು ಮಾಹಿತಿ ನೀಡಬೇಕೋ ಅಷ್ಟನ್ನು ನೀಡಿದ್ದಾರೆ. ನಟ ಶಿವರಾಜ್‌ಕುಮಾರ್ ಅವರೇ ಸ್ವತಃ ಹೇಳಿದಂತೆ 'ನನ್ನ ಅನಾರೋಗ್ಯ ಹಾಗು ಕಂಡೀಷನ್ ಬಗ್ಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ಸುದೀಪ್, ಯಶ್, ರಕ್ಷಿತ್ ಸೇರಿದಂತೆ ಅನೇಕರಿಗೆ ತಿಳಿದಿದೆ. ಈ ಬಗ್ಗೆ ನನ್ನ ಎಲ್ಲ ಆಪ್ತರು ಬಹಳಷ್ಟು ಧೈರ್ಯ ಹೇಳಿದ್ದಾರೆ.
ಪ್ರಭಾಸ್ ಜೊತೆ ಭಾರೀ ಒಪ್ಪಂದ ಮಾಡಿಕೊಂಡ ಹೊಂಬಾಳೆ ಫಿಲಂಸ್; ಡಾರ್ಲಿಂಗ್ ಲಕ್ ನೋಡ್ರೀ!
ಹೌದು, ನನಗೆ ಆ ಖಾಯಿಲೆ ಬಂದುಬಿಟ್ಟಿದೆ. ಆ ಬಗ್ಗೆ ಪ್ರಾರಂಭದಲ್ಲಿ ನಾನು ಭಯಪಟ್ಟರೂ ಈಗ ಧೈರ್ಯ ತಂದುಕೊಂಡಿದ್ದೇನೆ. ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ, ಮುಂದೆಯೂ ತೆಗೆದುಕೊಳ್ಳಲಿದ್ದೇನೆ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್.