Asianet Suvarna News Asianet Suvarna News

ನನ್ನ ಬದುಕಿನ ಹೋರಾಟ ಶ್ಯಾಡೋ ಎಂದ ನಿರ್ದೇಶಕ ರವಿ ಗೌಡ

ನಾನು ಪೂರಿಜಗನ್ನಾಥ್ ಶಿಷ್ಯ: ಎಸ್‌ಎಸ್ ರವಿಗೌಡ | ಶ್ಯಾಡೋ ಚಿತ್ರದ ನಿರ್ದೇಶಕನ ಸಂದರ್ಶನ

Shadow Kannada movie director Ravi gowda Interview dpl
Author
Bangalore, First Published Feb 4, 2021, 3:28 PM IST

ನಿಮ್ಮ ಹಿನ್ನೆಲೆ ಏನು?
ಹುಟ್ಟಿದ್ದು ಹೈದರಾಬಾದ್. ಓದಿದ್ದು ಚೆನ್ನೆ‘. ತೀರಾ ಕೆಲ ಮಧ್ಯಮವರ್ಗದ ಕುಟುಂಬದಿಂದ ಬಂದಿದ್ದೇನೆ. ನಾನು ಲಾಸ್ಟ್ ಬೆಂಚ್ ಸ್ಟುಡೆಂಟ್. ಪರೀಕ್ಷೆಗಳ ಉತ್ತರ ಪತ್ರಿಕೆಗಳಲ್ಲಿ ಸಿನಿಮಾಗಳ ಕತೆಗಳನ್ನೇ ಉತ್ತರವಾಗಿ ಬರೆದು ಬೈಸಿಕೊಂಡಿದ್ದೇನೆ. ಸಿನಿಮಾ ಹೊರತಾಗಿ ಬೇರೆ ಏನೂ ಯೋಚನೆ ಇರಲಿಲ್ಲ. ಹೀಗಾಗಿ ಎಂಬಿಎ ಡ್ರಾಪ್ ಔಟ್ ಆದೆ.

ನಿರ್ದೇಶನಕ್ಕಿಳಿಯುವ ಮುನ್ನ ಏನೆಲ್ಲ ಮಾಡಿಕೊಂಡಿದ್ರಿ?

17 ವರ್ಷ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ತೆಲುಗು, ತಮಿಳು ಹಾಗೂ ಹಿಂದಿ ಜಾಹೀರಾತುಗಳ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇದೆ. ನಾನು ಪೂರಿ ಜಗನ್ನಾಥ್ ಶಿಷ್ಯ. ಅವರಿಂದಲೇ ಸಿನಿಮಾ ಪಾಠಗಳನ್ನು ಕಲಿತು ಬಂದೆ. ‘ಶ್ಯಾಡೋ’ ನನ್ನ ಮೊದಲ ನಿರ್ದೇಶನದ ಕನ್ನಡ ಸಿನಿಮಾ.

ನಿರ್ದೇಶನವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ಯಾರಾದರೂ ಕತೆ ಹೇಳುವಾಗ ತುಂಬಾ ಆಸಕ್ತಿಯಿಂದ ಕೇಳುತ್ತಿದ್ದೆ. ನಾನೂ ಕೂಡ ಯಾಕೆ ಸ್ಟೋರಿ ಹೇಳಬಾರದು ಅನಿಸಿತು. ಹೀಗೆ ಕತೆ ಹೇಳಬೇಕು ಎಂದರೆ ಅದು ನಿರ್ದೇಶನವೇ ಸೂಕ್ತ ಅಂತ ಅನಿಸಿತು. ನಿರ್ದೇಶನಕ್ಕೆ ಬಂದೆ. ಹಾಗೆ ನೋಡಿದರೆ ಪ್ರತಿಯೊಬ್ಬ ನಿರ್ದೇಶಕನಲ್ಲೂ ಒಬ್ಬ ನಟ- ನಟಿ ಇರುತ್ತಾರೆ. ಅದು ಹೊರ ಜಗತ್ತಿಗೆ ಗೊತ್ತಾಗುವುದು ಆತ ಕಲಾವಿದರ ಮುಂದೆ ನಿಂತು ನಮ್ಮ ಕತೆ ಹೇಳುವಾಗ.

ಹೌಸ್‌ಫುಲ್‌ಗೆ ಓಕೆ, ನಾಳೆ 3 ಸಿನಿಮಾಗಳು ರಿಲೀಸ್, ಇದು ಹೊಸ ಗೈಡ್‌ಲೈನ್ಸ್!

