ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ , ಸೆಕ್ಸ್ ,ದೋಖಾ ಬೆಳಕಿಗೆ ಬಂದಿದೆ. 'ಟೊಮ್ಯಾಟೊ'ದಲ್ಲಿ ಚಾನ್ಸ್ ಕೊಡುಸ್ತಿನಿ  ಎಂದು  75 ಲಕ್ಷ ತೆಗೆದುಕೊಂಡು ನಿರ್ಮಾಪಕ ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು (ಜೂ.14): ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ , ಸೆಕ್ಸ್ ,ದೋಖಾ ಬೆಳಕಿಗೆ ಬಂದಿದೆ. 'ಟೊಮ್ಯಾಟೊ'ದಲ್ಲಿ ಚಾನ್ಸ್ ಕೊಡುಸ್ತಿನಿ ಎಂದು 75 ಲಕ್ಷ ತೆಗೆದುಕೊಂಡು ಮಹಿಳೆಯ ಮರ್ಯಾದೆಯನ್ನೂ ತೆಗೆದಿರುವ ಘಟನೆ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

"ದಿ ಕಲರ್ ಆಫ್ ಟೊಮೆಟೋ" ಚಿತ್ರ ನಿರ್ಮಾಪಕನ ವಿರುದ್ಧ ಮಹಿಳೆ ಅತ್ಯಾಚಾರ ದೂರ ದಾಖಲಿಸಿದ್ದಾರೆ. ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದವಳ ಮೇಲೆ ನಿರ್ಮಾಪಕ ಅತ್ಯಾಚಾರ ಎಸಗಿದ್ದಾನೆ. ಸಿನಿಮಾ ಮಾಡೋದಾಗಿ 75 ಲಕ್ಷ ಹಣ ಪಡೆದುಕೊಂಡಿದ್ದನಂತೆ ಸಿನಿಮಾ ರಿಲೀಸ್ ಆದ್ಮೆಲೆ ಬಿಗ್ ಹಿಟ್ ಆಗುತ್ತೆ 75 ಲಕ್ಷದ ಬದಲಾಗಿ 1.5 ಕೋಟಿ ಕೊಡ್ತಿನಿ ಎಂದು ನಂಬಿಸಿದ್ದನಂತೆ. ಈ ಮೂಲಕ ನಟನೆಗೆ ಅವಕಾಶ ಕೊಡೋದಾಗಿ ನಿರ್ಮಾಪಕ ವಂಚನೆ ಮಾಡಿದ್ದಾನೆ. The colour of tomoto ಎಂಬ ವಿಲಕ್ಷಣ ಹೆಸರಿನ ಚಿತ್ರ ನಿರ್ಮಾಪಕ ಈ ಕೃತ್ಯ ಎಸಗಿದ್ದು, 50 ಹಾಗೂ ದಿ ಕಲರ್ಸ್ ಆಫ್ ಟೊಮೋಟೋ ಎಂಬ ಎರಡು ಚಿತ್ರ ಮಾಡ್ತಿನಿ ಹೀಗಾಗಿ 75 ಲಕ್ಷ ಬೇಕು ಎಂದು ನಿರ್ಮಾಪಕ ಕುಮಾರ್ ಹೇಳಿದ್ದನಂತೆ.

ಚಿತ್ರದಲ್ಲಿ ಅವಕಾಶ ಸಿಗುತ್ತೆ ಹಾಗು ಕೊಟ್ಟ ಹಣ ಡಬಲ್ ಆಗಿ ರಿಟರ್ನ್ ಬರುತ್ತೆ ಎಂದು ನಂಬಿದ್ದ ಮಹಿಳೆ ಹಣ ನೀಡಿದ್ದಳು. ಸಿನೆಮಾದಲ್ಲಿ ಚಾನ್ಸ್ ಕೊಡಿಸ್ತಿನಿ, ನಂತರ ಬಾಳು ಕೊಡ್ತಿನಿ ಎಂದು ನಂಬಿಸಿದ ಕುಮಾರ್ ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನಂತೆ.

ಸ್ವಲ್ಪ ದಿನಗಳ ಬಳಿಕ ಮಹಿಳೆ ಹಣ ವಾಪಾಸ್ ಕೇಳಿದ್ದಾಳೆ. ಒಂದಷ್ಟು ದಿನ ಸಬೂಬು ಹೇಳಿಕೊಂಡೇ ತಿರುಗಾಡುತ್ತಿದ್ದ ನಿರ್ಮಾಪಕ ಕುಮಾರ್ ಬಳಿಕ ಯಾವಾಗ ಹಣಕ್ಕಾಗಿ ಮಹಿಳೆ ಒತ್ತಡ ಹಾಕಿದ್ಲೋ ತನ್ನ ಕಚೇರಿಗೆ ಕರೆಸಿಕೊಂಡಿದ್ದಾನೆ. ಚೆಕ್ ಕೊಡ್ತಿನಿ ಬಾ ಎಂದು ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನಂತೆ. ಸಂತ್ರಸ್ತ ಮಹಿಳೆ ಹೀಗೆಂದು ದೂರು ನೀಡಿದ್ದಾಳೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.