ನಿಮ್ಮ ಪ್ರಕಾರ ನಿರ್ದೇಶನ ಸ್ಥಾನ ಎಂದರೇನು?

ಡೈರೆಕ್ಟರ್ ಎನ್ನುವ ಹೆಸರು ಹಾಕಿಸಿಕೊಳ್ಳುವುದಕ್ಕೆ ಎಷ್ಟೋ ಸಲ ಸತ್ತು ಹುಟ್ಟಿದ್ದೇನೆ. ನನ್ನಂಥವರ ಪಾಲಿಗೆ ನಿರ್ದೇಶಕ ಎಂದರೆ ಮರು ಜನ್ಮ. ಮೈ ಮತ್ತು ಮನಸ್ಸು ನಮ್ಮ ಹತ್ತಿರ ಇಟ್ಟುಕೊಂಡು ಕೆಲಸ ಮಾಡಿಸುವ ಸ್ಥಾನ ಅದು. 17 ವರ್ಷಗಳ ಬದುಕಿನ ಹೋರಾಟ, ಹಸಿವು, ಅವಮಾನಗಳ ನಂತರ ದಕ್ಕಿದ ಸ್ಥಾನವಿದು. ದೇವರಿಗಿಂತ ದೊಡ್ಡದು.

ಶ್ಯಾಡೋ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದೀರಿ?

ನಾವು ಏನೂ ಹೇಳಕ್ಕೆ ಆಗಲ್ಲ. ಜನಕ್ಕೆ ಎಲ್ಲವೂ ಗೊತ್ತು. ಆದರೆ, ಯಾರೂ ಯಾವುದನ್ನೂ ಪಾಲಿಸಲ್ಲ. ಅನುಸರಿಸಲ್ಲ. ಯಾಕೆ ಅದೇ ನನ್ನ ಸಿನಿಮಾ ಕತೆ. ನನ್ನ ಗುರು ಪೂರಿ ಜಗನ್ನಾಥ್ ಹೇಳಿದ್ದು, ಸಿನಿಮಾದಲ್ಲಿ ಸಂದೇಶ ಹೇಳಲು ಹೊರಟರೆ ಸೋಲ್ತಿಯಾ ಅಂತ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಮನರಂಜನೆಯೇ ಪ್ರ‘ಾನ ಅಂತ ಈ ಸಿನಿಮಾ ಮಾಡಿದ್ದೇನೆ.

ಕನ್ನಡದ ವಿನೋದ್ ಪ್ರಭಾಕರ್ ನಿಮ್ಮ ಚಿತ್ರಕ್ಕೆ ಹೀರೋ ಆಗಿದ್ದು ಹೇಗೆ?

ಒಂದು ಕತೆ ಮಾಡಿಕೊಂಡು ಅದಕ್ಕೆ ದೈಹಿಕವಾಗಿ ಹೀಗೇ ಇರುವ ವ್ಯಕ್ತಿ ಬೇಕು ಎಂದು ಯೋಚಿಸುತ್ತಿದ್ದೆ. ಅದೇ ಸಮಯದಲ್ಲಿ ನಿರ್ಮಾಪಕರ ಜತೆ ಟ್ರಾವೆಲ್ ಮಾಡಿಕೊಂಡು ಬೆಂಗಳೂರಿಗೆ ಬಂದವನಿಗೆ ಪರಿಚಯ ಆಗಿದ್ದು ವಿನೋದ್ ಪ್ರ‘ಾಕರ್. ಅವರ ಒಂದು ೆಟೋ ನೋಡಿಯೇ ನಾನು ಇವರೇ ನನ್ನ ಚಿತ್ರಕ್ಕೆ ಹೀರೋ ಎಂದು ನಿ‘ರ್ರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಅಭಿಮಾನಿಸುವ, ತೆಲುಗು ಚಿತ್ರರಂಗಕ್ಕೂ ಗೊತ್ತಿರುವ ದೊಡ್ಡ ಹೆಸರು ಪ್ರ‘ಾಕರ್ ಅವರ ಪುತ್ರ ವಿನೋದ್ ಪ್ರ‘ಾಕರ್ ಎಂದು ಗೊತ್ತಾಗಿ ಮತ್ತಷ್ಟು ಖುಷಿ ಆಯಿತು

Follow Us:
Download App:
  • android
  • ios